Advertisement
ಬಸವನ ಬಾಗೇವಾಡಿ ತಾಲೂಕಿನ ಮುತ್ಯಾನ ಕಟ್ಟಿ ಎಂದೇ ಪ್ರಸಿದ್ಧಿ ಪಡೆದಿರುವ ಸುಕ್ಷೇತ್ರ ಜಾಯವಾಡಗಿ ಗ್ರಾಮ ಚಿಕ್ಕದಾಗಿದ್ದರೂ ಗುರು-ಶಿಷ್ಯರ ಪ್ರಭಾವದಿಂದ ಪ್ರಸಿದ್ಧಿ ಪಡೆದಿದೆ. ಕೀರ್ತಿ ಚಿಕ್ಕದಾದರೂ ಮೂರ್ತಿ ದೊಡ್ಡದು ಎಂಬ ಮಾತಿನಂತೆ ಜಾಯವಾಡಗಿ ಎಂಬ ಹೆಸರು ಗುರುವಿನ ಪ್ರಭಾವದಿಂದ ತನ್ನದೆಯಾದ ಶಕ್ತಿ ಬೀರಿದೆ. ಪ್ರತಿ ವರ್ಷ ಯುಗಾದಿಯಂದು ಸುತ್ತಲಿನ ಗ್ರಾಮದ ಜನರು ಸೇರಿ ಗುರು-ಶಿಷ್ಯರಾದ ಶ್ರೀ ಸೋಮನಾಥ ಹಾಗೂ ಶ್ರೀ ಶಿವಶರಣ ಶಿವಪ್ಪ ಮುತ್ಯಾನವರ ಜಾತ್ರೆಯನ್ನು ನಡೆಸಿಕೊಂಡು ಬಂದಿದ್ದಾರೆ. ಬೇಡಿದವರಿಗೆ ಬೇಡಿದ್ದನ್ನು ಕರುಣಿಸುವ ಹಾಗೂ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೈವ ಇವರು.
Related Articles
Advertisement
ಪಂಚ ಗ್ರಾಮದ ದೇವಸ್ಥಾನ ಕಮಿಟಿಜಾಯವಾಡಗಿ, ಕಾನ್ನಾಳ, ಬ್ಯಾಕೋಡ, ಸೋಲವಾಡಗಿ ಹಾಗೂ ಪಕ್ಕದ ಮುದ್ದೇಬಿಹಾಳ ತಾಲೂಕಿನ ಅಗಸಬಾಳ ಗ್ರಾಮದವರು ದೇವಸ್ಥಾನದ ಕಮಿಟಿಯಲ್ಲಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ದೇವಸ್ಥಾನದ ಏಳ್ಗೆಗೆ ಶ್ರಮಿಸುತ್ತಿದ್ದಾರೆ. ದೇವಸ್ಥಾನಕ್ಕೆ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಸೇರಿದಂತೆ ಮಹಾರಾಷ್ಟ್ರದ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಜಾತ್ರೆಯಲ್ಲಿಂದು
ಏ.5ರಂದು ಯುಗಾದಿ ಅಮಾವಾಸ್ಯೆ ದಿನ ಕಾನ್ನಾಳ ಗ್ರಾಮದ ಸದ್ಭಕ್ತರಿಂದ ಕಳಸದ ಆಗಮನ. ಜಾಯವಾಡಗಿ ಗ್ರಾಮಸ್ಥರಿಂದ ನಂದಿಕೋಲ ಮೆರವಣಿಗೆಯೊಂದಿಗೆ ಮಧ್ಯಾಹ್ನ 12ಗಂಟೆಗೆ ಕಳಸವು ಶಿಖರಕ್ಕೆರುವುದು. ನಂತರ ಅನ್ನಸಂತರ್ಪಣೆ, ರಾತ್ರಿ 10:30ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂಬ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.