Advertisement
ಮೂರನೇ ಬಾರಿ ಸಂಸದರಾಗಿ ಆಯ್ಕೆ ಯಾದ ಬಳಿಕ ಸುಳ್ಯಕ್ಕೆ ಭೇಟಿ ನೀಡಿದ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಮಾಣಿ ಮೈಸೂರು ರಸ್ತೆಯ ಅಭಿವೃದ್ಧಿ, ಅರಂತೋಡು- ಮರ್ಕಂಜ- ಮಡಪ್ಪಾಡಿ- ಸುಬ್ರಹ್ಮಣ್ಯ ರಸ್ತೆಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಕಾಞಂಗಾಡ್- ಕಾಣಿಯೂರು ರೈಲ್ವೇ ಮಾರ್ಗ ಅನುಷ್ಠಾನಕ್ಕೆ ಸಂಬಂಧಿಸಿ ಸರ್ವೆ ಕಾರ್ಯಕ್ಕೆ ರಾಜ್ಯ ಸರಕಾರ ಒಪ್ಪಿಗೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಲಾಗುವುದು ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಂಡಿದೆ. ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಕಾಂಗ್ರೆಸ್ ಮುಕ್ತವಾಗಿದೆ. ಈ ಬಾರಿ ಬಿಜೆಪಿಗೆ ಬಹುಮತ ಬಂದಿದೆ ಎಂದು ನಳಿನ್ ಹೇಳಿದರು. 991ರಿಂದಲೇ ಬಿಜೆಪಿಯ ವಿಜಯ ಯಾತ್ರೆ ಆರಂಭಗೊಂಡಿತ್ತು. ಇದರಲ್ಲಿ ಸುಳ್ಯದ ಕೊಡುಗೆ ದೊಡ್ಡದು. ಸುಳ್ಯ ನನಗೆ ಶಕ್ತಿ ತುಂಬಿದ ಕ್ಷೇತ್ರ. ಕಾಂಗ್ರೆಸ್ ಮುಕ್ತ ಕ್ಷೇತ್ರವಾಗಿ ಇದು ಮಾರ್ಪಡುತ್ತಿದೆ ಎಂದರು.
Related Articles
Advertisement
ಸೇವಾ ಮನೋಭಾವನೆಯಿಂದ ರಾಜಕಾರಣ ಮಾಡುತ್ತೇನೆ ಎಂದು ಕಟೀಲು ಹೇಳಿದರು. ಶಾಸಕ ಎಸ್. ಅಂಗಾರ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಜಿ.ಪಂ. ಸದಸ್ಯೆ ಪುಷ್ಪಾವತಿ ಬಾಳಿಲ, ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಿ.ಪಂ. ಮಾಜಿ ಸದಸ್ಯ ನವೀನ್‌ಕುಮಾರ್ ಮೇನಾಲ, ಬಿಜೆಪಿ ನಾಯಕರಾದ ಎ.ವಿ. ತೀರ್ಥರಾಮ, ಸುಬೋಧ್ ಶೆಟ್ಟಿ ಮೇನಾಲ, ಭಾಸ್ಕರ ಬಯಂಬು, ಭಾಗೀರಥಿ ಮುರುಳ್ಯ, ಸುರೇಶ್ ಕಣೆಮರಡ್ಕ, ವಿನುತಾ ಪಾತಿಕಲ್ಲು, ಅಬ್ದುಲ್ ಕುಂಞಿ ನೇಲ್ಯಡ್ಕ, ರಂಜಿತ್ ಪೂಜಾರಿ, ವಾಸುದೇವ ನಾಯಕ್, ನಾಗರಾಜ್ ಮುಳ್ಯ, ಮಹೇಶ್ ರೈ ಮೇನಾಲ, ರಾಜೇಶ್ ರೈ ಮೇನಾಲ ಉಪಸ್ಥಿತರಿದ್ದರು.