Advertisement
ಕೋವಿಡ್ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಈಗಾಗಲೇ ಘೋಷಿಸಿದೆ. ಕಳೆದ ವರ್ಷ ಏಪ್ರಿಲ್- ಜುಲೈ ನಡುವೆ ಸರ್ಕಾರ 9.47 ಲಕ್ಷ ಕೋಟಿ ರೂ.ಗಳನ್ನು ಒಟ್ಟು ವೆಚ್ಚ ಮಾಡಿತ್ತು. ಈ ಬಾರಿ 10.54 ಲಕ್ಷ ಕೋಟಿ ರೂ.ಗಳನ್ನು ವ್ಯಯಿಸಿದೆ. ಈ ವೆಚ್ಚದ ಬಹುಪಾಲನ್ನು ವೇತನ ನೀಡಲು, ನಿಯಮಿತ ಖರ್ಚುಗಳನ್ನು ನಿಭಾಯಿಸಲು ಬಳಸಿಕೊಳ್ಳಲಾಗಿದೆ. ಆತ್ಮನಿರ್ಭರ ಭಾರತ ಪ್ಯಾಕೇಜ್‌ನಲ್ಲಿ ಚುಚ್ಚುಮದ್ದಿನ ಪೂರೈಕೆ, ಬಡವರಿಗೆ ಮತ್ತು ನಿರ್ಗತಿಕರಿಗೆ ನಗದು ವರ್ಗಾವಣೆ ಮತ್ತು ಮಧ್ಯಮ ಅವಧಿಯ ರಚನಾತ್ಮಕ ಯೋಜನೆಗಳನ್ನು ಹೆಚ್ಚು ಪ್ರೋತ್ಸಾಹಿಸಲಾಗಿದೆ ಎಂದು ಹೇಳಲಾಗಿದೆ. Advertisement
ಪ್ಯಾಕೇಜ್ ಘೋಷಿಸಿಯೂ ಒಟ್ಟು ವೆಚ್ಚ ಕೇವಲ ಶೇ. 11 ಜಾಸ್ತಿ
10:51 PM Sep 03, 2020 | mahesh |