ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೆರೆ ಒತ್ತುವರಿಯನ್ನು ಏಪ್ರಿಲ್ ತಿಂಗಳ ಅಂತ್ಯದೊಳಗೆ ತೆರವುಗೊಳಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿ ಕಾರಿಗಳಿಗೆ ಜಿಲ್ಲಾ ಧಿಕಾರಿ ಡಾ| ಬಗಾದಿ ಗೌತಮ್ ಸೂಚಿಸಿದರು.
ಮಂಗಳವಾರ ನಗರದ ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ಕೆರೆಗಳ ಒತ್ತುವರಿ ತೆರವು ಸಂಬಂಧ ಅ ಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು 1,103 ಕೆರೆಗಳಿದ್ದು, ಅವುಗಳಲ್ಲಿ 520 ಕೆರೆಗಳ ಸರ್ವೇ ಕಾರ್ಯ ನಡೆಸುವ ಮೂಲಕ ತೆರವುಗೊಳಿಸಲಾಗಿದ್ದು, 583 ಕೆರೆಗಳ ಸರ್ವೇ ಕಾರ್ಯ ಬಾಕಿ ಉಳಿದಿದೆ.
ಇದನ್ನೂ ಓದಿ:ನಗರಸಭೆಯಿಂದ ಅಭಿವೃದಿ ಕಾಮಗಾರಿ ಕುಂಠಿತ-ಆರೋಪ
ಮಾರ್ಚ್ ತಿಂಗಳ ಅಂತ್ಯದೊಳಗೆ ಒತ್ತುವರಿ ಕೆರೆಗಳನ್ನು ತೆರವುಗೊಳಿಸ ಲಾಗುವುದು ಎಂದು ಅಧಿ ಕಾರಿಗಳು ತಿಳಿಸಿದರು. ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ಕೆರೆಯ ಸುತ್ತ ತಂತಿ ಬೇಲಿ ನಿರ್ಮಿಸಿ, ಕೆರೆಯ ಸುತ್ತಲಿನ ಪ್ರದೇಶದಲ್ಲಿ ಬಯೋ ಪ್ಲಾಂಟೇಷನ್ ಮಾಡಬೇಕು. ಮಾವು, ಹಲಸು, ಬೇವು, ಇನ್ನಿತರ ಮರಗಿಡಗಳನ್ನು ಬೆಳೆಸಿ ಸಂರಕ್ಷಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಹೂಳು ತೆಗೆಯದೆ ಬಾಕಿ ಉಳಿದಿರುವ ಕೆರೆಗಳು ಎಲ್ಲಿವೆ ಎಂಬುದರ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ವರದಿ ನೀಡಬೇಕು. ಕೆರೆಗಳಿಗೆ ಕೊಳಚೆ ನೀರು ಸೇರುತ್ತಿದೆಯೋ ಇಲ್ಲವೊ ಎಂಬುದರ ಬಗ್ಗೆ ಅ ಧಿಕಾರಿಗಳು ಗಮನ ಹರಿಸಿ ಅಂತಹ ಕೆರೆಗಳನ್ನು ಸಂರಕ್ಷಣೆ ಮಾಡಲು ಮುಂದಾಗಬೇಕು ಎಂದು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾ ಧಿಕಾರಿ ಡಾ| ಕುಮಾರ್ ಮತ್ತಿತರರು ಇದ್ದರು.