Advertisement
ಜೈಗ್ರಾಂ ಗ್ರಾಮದ ಕೆರೆಯಲ್ಲಿ ಬುಧವಾರ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೆರೆ ಹೂಳು ತೆಗೆಯುವ ಯೋಜನೆಗೆ ರಾಜ್ಯದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ. ಕೆರೆ ಹೂಳನ್ನು ರೈತರು ತಮ್ಮ ಹೊಲಗದ್ದೆಗಳಿಗೆ ಹಾಕಿಸಿಕೊಂಡರೆ ಫಲವತ್ತತೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
Related Articles
ಕೆರೆ ಹೂಳೆತ್ತುವ ಕಾರ್ಯದಿಂದ ಪುಳಕಿತಗೊಂಡಿರುವ ರೈತರು ತಮ್ಮೂರಿನ ಕೆರೆ ಹೂಳು ತೆಗೆಸುವಂತೆ ಬಿಜೆಎಸ್‌ಗೆ ದುಂಬಾಲು ಬಿದ್ದಿದ್ದಾರೆ. ಬದ್ದೇಪಲ್ಲಿ, ರಾಂಪುರ, ಕರಣಿಗಿ, ಜೈಗ್ರಾಂ ಕೆರೆಗಳ ಹೂಳು ತೆಗೆಯುವ ಕಾರ್ಯ ಪ್ರಗತಿಯಲ್ಲಿದೆ. ಹೆಚ್ಚಿನದಾಗಿ ನಸಲವಾಯಿ, ವಂಕಸಂಬರ ಕೆರೆಗಳ ಹೂಳೆತ್ತಲು ಕಾರ್ಯಾರಂಭಿಸುವಂತೆ ರೈತರು ಒತ್ತಾಯ ಮಾಡುತ್ತಿದ್ದಾರೆ. ಈ ಬಗ್ಗೆ ಸಮಾಲೋಚನೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು. •ಶರಣಿಕಕುಮಾರ ದೋಖಾ,
ಅಧ್ಯಕ್ಷರು ಬಿಜೆಎಸ್ ಗುರುಮಠಕಲ್ ತಾಲೂಕು ಘಟಕ
Advertisement