Advertisement
ದೇವಸ್ಥಾನದ ಹೊರಾಂಗಣದ ಸುತ್ತಲೂ ನೀರನ್ನು ಬೆಳಗ್ಗೆಯಿಂದಲೇ ತುಂಬಿಸಲಾಗಿತ್ತು. ರಾತ್ರಿ ಮಹಾಪೂಜೆಯ ಬಳಿಕ ಪಾಲಕಿ ಉತ್ಸವ ನೀರಿನಲ್ಲಿ ನೆರವೇರಿತು. ಬಳಿಕ ನೀರಿನಲ್ಲಿ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವ ನಡೆಯಿತು. ಈ ಉತ್ಸವದೊಂದಿಗೆ ಚಂಪಾಷಷ್ಠಿ ಉತ್ಸವಗಳು ಮುಕ್ತಾಯವಾದವು. ಮಹಾ ಸಂಪ್ರೋಕ್ಷಣ ಹೋಮವು ನೆರವೇರಿತು.
ಜಾತ್ರೆಯ ಅವಧಿಯಲ್ಲಿ ದೇವಸ್ಥಾನದ ವಿಶೇಷ ಸೇವೆಗಳಲ್ಲಿ ಒಂದಾದ ಸರ್ಪಸಂಸ್ಕಾರ ನಡೆಯುವುದಿಲ್ಲ. ಸೋಮವಾರ ಜಾತ್ರೆ ಮುಕ್ತಾಯವಾಗಿರುವುದರಿಂದ ಡಿ. 6ರಿಂದ ಸರ್ಪಸಂಸ್ಕಾರ ಸೇವೆ ಪುನರಾರಂಭಗೊಳ್ಳಲಿದೆ.
Related Articles
ದೇವಸ್ಥಾನದಲ್ಲಿ ಕಿರುಷಷ್ಠಿ ರಥೋತ್ಸವವು ಡಿ. 28ರಂದು ಸಂಜೆ ನೆರವೇರಲಿದೆ.
Advertisement