Advertisement
ಉರುಳಿದ ವಿದ್ಯುತ್ ಕಂಬಗುರುಪುರ: ಕೈಕಂಬ ವ್ಯಾಪ್ತಿಯ ಹಲವು ಕಡೆಗಳಲ್ಲಿ ತಂತಿಕಂಬಗಳು ಉರುಳಿ ಬಿದ್ದಿದ್ದು, ಮೆಸ್ಕಾಂ ಸಿಬಂದಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವು ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾ ಗಿದೆ.
Related Articles
Advertisement
ನೀರಿನ ಮಟ್ಟ ಏರಿಕೆಪೊಳಲಿ: ಇಲ್ಲಿನ ಫಲ್ಗುಣಿ ನದಿಯಲ್ಲಿ ನೀರಿನ ಮಟ್ಟ ಏರಿದ್ದು, ಅಪಾಯದ ಮಟ್ಟ ತಲುಪುತ್ತಿದೆ. ಇದೇ ರೀತಿ ಮಳೆ ಮುಂದು ವರಿದರೆ ತಗ್ಗು ಪ್ರದೇಶ ಜಲಾವೃತಗೊಳ್ಳುವ ಭೀತಿ ಎದುರಾಗಿದೆ. ಆಡ್ಡೂರು ಸಮೀಪ ಫಲ್ಗುಣಿ ನದಿಗೆ ನಿರ್ಮಿಸಿರುವ ಸೇತುವೆ ಸಮೀಪ ನೀರಿನ ಪ್ರಮಾಣ ಏರಿದ್ದು, ಇಲ್ಲಿನ ಪ್ರದೇಶ ಗಳು ಜಲಾವೃತಗೊಳ್ಳುವ ಸಾಧ್ಯತೆ ಇದೆ. ಇಲ್ಲಿ ಪ್ರತಿವರ್ಷ ನೆರೆಹಾವಳಿ ಉಂಟಾಗುತ್ತಿರು ವುದು ಸಾಮಾನ್ಯವಾಗಿದೆ. ಇಲ್ಲಿನ ಅಡಿಕೆ ತೋಟ, ಗದ್ದೆಗಳು ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗುವ ಭೀತಿ ಇದೆ. ಇದೇ ಪರಿ ಸ್ಥಿತಿ ಗುರುಪುರದಲ್ಲೂ ಎದುರಾಗಿದ್ದು, ಇಲ್ಲಿನ ತಗ್ಗು ಪ್ರದೇಶಗಳಿಗೂ ನೆರೆಭೀತಿ ಉಂಟಾಗಿದೆ. ಇನ್ನು ಕಾಜಿಲ ಮಳಲಿ ರಸ್ತೆಯ ಸಾಧೂರು ಪಟ್ಲ ಎಂಬಲ್ಲಿ ನೆರೆ ಪರಿಸ್ಥಿತಿ ಉಂಟಾಗಿದ್ದು, ಬಯಲು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ಒಟ್ಟಾರೆ ಮಳೆ ಇದೇ ರೀತಿ ಮುಂದುವರಿದರೆ ಅಪಾಯ ಉಂಟಾಗುವ ಸಾಧ್ಯತೆ ಇದ್ದು, ಜಿಲ್ಲಾ ಡಳಿತ ಮುಂಜಾಗ್ರತೆ ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಉಳ್ಳಾಲ: ನೆರೆಭೀತಿ
ಉಳ್ಳಾಲ: ಉಳ್ಳಾಲ ಸಹಿತ ಸುತ್ತ ಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಧಾರಾಕಾರವಾಗಿ ಮಳೆ ಸುರಿದಿದ್ದು, ಉಳ್ಳಾಲ ವ್ಯಾಪ್ತಿಯ ನೇತ್ರಾವತಿ ತಟದಲ್ಲಿ ನದಿ ನೀರು ಅಪಾಯಮಟ್ಟದಲ್ಲಿ ಹರಿಯುತ್ತಿದ್ದು ನೆರೆಭೀತಿಯಲ್ಲಿದೆ. ಬೆಳಗ್ಗೆ ಚೆಂಬುಗುಡ್ಡೆ ಸಮೀಪದ ಕೆರೆಬೈಲ್ ಬಳಿ ರಸ್ತೆಗೆ ಮರ ಬಿದ್ದು ತೊಕ್ಕೊಟ್ಟಿನಿಂದ ದೇರಳಕಟ್ಟೆ ಸಂಚರಿ ಸುವ ವಾಹನಗಳಳ ಸಂಚಾರದಲ್ಲಿ ವ್ಯತ್ಯಯ ವಾಗಿದ್ದು ಬಳಿಕ ಮರ ತೆರವು ಕಾರ್ಯ ನಡೆಯಿತು.