ವಿಜಯಪುರ: ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಪತ್ರಿಕಾಗೋಷ್ಠಿಗೆ ಸ್ಥಳಕ್ಕೆ ನುಗ್ಗಿದ ಕೆಲವರು ಘೇರಾವ್ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಜರುಗಿತು. ಜಿಲ್ಲೆಯ ನೀರಾವರಿ ವಿಷಯದಲ್ಲಿ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮ ವಿಷಯವಾಗಿ ಎಂ.ಬಿ. ಪಾಟೀಲ ವಿರುದ್ಧ ಅನಗತ್ಯವಾಗಿ ಹೇಳಿಕೆ ನೀಡುತ್ತಿದ್ದೀರಿ ಎಂದು ಧಿಕ್ಕಾರ ಕೂಗಿದರು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಗೊಂದಲ ವಾತಾವರಣ ನಿರ್ಮಾಣವಾಯಿತು.
ಹುಚ್ಚ ಹುಚ್ಚ ಎಂದು ಘೋಷಣೆ ಕೂಗುತ್ತ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಹೊಟೇಲ್ ಕೋಣೆಗೆ ಏಕಾಏಕಿ ನುಗ್ಗಿದ ನೂರಾರು ಜನ ಪ್ರತಿಭಟನಾಕಾರರು ಟೇಬಲ್ ಗುದ್ದಿ ಏರು ಧ್ವನಿಯಲ್ಲಿ ಮಾತನಾಡಿದರು. ಈ ಹಂತದಲ್ಲಿ ಸುದ್ದಿ ತಿಳಿದು ಎಎಸ್ಪಿ ನ್ಯಾಮಗೌಡ, ಡಿಎಸ್‌ಪಿ ಅಶೋಕ ನೇತೃತ್ವದಲ್ಲಿ ಸ್ಥಳಕ್ಕಾಗಮಿಸಿದ
ಪೊಲೀಸರು ಪ್ರತಿಭಟನಾಕಾರರನ್ನು ಹೊರ ಹಾಕಿದರು.
ಈ ಹಿಂದೆ ಕೋರವಾರ ಗ್ರಾಮದಲ್ಲೂ ಇದೇ ರೀತಿ ನನ್ನ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದರು. ಇಂಥ ಯಾವುದೇ ಬೆದರಿಕೆಗೆ ನಾನು ಜಗ್ಗುವುದಿಲ್ಲ, ಪ್ರಜಾಪ್ರಭುತ್ವದಲ್ಲಿ ಯಾರೂ ಪ್ರಶ್ನಾತೀತರಲ್ಲ. ಪ್ರಶ್ನಿಸಿದವರ ಮೇಲೆ ಹಲ್ಲೆ ಮಾಡಿಸಲು ಮುಂದಾದರೆ ನಾನು ಬೆದರುವ ವ್ಯಕ್ತಿಯಲ್ಲ.
.
ಎ.ಎಸ್.ಪಾಟೀಲ ನಡಹಳ್ಳಿ