ಸಾಗರ: ಅಡಕೆ ತೋಟಕ್ಕೆ ಬಂದಿರುವ ಹಳದಿಎಲೆಚುಕ್ಕಿ ರೋಗ ನಿಯಂತ್ರಿಸಲು ವಿಜ್ಞಾನಿಗಳುಸೂಕ್ತ ಪರಿಹಾರೋಪಾಯ ಕಂಡು ಹಿಡಿದಿದ್ದು,ಬೆಳೆಗಾರರು ತೋಟಗಾರಿಕೆ ಇಲಾಖೆಯಿಂದಸೂಕ್ತ ಮಾಹಿತಿ ಪಡೆದು ಎಲೆಚುಕ್ಕೆ ರೋಗದಿಂದತಮ್ಮ ತೋಟವನ್ನು ರಕ್ಷಣೆ ಮಾಡಿಕೊಳ್ಳುವಂತೆಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ನಗರಸಭೆಯಲ್ಲಿ ತೋಟಗಾರಿಕೆಇಲಾಖೆ ಅಧಿ ಕಾರಿಗಳ ಜೊತೆ ಸಭೆ ನಡೆಸಿಮಾತನಾಡಿದ ಅವರು, ಅಡಕೆ ತೋಟಕ್ಕೆಬಂದಿರುವ ಎಲೆಚುಕ್ಕೆ ರೋಗಕ್ಕೆ ಐಸಿಎಆರ್‌ಮತ್ತು ಕಾಸರಗೋಡಿನ ಸಿಪಿಸಿಆರ್‌ಐತಂಡದ ವಿಜ್ಞಾನಿಗಳು ಕಾರಣ ಮತ್ತುಪರಿಹಾರೋಪಾಯ ಕಂಡು ಹಿಡಿದಿದ್ದಾರೆಎಂದು ಹೇಳಿದರು.ಕಳೆದ ತಿಂಗಳು ನಾನು ಕರೂರು ಭಾರಂಗಿಹೋಬಳಿಗೆ ಭೇಟಿ ನೀಡಿದಾಗ ಈ ರೋಗಬಂದಿರುವ ಬಗ್ಗೆ ಬೆಳೆಗಾರರ ಗಮನಸೆಳೆದಿದ್ದರು.
ತೀರ್ಥಹಳ್ಳಿ ಕ್ಷೇತ್ರದ ಶಾಸಕ,ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರಜೊತೆ ಈ ಬಗ್ಗೆ ಸರ್ಕಾರದ ಗಮನ ಸೆಳೆದು10 ಕೋಟಿ ರೂ. ಪರಿಹಾರ ನೀಡುವಂತೆಮನವಿ ಮಾಡಿದ್ದೇವೆ. ತೋಟಗಾರಿಕಾಸಚಿವರಾದ ಮುನಿರತ್ನ ಅವರನ್ನು ಭೇಟಿಮಾಡಿ ತಕ್ಷಣ ತಾತ್ಕಾಲಿಕ ಪರಿಹಾರ ಬಿಡುಗಡೆಮಾಡುವಂತೆ ಮನವಿ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಸಾಗರ ತಾಲೂಕಿಗೆ 5.25 ಲಕ್ಷಮತ್ತು ಹೊಸನಗರ ತಾಲೂಕಿಗೆ 25 ಲಕ್ಷ ರೂ.ಬಿಡುಗಡೆಯಾಗಿದ್ದು, ರೈತರ ಖಾತೆಗೆ ನೇರಹಣ ಜಮೆ ಆಗುತ್ತದೆ. ಹೊಸನಗರ ಮತ್ತುತೀರ್ಥಹಳ್ಳಿ ಭಾಗದಲ್ಲಿ ಹೆಚ್ಚಿನ ತೋಟಗಳಲ್ಲಿಎಲೆಚುಕ್ಕೆ ರೋಗ ಕಾಣಿಸಿಕೊಂಡಿದ್ದರಿಂದಅಲ್ಲಿಗೆ ಹೆಚ್ಚು ಪರಿಹಾರ ನೀಡಲಾಗಿದೆ ಎಂದರು.
ತೋಟಗಾರಿಕೆ ಇಲಾಖೆಯ ಹಿರಿಯಸಹಾಯಕ ನಿರ್ದೇಶಕ ಕಿರಣ್‌ಕುಮಾರ್‌ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷಟಿ.ಡಿ. ಮೇಘರಾಜ್, ಎಪಿಎಂಸಿ ಅಧ್ಯಕ್ಷಚೇತನರಾಜ್ ಕಣ್ಣೂರು, ನಗರಸಭೆ ಅಧ್ಯಕ್ಷೆಮಧುರಾ ಶಿವಾನಂದ್, ಬಿಜೆಪಿ ಕಾರ್ಯದರ್ಶಿರವೀಂದ್ರ ಬಿ.ಟಿ., ತೋಟಗಾರಿಕೆ ಇಲಾಖೆಯಉಲ್ಲಾಸ್ ಇದ್ದರು.