Advertisement

ನೀರಕಟ್ಟೆ ಪವರ್‌ ಪ್ರಾಜೆಕ್ಟ್ ಒಳಗೆ ನುಗ್ಗಿದ ನೇತ್ರಾವತಿ ನದಿ ನೀರು

12:58 PM Aug 10, 2019 | Naveen |

ಉಪ್ಪಿನಂಗಡಿ: ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಜಲ ವಿದ್ಯುತ್‌ ಉತ್ಪಾದನಾ ಘಟಕವಾದ ನೀರಕಟ್ಟೆ ಸಾಗರ್‌ ಪವರ್‌ ಪ್ರಾಜೆಕ್ಟ್ ಒಳಗಡೆಗೆ ನುಗ್ಗಿದ್ದು, ಭಾಗಶಃ ಮುಳುಗಡೆ ಆಗಿದೆ.

Advertisement

ನೇತ್ರಾವತಿಯಲ್ಲಿ ಭಾರೀ ಪ್ರಮಾಣದಲ್ಲಿ, ಪ್ರವಾಹದ ರೀತಿಯಲ್ಲಿ ನೀರು ಹರಿದು ಬರುತ್ತಿದ್ದು, ಸಂಜೆ 4 ಗಂಟೆಯ ಹೊತ್ತಿಗೆ ಬಂದ ನೀರಿನ ಪ್ರವಾಹ ಒಮ್ಮೆಗೆ ನಿರೀಕ್ಷೆ ಮೀರಿ ಹರಿದು ಬಂದು ಘಟಕದ ಹಿಂದಿನ ಬಾಗಿಲ ಮೂಲಕ ಒಳಗಡೆಗೆ ನುಗ್ಗಿದ್ದು, ಹೀಗಾಗಿ ಘಟಕದ ಒಳಗಡೆ ನೀರು ಸೇರಿಕೊಂಡಿದೆ.

ನೆರೆ ನೀರು ಘಟಕದ ಒಳಗಡೆ ಇರುವ ವಿದ್ಯುತ್‌ ಉತ್ಪಾದನೆಯ ಯಂತ್ರವನ್ನು ಆವರಿಸಿದ್ದು, ಇತರೇ ಯಂತ್ರ, ಪರಿಕರಗಳು ಹಾನಿಗೊಂಡಿದೆ. ಘಟಕದ ಒಳಗಡೆ ನೀರು ತುಂಬಿ ಹೋಗಿ ಡ್ಯಾಂ ಭಾಗಶಃ ಮುಳುಗಡೆಯಾದಂತಾಗಿದೆ.

ಸಿಬಂದಿ ಪಾರು
ಘಟಕದ ಒಳಗಡೆ ಹಗಲು ಪಾಲಿಯ 6 ಮಂದಿ ಎಂಜಿನಿಯರ್‌ ಮತ್ತು 4 ಇತರ ಸಿಬಂದಿ ಸೇರಿದಂತೆ ಒಟ್ಟು 10 ಮಂದಿ ಕೆಲಸದಲ್ಲಿ ನಿರತರಾಗಿದ್ದರು. ಒಳಗಡೆ ನೀರು ಬರುವುದನ್ನು ಗಮನಿಸಿ ಮೇಲಕ್ಕೆ ಏರಿ ಬಂದು ಪ್ರಾಣ ರಕ್ಷಿಸಿಕೊಂಡಿದ್ದಾರೆ ಎಂದು ಘಟಕದ ಸಾರ್ವಜನಿಕ ಸಂಪರ್ಕಾಧಿಕಾರಿ ಮಹಮ್ಮದ್‌ ಸಗೀರ್‌ ಅಹಮದ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next