ನಟಿ ಮಿಲನಾ ನಾಗರಾಜ್ ಸದ್ಯ “ಫಾರ್ ಫಾರ್ ರಿಜಿಸ್ಟ್ರೇಷನ್ ಹೊಸಚಿತ್ರಕ್ಕಾಗಿ ತುಳು ಕಲಿಕೆ ‘ ಚಿತ್ರದ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ. ಇನ್ನೊಂದು ವಿಶೇಷವೆಂದರೆ, ಮಿಲನಾ ಈ ಚಿತ್ರಕ್ಕಾಗಿ ತುಳು ಭಾಷೆ ಕಲಿಯುತ್ತಿದ್ದಾರಂತೆ! ಹೌದು. “ಫಾರ್ ರಿಜಿಸ್ಟ್ರೇಷನ್’ ದಕ್ಷಿಣ ಕನ್ನಡ ಶೈಲಿಯ ಚಿತ್ರವಂತೆ. ಹಾಗಾಗಿ ಚಿತ್ರದ ಪಾತ್ರ ಆದಷ್ಟು ನೈಜವಾಗಿ ಮೂಡಿಬರಬೇಕೆಂಬ ಕಾರಣಕ್ಕೆ
ಮಿಲನಾ ನಾಗರಾಜ್ ತುಳು ಭಾಷೆ ಕಲಿಕೆಗೆ ಮುಂದಾಗಿದ್ದಾರೆ.
ಇಂಥದ್ದೊಂದು ಪ್ರಯತ್ನದ ಬಗ್ಗೆ ಮಾತನಾಡುವ ಮಿಲನಾ, “ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಇದರಲ್ಲಿ ನಾನು ಮಂಗಳೂರು ಮೂಲದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ. ತುಂಬ ಧೈರ್ಯವಂತೆ ಹುಡುಗಿಯ ಪಾತ್ರವಿದು.
ಬೆಂಗಳೂರಿನಲ್ಲಿ ಕೆಲಸ ಮಾಡುವ ಈಕೆ ತನ್ನ ಗಂಡನೊಂದಿಗೆ ಮಂಗಳೂರಿಗೆ ಬರುತ್ತಾಳೆ. ಸಿನಿಮಾದ ಬಹುಭಾಗ ದಕ್ಷಿಣ ಕನ್ನಡದ ಸುತ್ತಮುತ್ತವೇ ನಡೆಯಲಿದೆ.
ಇದನ್ನೂ ಓದಿ:ಸರಳವಾಗಿ ನಡೆದ ನಟ ಯಶ್ ಬರ್ತ್‌ಡೇ
ಇದಕ್ಕಾಗಿ ನಾನು ತುಳು ಕಲಿತಿದ್ದೇನೆ. ಸಿನಿಮಾದ ನಾಯಕ ಪೃಥ್ವಿ ಮಂಗಳೂರಿನವರಾದ ಕಾರಣ ಅವರೊಂದಿಗೆ ಈ ಭಾಷೆ ಕಲಿಯಲು ಶುರು ಮಾಡಿದೆ’ ಎನ್ನುತ್ತಾರೆ.