Advertisement

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ -ಪಾಟ್ನಾ ಪೈರೇಟ್ಸ್‌ ಪಂದ್ಯ ರೋಚಕ ಟೈ

10:45 PM Oct 23, 2022 | Team Udayavani |

ಬೆಂಗಳೂರು: ಮತ್ತೊಮ್ಮೆ ಭಾರೀ ಹಿನ್ನಡೆಯಿಂದ ಮುನ್ನುಗ್ಗಿ ಬಂದ ಬೆಂಗಳೂರು ಬುಲ್ಸ್‌ ಸ್ವಲ್ಪದರಲ್ಲೇ ಗೆಲು ವನ್ನು ತಪ್ಪಿಸಿಕೊಂಡಿದೆ. ಪಾಟ್ನಾ ಪೈರೇಟ್ಸ್‌ ಎದುರಿನ ರವಿವಾರದ ಪ್ರೊ ಕಬಡ್ಡಿ ಪಂದ್ಯ ವನ್ನು 31-31 ಸಮಬಲದಲ್ಲಿ ಮುಗಿಸಿದೆ.

Advertisement

ರೈಡರ್‌ ಭರತ್‌ ಮತ್ತೂಮ್ಮೆ ಬುಲ್ಸ್‌ ಪಾಲಿಗೆ ಆಪತಾºಂಧವರಾದರು. ಅವರು ಗರಿಷ್ಠ 11 ಅಂಕ ಗಳಿಸಿ ಕೊಟ್ಟರು. ಇವರನ್ನು ಹೊರತುಪಡಿಸಿದರೆ 4 ಅಂಕ ಸಂಪಾದಿಸಿದ ನೀರಜ್‌ ನರ್ವಾಲ್‌ ಅವರದೇ ಅತ್ಯುತ್ತಮ ಸಾಧನೆ.

ಪಾಟ್ನಾ ತಂಡದಲ್ಲಿ ಆಲ್‌ರೌಂಡರ್‌ ರೋಹಿತ್‌ ಗುಲಿಯ ಅವರ ಆಟ ಅಮೋಘ ಮಟ್ಟದಲ್ಲಿತ್ತು. ಅವರು 8 ಅಂಕ ತಂದಿತ್ತರು. ರೈಡರ್‌ ಸಚಿನ್‌ 6, ಡಿಫೆಂಡರ್‌ ಮನೀಷ್‌ 4, ಆಲ್‌ರೌಂಡರ್‌ ಮೊಹಮ್ಮದ್‌ ರೇಝ 4 ಅಂಕ ಗಳಿಸಿದರು.
ಬುಲ್ಸ್‌ ತಿರುಗೇಟಿನಿಂದಾಗಿ ಪಾಟ್ನಾದ ಎರಡನೇ ಗೆಲುವಿನ ಅವಕಾಶ ತಪ್ಪಿ ಹೋಯಿತು.

 

Advertisement

Udayavani is now on Telegram. Click here to join our channel and stay updated with the latest news.

Next