Advertisement
ಹೈಕೋರ್ಟ್ ವಿಶೇಷ ವಿಭಾಗೀಯ ನ್ಯಾಯಪೀಠ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿತು.
ರಸ್ತೆಯಲ್ಲಿ ಕಾಣಿಸಿಕೊಂಡ ಸಾರ್ವಜನಿಕರಿಗೆ ಪೊಲೀಸರು ಲಾಠೀಚಾರ್ಜ್ ಮಾಡುತ್ತಿರುವ ವಿಚಾರದಲ್ಲಿ ನಿಯಂತ್ರಣ ವಹಿಸಬೇಕಿದೆ. ಲಾಠೀಚಾರ್ಜ್ ನಡೆಸುವ ಬಗ್ಗೆ ರಾಜ್ಯವ್ಯಾಪಿ ಅನ್ವಯವಾಗುವಂತೆ ನಿರ್ದಿಷ್ಟ ಮಾರ್ಗಸೂಚಿ ರಚಿಸಿ, ಸುತ್ತೋಲೆ ಹೊರಡಿಸಬೇಕು ಎಂದು ಪೊಲೀಸ್ ಮಹಾನಿರ್ದೇಶಕರಿಗೆ ಹೈಕೋರ್ಟ್ ಸೂಚಿಸಿದೆ. ಲಾಕ್‌ಡೌನ್‌ನಿಂದ ಅಂಗನವಾಡಿಗಳು ಮುಚ್ಚಿರುವ ಕಾರಣ ಮಕ್ಕಳು ಮತ್ತು ಗರ್ಭಿಣಿಯರಿಗೆ ಬಿಸಿಯೂಟ ವಿತರಿಸಲು ಮತ್ತು ಲಸಿಕೆ ಹಾಕುವುದನ್ನು ಮುಂದುವರಿ ಸಬೇಕು. ಬಡವರು ಮತ್ತು ನಿರ್ಗತಿಕರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಆಹಾರ ಪೂರೈಸಲಾಗುತ್ತಿದೆ. ಕ್ಯಾಂಟೀನ್ ಮುಂದೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಕೋವಿಡ್ 19 ಹರಡುವ ಸಾಧ್ಯತೆಯಿದೆ.
Related Articles
Advertisement
ಕಾಳಸಂತೆ ತಡೆಗೆ ಕ್ರಮಇನ್ನೂ ಬಡವರು, ನಿರ್ಗತಿಕರು ಮತ್ತು ಕೂಲಿ ಕಾರ್ಮಿಕರಿಗೆ ಆಹಾರ ಸರಬರಾಜು ಮಾಡುವ ಕುರಿತು ಗ್ರಾಮ ಪಂಚಾಯತ್ ಕ್ರಮ ಕೈಗೊಳ್ಳಬೇಕು. ಪಡಿತರ ಚೀಟಿ ಹೊಂದಿದವರಿಗೆ ಆಹಾರ ಧಾನ್ಯಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಪಡಿತರ ಚೀಟಿ ಇಲ್ಲದ ಕೂಲಿಕಾರ್ಮಿಕರು ಮತ್ತು ವಲಸೆ ಕಾರ್ಮಿಕರಿಗೂ ಆಹಾರ ಒದಗಿಸಬೇಕು. ಆಹಾರ ಧಾನ್ಯ ಕಾಳಸಂತೆ ತಡೆಗೆ ಕ್ರಮ ಕೈಗೊಳ್ಳಬೇಕು. ಬೀದಿ ನಾಯಿಗಳು ಮತ್ತು ಪ್ರಾಣಿಗಳಿಗೂ ಆಹಾರ ಒದಗಿಸಬೇಕು. ಈ ವಿಚಾರದಲ್ಲಿ ಸ್ವಯಂಸೇವಾ ಸಂಘಗಳ ನೆರವನ್ನು ಸರಕಾರ ಪಡೆಯಬಹುದು ಎಂದು ಸೂಚಿಸಿದೆ. ಕರ್ತವ್ಯಕ್ಕೆ ಹಾಜರಾಗುವ ಪೌರ ಕಾರ್ಮಿಕರ ಸುರಕ್ಷತೆಗೆ ಯಾವದೇ ಕ್ರಮ ಕೈಗೊಂಡಿಲ್ಲ ಎಂಬ ವಿಚಾರವನ್ನು ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ಅದನ್ನು ಪರಿಗಣಿಸಿದ ನ್ಯಾಯಪೀಠ ಪೌರ ಕಾರ್ಮಿಕರಿಗೆ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. ಅವರಿಗೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು. ವೈದ್ಯರಿಗೂ ಸುರಕ್ಷತ ಉಪಕರಣ ಒದಗಿಸಬೇಕು. ರಾಜ್ಯದಲ್ಲಿರುವ ಕೋವಿಡ್ 19 ಪರೀûಾ ಲ್ಯಾಬ್‌ಗಳ ವಿವರ ನೀಡಬೇಕು ಎಂದು ಸೂಚಿಸಿದ ನ್ಯಾಯಪೀಠ, ಈ ಸೂಚನೆಗಳ ಪಾಲನೆಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಬೇಕು ಎಂದು ಸೂಚಿಸಿ ವಿಚಾರಣೆಯನ್ನು ಎ.3ಕ್ಕೆ ಮುಂದೂಡಿತು.