ಉಳ್ಳಾಲದ ನೇತ್ರಾವತಿ ನದಿ ತಟಗಳಾದ ಕಲ್ಲಾಪು, ಆಡಂಕುದ್ರು, ಮುನ್ನೂರು ಉಳಿಯ, ಅಂಬ್ಲಿಮೊಗರು, ಹರೇಕಳ ಪಾವೂರು, ಸಜಿಪ ಪ್ರದೇಶಗಳಲ್ಲಿ ನೇತ್ರವಾತಿ ನದಿ ಅಪಾಯಮಟ್ಟದಲ್ಲಿ ಹರಿಯುತ್ತಿದ್ದು, ಶುಕ್ರವಾರ ಸಂಜೆ ವೇಳೆಗೆ ಕಲ್ಲಾಪು ಪ್ರದೇಶಕ್ಕೆ ತಹಶೀಲ್ದಾರ್ ಗುರುಪ್ರಸಾದ್ ಭೇಟಿ ನೀಡಿ ತಟದ ಜನರಿಗೆ ಎಚ್ಚರಿಕೆಯಲ್ಲಿರುವಂತೆ ಮಾಹಿತಿ ನೀಡಿದರು. ತೊಕ್ಕೊಟ್ಟು ನೂತನ ಫ್ಲೈಓವರ್‌ನ ಮಧ್ಯ ಭಾಗದಲ್ಲಿ ಸಣ್ಣದೊಂದು ಬಿರುಕು ಕಂಡಿದ್ದು, ಕೆಲವು ಕಾಲ ಸಂಚಾರವನ್ನು ಸ್ಥಗಿತ ಗೊಳಿಸಲಾಯಿತು. ಸ್ಥಳಕ್ಕೆ ಎಂಜಿನಿಯರ್‌ಗಳು ಮತ್ತು ಪರಿಣತರು ಆಗಮಿಸಿ ಸಂಚಾರಕ್ಕೆ ಹಸರು ನಿಶಾನೆ ನೀಡಿದ ಬಳಿಕ ಸಂಚಾರ ಆರಂಭವಾಯಿತು. ತಾರಿಪ್ಪಾಡಿ ಸೈಟ್‌ನ ಮಾರ್ಟಿನ್ ಪೆರಾವೋ ಎಂಬವರ ಮನೆಗೆ ಮರವೊಂದು ಉರುಳಿ ಬಿದ್ದ ಪರಿಣಾಮ ಅಪಾರ ಹಾನಿ ಸಂಭವಿಸಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ. ನಡುಪದವು ಕಲ್ಲುಗುಂಡಿಯ ಖಾದರ್ ಅವರ ಮನೆ ಬಳಿಯ ಮರವೊಂದು ವಿದ್ಯುತ್ ತಂತಿಗೆ ಉರುಳಿ ಬಿದ್ದ ಪರಿಣಾಮ ನಾಲ್ಕು ವಿದ್ಯುತ್ ಕಂಬಗಳು ಧರೆಗುರಳಿದೆ. ಸುಧಾಕರ್ ಅವರ ಮನೆ ಸಮೀಪದ ಹಲಸಿನ ಮರವೊಂದು ರಾತ್ರಿ ಗಾಳಿಗೆ ಮುರಿದು ಬಿದ್ದಿದೆ. ಪಟ್ಟೋರಿಯ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನದ ಮುಂಭಾಗದ ಆವರಣ ಗೋಡೆ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಕೊಣಾಜೆ ದೊಡ್ಡುಗುಳಿಯ ಗೋಪಾಲ್ ಅವರ ಮನೆ ಸಮೀಪದ ಗುಡ್ಡದ ಮಣ್ಣು ಕುಸಿದು ಮನೆಗೆ ಹಾನಿ ಸಂಭವಿಸಿದೆ. ಕೋಟೆಕಾರು ಪ. ಪಂ. ಸದಸ್ಯ ಅಹ್ಮದ್ ಬಾವ ಅವರ ಅಜ್ಜಿನಡ್ಕದಲ್ಲಿರುವ ಮನೆಯ ಹಿಂಭಾಗದಲ್ಲಿದ್ದ ತೆರೆದ ಬಾವಿ ಸಂಪೂರ್ಣ ಕುಸಿದು ಬಿದ್ದಿದೆ. ಬಾವಿಯಲ್ಲಿ ಕಲ್ಲು ಮಣ್ಣು ತುಂಬಿ ಸಂಪೂರ್ಣ ಮುಚ್ಚಲ್ಪಟ್ಟು ಅಪಾರ ನಷ್ಟವುಂಟಾಗಿದ್ದಲ್ಲದೆ, ಮನೆಮಂದಿಯಲ್ಲಿ ಆತಂಕಕ್ಕೂ ಕಾರಣವಾಗಿದೆ. ಕೋಟೆಕಾರು ಪ.ಪಂ.ವ್ಯಾಪ್ತಿಯ ಬಗಂಬಿಲದಿಂದ ಪಾನೀರ್‌ವರೆಗೆ 11ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮೆಸ್ಕಾಂ ಸಿಬಂದಿ ದುರಸ್ತಿ ಕಾರ್ಯ ನಡೆಸಿದ್ದಾರೆ. ಇರಾ ಕುಂಡಾವು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆವರಣ ಗೋಡೆ ಕುಸಿದು ಬಿದ್ದಿದ್ದು, ಶಾಸಕ ಯು.ಟಿ. ಖಾದರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.