Advertisement

ಐವಿಎಫ್ ಮೂಲಕ 6 ಕರು ಸೃಷ್ಟಿ! ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ವೈಜ್ಞಾನಿಕ ಪ್ರಯೋಗ ಯಶಸ್ವಿ

10:50 PM Oct 04, 2021 | Team Udayavani |

ಪುಣೆ : ಮಹಾರಾಷ್ಟ್ರದ ಸತಾರಾ ಜಿಲ್ಲೆಯ ದಯಾರಾಂ ತೆಂಗಿಲ್‌ ಎಂಬ ರೈತನ ಕೊಟ್ಟಿಗೆಯಲ್ಲಿ ಸದ್ಯದಲ್ಲೇ ಆರು ಕರುಗಳು ಜನನವಾಗಲಿವೆ. ವಿಶೇಷವೇನೆಂದರೆ, ಈ ಎಲ್ಲಾ ಕರುಗಳೂ ಇನ್‌ವಿಟ್ರೋ ಫ‌ರ್ಟಿಲೈಸೇಷನ್‌ (ಐವಿಎಫ್) ತಂತ್ರಜ್ಞಾನದ ಮೂಲಕ, ಅಂದರೆ, ಕೃತಕ ಗರ್ಭಧಾರಣೆ ಮೂಲಕ ಜನಿಸಲಿರುವ ಕರುಗಳು.

Advertisement

ಈ ವಿಶೇಷವಾದ ವೈಜ್ಞಾನಿಕ ಪ್ರಯೋಗವನ್ನು ಜೆಕೆ ಬೋವಾಜೆನಿಕ್ಸ್‌ ಎಂಬ ಸಂಸ್ಥೆ ಸಾಕಾರಗೊಳಿಸಿದೆ. “ಸಮಾಧಿ’ ಎಂಬ ಸಂಸ್ಥೆ ಗಿರ್‌ ಗೋವುಗಳ ವೀರ್ಯವನ್ನು ದಾನವಾಗಿ ನೀಡುತ್ತಿದ್ದು, ಆ ವೀರ್ಯಗಳನ್ನು ಬಳಸಿ, ಪ್ರಯೋಗಾಲಯದಲ್ಲಿ ಆ ಗೋವುಗಳ ತಳಿಗಳ ಭ್ರೂಣವನ್ನು ಸೃಷ್ಟಿಸಲಾಗಿದೆ. ಆನಂತರ, ಅವುಗಳನ್ನು ಸ್ಥಳೀಯ ಹೋಲ್‌ಸ್ಟೇನ್‌ ಫ್ರೈಸಿಯನ್ಸ್‌ (ಸೀಮೆ ಹಸು) ತಳಿಯ ಗೋವುಗಳ ಗರ್ಭಾಶಯದಲ್ಲಿ ವೈಜ್ಞಾನಿಕ ಕ್ರಿಯೆಯ ಮೂಲಕ ಅಡಕಗೊಳಿಸಿ ಬೆಳೆಸಲಾಗಿದೆ.

ತೆಂಗಿಲ್‌ ಅವರ ಗೋವುಗಳಿಗೆ ಮಾಡಲಾದ ಗರ್ಭಧಾರಣೆ ಸೇರಿದಂತೆ ಈವರೆಗೆ ಸತಾರಾ ಹಾಗೂ ಸುತ್ತಲಿನ ಪ್ರಾಂತ್ಯದಲ್ಲಿ 74 ಐವಿಆರ್‌ ಗರ್ಭದಾರಣೆ ನಡೆಸಲಾಗಿದ್ದು ಅವೆಲ್ಲವೂ ಯಶಸ್ವಿಯಾಗಿವೆ. ಮುಂದಿನ ಎರಡು ವರ್ಷಗಳಲ್ಲಿ ಇಂಥ 100 ಗರ್ಭಧಾರಣೆ ನಡೆಸುವ ಗುರಿ ಹಮ್ಮಿಕೊಳ್ಳಲಾಗಿದೆ ಎಂದು ಜೆಕೆ ಬೋವಾಜೆನಿಕ್ಸ್‌ ಸಂಸ್ಥೆಯ ಪ್ರಧಾನ ವಿಜ್ಞಾನಿ ಹಾಗೂ ಈ ಎಲ್ಲಾ ಗರ್ಭಧಾರಣೆಗಳ ಮೇಲ್ವಿಚಾರಣೆ ನಡೆಸುವ ಡಾ. ಶ್ಯಾಂ ಝವಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ : ಮ್ಯಾನುಯೆಲ್‌ ಸ್ಕ್ಯಾವೆಂಜರ್‌ಗಳ ಸಮೀಕ್ಷೆ ಎರಡು ತಿಂಗಳಲ್ಲಿ ಮುಗಿಸಿ : ಹೈಕೋರ್ಟ್‌ ಆದೇಶ

Advertisement

Udayavani is now on Telegram. Click here to join our channel and stay updated with the latest news.

Next