ಅಮೀನಗಡ: ಭಾರತದಲ್ಲಿ ಭಾವನೆಗಳಿಗೆ ಅಪಾರ ಬೆಲೆಯಿದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಸೂಳೇಭಾವಿ ಗ್ರಾಮದ ರಾಮಯ್ಯಸ್ವಾಮಿ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ಯುವ ಬ್ರಿಗೇಡ್ ವತಿಯಿಂದ ಆಯೋಜಿಸಿದ್ದ ಭಾವನೆಗಳ ಕಿಂದರಿಜೋಗಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತ ಎಂದರೇ ಭಾವನೆ, ರಾಗ, ತಾಳಗಳ ಸುಂದರಗಳ ಸಂಗೀತ. ಅದು ಶುರುವಾಗುವುದೇ ಭಾವನೆಗಳಿಂದ. ಭಾರತ ಭಾವನೆಗಳ ಆಧಾರದ ಮೇಲೆ ಬದುಕಿದ ಅದ್ಭುತ ರಾಷ್ಟ್ರ ಭಾವನೆ ಹಂಚುವುದಕ್ಕೆ ಭಾರತದಲ್ಲಿ ಅನೇಕ ಮಾರ್ಗಗಳಿದ್ದವು ಎಂದರು.
ಭಾವನೆಗಳನ್ನು ಹೊತ್ತು ತರುವ ಪೋಸ್ಟ್ ಮ್ಯಾನ್‌ಗಳ ಸೇವೆ ಗೌರವಿಸುವುದೇ ಭಾವನೆಗಳ ಕಿಂದರಿಜೋಗಿ ಕಾರ್ಯಕ್ರಮದ ಉದ್ದೇಶ. ಅಗತ್ಯಬಿದ್ದಾಗ ದೇಶಕ್ಕಾಗಿ ಪ್ರಾಣ ಕೊಡುವುದಕ್ಕೆ ಸಿದ್ಧವಾಗುವವನೆ ಶ್ರೇಷ್ಠ ದೇಶಭಕ್ತ. ಕೊರೊನಾ ಸೈನಿಕರಾದ ಪೋಸ್ rಮ್ಯಾನ್‌ಗಳ ಸೇವೆ ಅಪಾರ. ಕೊರೊನಾ ಸಂದರ್ಭದಲ್ಲಿ ಕೂಡಾ ಕೊರೊನಾ ನಿರ್ಬಂಧಿತ ಪ್ರದೇಶದಲ್ಲಿ ಕೂಡಾ ಹೋಗಿ ಪೋಸ್ಟ್‌ಮ್ಯಾನ್ ಗಳು ಸೇವೆ ಸಲ್ಲಿಸಿದ್ದಾರೆ ಎಂದರು.
ಇಂದು ಸರ್ಕಾರ ಕೊರೊನಾ ವಾರಿಯರ್ಸ್ ಗಳಿಗೆ ಮೊದಲು ವ್ಯಾಕ್ಸಿನ್ ನೀಡುವ ಕೆಲಸ ಮಾಡಿದೆ. ಆದರೆ, ಮೊದಲ ಹಂತದ ಕೊರೊನಾ ವಾರಿಯರ್ನಲ್ಲಿ ಪೋಸ್ಟ್ ಮ್ಯಾನ್ ಗಳು ಇಲ್ಲ. ಅವರ ಸೇವೆಯನ್ನು ಯಾರು ಗುರುತಿಸಿಲ್ಲ. ಅವರ ಸೇವೆಯನ್ನು ಮರೆತು ಬಿಟ್ಟರು. ಆದರಿಂದ ನಮ್ಮ ಯುವ ಬ್ರಿಗೇಡ್ ವತಿಯಿಂದ ಫೆ. 14ರಂದು ಕೊನೆಯ ವ್ಯಕ್ತಿಯವರೆಗೂ ಸೈನಿಕಂತೆ ಹೋಗಿ ದುಡಿದ ಪೋಸ್ಟ್‌ಮ್ಯಾನ್‌ಗಳಿಗೆ ಗೌರವಿಸುವುದು ಎಂದು ನಿರ್ಧರಿಸಲಾಯಿತು. ಅದಕ್ಕಾಗಿ ಕೊರೊನಾ ಸೈನಿಕರಾದ ಪೋಸ್ಟ್ ಮ್ಯಾನ್ ಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಬ್ರಿಗೇಡ್ ವತಿಯಿಂದ130 ಜನ ಪೋಸ್ಟ್‌ಮ್ಯಾನ್‌ಗಳ ಸೇವೆಯನ್ನು ಗೌರವಿಸಿ ಸನ್ಮಾನಿಸಲಾಯಿತು. ಗುಳೇದಗುಡ್ಡದ ಒಪ್ಪತ್ತೇಶ್ವರ ಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ, ರಾಮಯ್ಯಸ್ವಾಮಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೃಷ್ಣಾ ರಾಮದುರ್ಗ, ಉತ್ತರ ಕರ್ನಾಟಕದ ಯುವ ಬ್ರಿಗೇಡ್ ರಾಜ್ಯ ಸಂಚಾಲಕ ಕಿರಣರಾಮ, ಧಾರವಾಡ ವಿಭಾಗ ಸಂಚಾಲಕ ವರ್ಧಮಾನ ತ್ಯಾಗಿ ಇದ್ದರು.