ಶ್ರೀರಂಗಪಟ್ಟಣ: ಮೈತ್ರಿ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿಗೆ ಕ್ರಮಸಂಖ್ಯೆ ಹಂಚುವ ಮುನ್ನವೇ ತಂದೆ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಪ್ರಚಾರದ ವೇಳೆ ನಿಖೀಲ್ರ ಕ್ರಮ ಸಂಖ್ಯೆ ನಂ.1 ಆಗಿದೆ ಎಂದಿದ್ದರು. ಬಳಿಕ, ಚುನಾವಣಾಧಿಕಾರಿಗಳು ಕ್ರಮಸಂಖ್ಯೆ ನೀಡಿದ್ದು 1 ಆಗಿತ್ತು. ಆದರೆ, ಚುನಾವಣೆ ಬಳಿಕ, ಮತ್ತೂಂದು ವಿಷಯ ಬೆಳಕಿಗೆ ಬಂದಿದೆ.
-ಅದೇನೆಂದರೆ, ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ನಿಖೀಲ್ ಕುಮಾರಸ್ವಾಮಿ ಮಂಡ್ಯ ಸಂಸದರಾಗಿರುವುದು!. ಹೀಗೊಂದು ಬೋರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪಕ್ಷೇತರ ಅಭ್ಯರ್ಥಿ ಬೆಂಬಲಿಗರ ನಿದ್ದೆಗೆಡಿಸಿದೆ. ಅಲ್ಲದೇ, ಈ ಬೋರ್ಡ್ ಜಿಲ್ಲೆಯ ಮತದಾರರಲ್ಲಿ ಭಾರೀ ಸಂಚಲನ ಮೂಡಿಸಿದ್ದು ಕಾರಣ ಏನಿರಬಹುದು ಎಂಬುದು ಎಲ್ಲರಲ್ಲಿಯೂ ಕುತೂಹಲ ಮೂಡಿಸಿದೆ.
ವೈರಲ್ ಆದ ಸುದ್ದಿ:ರಾಜ್ಯದಲ್ಲಿ ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಚುನಾವಣೆ ಮತದಾನ ಏ.18ರಂದು ಮುಗಿದಿದೆ. ಆದರೆ, ಫಲಿತಾಂಶ ಪ್ರಕಟಕ್ಕೂ ಮುನ್ನವೇ ಮೈತ್ರಿ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಮಂಡ್ಯ ಸಂಸದ ಎನ್ನುವ ಬೋರ್ಡ್ ಕಾಣಿಸಿಕೊಂಡಿದೆ.
ಕರ್ನಾಟಕ ಜೆಡಿಎಸ್ ಫೇಸ್‌ಬುಕ್‌ನಲ್ಲಿ ನಿಖೀಲ್ ಮಂಡ್ಯ ಸಂಸದರಾಗಿರುವುದು ವೈರಲ್ ಆಗಿದೆ. ಇದು ಜೆಡಿಎಸ್ ಮುಖಂಡರು ಹಾಗೂ ಅವರ ಅಭಿಮಾನಿಗಳ ಉಡುಗೊರೆ ಎಂದು ತಿಳಿಸಲಾಗಿದೆ.
ಪಟಾಕಿ ಸಿಡಿಸಿದ್ದರು:ಇದಲ್ಲದೆ ಮತದಾನ ಮುಗಿದ ನಂತರ ಜೆಡಿಎಸ್ ಕೆಲವು ಮುಖಂಡರು ಮಂಡ್ಯದಲ್ಲಿ ಈಗಾಗಲೇ ನಿಖೀಲ್ ಕುಮಾರಸ್ವಾಮಿ ಅವರು ಗೆದ್ದು ಸಂಸದರಾಗಿದ್ದಾರೆ ಎಂದು ಪಟ್ಟಣ ಪುರಸಭಾ ವ್ಯಾಪ್ತಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದೂ ಆಗಿದೆ
ಗಂಜಾಂ ಮಂಜು