Advertisement
ಕೇಂದ್ರ ಸರ್ಕಾರ ದೇಶದ ಕೃಷಿಯನ್ನು ಸಮಗ್ರ ಕೃಷಿಪದ್ಧತಿ ಅನುಸಾರ ಹಾಗೂ ಹೈನುಗಾರಿಕೆ, ಪಶುಸಂಗೋಪನೆ,ಜೇನು ಸಾಕಾಣಿಕೆ, ರೇಷ್ಮೆ ಸಾಕಾಣಿಕೆ ಸೇರಿದಂತೆ ಕೃಷಿಗೆ ಸಂಬಂಧಿಸಿದಂತಹ ಉಪಕಸುಬುಗಳನ್ನು ಪ್ರೋತ್ಸಾಹಿಸುವ ಸಾಂಸ್ಕೃತಿಕ ಸಮ್ಮೇಳನವನ್ನು ಆಯೋಜನೆ ಮಾಡಲಾಗಿತ್ತು .ರೈತರ ಬದುಕನ್ನು ಬದಲಾವಣೆ ತರುವ ಇಂತಹ ಕಾರ್ಯಕ್ರಮಗಳನ್ನು ಕೃಷಿ ವಿಜ್ಞಾನ ಕೇಂದ್ರ ರಾಯಚೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ಇಲಾಖೆಯ ಆತ್ಮ ಯೋಜನೆಯಡಿಯಲ್ಲಿ ನಡೆಸುವಂತೆ ಕೇಂದ್ರ ಸರ್ಕಾರ ಸುತ್ತೋಲೆ ಮೂಲಕ ಆದೇಶ ನೀಡಿತ್ತು .ಆದರೆ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ತರಾತುರಿಯಲ್ಲಿ ಕೆಲವೇ ಕೆಲವು ರೈತರನ್ನು ಆಹ್ವಾನಿಸುವ ಮೂಲಕ ಭಾರತೀಯ ಪ್ರಾಕೃತಿಕ ಕೃಷಿ ಸಮ್ಮೇಳನವನ್ನು ಆಯೋಜನೆ ಮಾಡಿತ್ತು .ಸಮ್ಮೇಳನದ ಶಾಸಕ ಪರಣ್ಣ ಮುನವಳ್ಳಿ ಅವರಿಗೂ ಅಧಿಕಾರಿಗಳು ಮಾಹಿತಿ ನೀಡಲಿಲ್ಲ ಇದರಿಂದ ಶಾಸಕರು ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದರು.
Related Articles
Advertisement
ನಾಮಕಾವಸ್ತೆ ಸಮ್ಮೇಳನ : ಪ್ರಸ್ತುತ ಭಾರತೀಯ ಕೃಷಿ ಪದ್ದತಿ ಯ ಪುನರುತ್ಥಾನಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಾರತೀಯ ಪ್ರಾಕೃತಿಕ ಸಮ್ಮೇಳನದ ಮೂಲಕ ಸಮಗ್ರ ಕೃಷಿಯನ್ನು ಮಾರಲು ರೈತರಿಗೆ ಮನವರಿಕೆ ಮಾಡುವ ಸಮ್ಮೇಳನವನ್ನು ಶಾಸಕರಿಗೆ ರೈತರಿಗೆ ಮಾಧ್ಯಮದವರಿಗೆ ಮಾಹಿತಿ ನೀಡದೆ ಆಯೋಜನೆ ಮಾಡಲು ತಪ್ಪು ಆದ್ದರಿಂದ ಮತ್ತೊಮ್ಮೆ ಭಾರತೀಯ ಪ್ರಕಾಶಕರ ಸಮ್ಮೇಳನ ಆಯೋಜನೆ ಮಾಡಿ ಆರೋಗ್ಯ ಸಮಸ್ಯೆ ರೈತರನ್ನು ಆಹ್ವಾನಿಸಿ ಅವರಿಗೆ ಸಮಗ್ರ ಕೃಷಿ ಮತ್ತು ಪೂರಕ ಕೃಷಿ ಬಗ್ಗೆ ಮಾಹಿತಿ ನೀಡುವಂತೆ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಪ್ರಸಾದ್ ಕಲಗುಡಿ ಒತ್ತಾಯಿಸಿದ್ದಾರೆ .