Advertisement

ವೃದ್ಧರು-ಅಂಗವಿಕಲರಿಗೆ ನೇರ ಅವಕಾಶ

04:59 PM Apr 24, 2019 | Team Udayavani |

ಯಲ್ಲಾಪುರ: ಲೋಕಸಭಾ ಚುನಾವಣೆ ತಾಲೂಕಿನಲ್ಲಿ ಅತ್ಯಂತ ಶಾಂತಿಯುತವಾಗಿ ಹಾಗೂ ಯಾವುದೇ ಅಡಚಣೆಗಳಲಿಲ್ಲದೇ ನಡೆಯಿತು. ಎಲ್ಲಿಯೂ ಮತಯಂತ್ರ ದೋಷ ಪ್ರಕರಣ ವರದಿಯಾಗಿಲ್ಲ. ಯಾವುದೇ ಅಹಿತಕರ ಘಟನೆಗಳು ನಡೆಯದೇ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಯಿತು.

Advertisement

ಮತದಾನ ಬೆಳಗ್ಗೆ ಪ್ರಾರಂಭದಿಂದ ಮಧ್ಯಾಹ್ನ 11ರ ವರೆಗೆ ಸಾಲಿನಲ್ಲಿ ಗಂಟೆಗಟ್ಟಲೆ ಕಾಲ ನಿಂತು ಮತ ಚಲಾಯಿಸಿದರು. 11ರ ಹೊತ್ತಿಗೆ ಕೇವಲ ಶೇ.13.42 ರಷ್ಟು ಮತದಾನವಾಯಿತು. 12ರ ನಂತರದ ಸುಡುಬಿಸಿಲಿನಲ್ಲಿ ಮತದಾರರು ಮತಗಟ್ಟೆಗೆ ತೀರಾ ಕಡಿಮೆ ಸಂಖ್ಯೆಯಲ್ಲಿ ಬಂದಿದ್ದರು. ಆದರೆ ಸಾಯಂಕಾಲ ನಾಲ್ಕು ಗಂಟೆಯ ಹೊತ್ತಿಗೆ ಸ್ವಲ್ಪ ತುರುಸಿನ ಮತದಾನ ಕಂಡುಬಂತು.

ಮತಗಟ್ಟೆಗಳಲ್ಲಿ ವೃದ್ಧರಿಗೆ, ಅಂಗವಿಕಲರಿಗೆ ಅಶಕ್ತರಿಗೆ ನೇರವಾಗಿಯೆ ಮತಗಟ್ಟೆಯೊಳಗೆ ಬಿಟ್ಟು ಮತದಾನ ಅವಕಾಶ ಕಲ್ಪಿಸಿದ್ದು ಕಂಡುಬಂತು. ವ್ಹೀಲ್ಚೇರ್‌ನ್ನು ಒದಗಿಸಿದ್ದರಿಂದ ಅಂಗವಿಕಲರಿಗೆ ಅನುಕೂಲವಾಯಿತು.

ಅಬ್ಬರಿಸಿದ ಗುಡುಗು, ಆಲಿಕಲ್ಲು ಸಹಿತ ಮಳೆ: ಮಧ್ಯಾಹ್ನ ಮೂರರ ಹೊತ್ತಿಗೆ ತಾಲೂಕಿನ ಕೆಲ ಮತಗಟ್ಟೆ ವಲಯದಲ್ಲಿ ಒಮ್ಮೆಗೆ ಗುಡುಗು ಸಿಡಿಲು ಅಬ್ಬರಿಸಿ ಆಲಿಕಲ್ಲು ಸಹಿತ ಮಳೆ ಸುರಿಯಿತು. ಮಳಲಗಾಂವ್‌, ಸಂಪಿಗೆಪಾಲ್, ಹುತ್ಕಂಡ, ಹುಣಶೆಟ್ಟಿಕೊಪ್ಪ ಭಾಗದ ಮತಗಟ್ಟೆ ಕೇಂದ್ರದಲ್ಲಿ ಮಳೆ ಅಬ್ಬರಿಸಿತಾದರೂ ಪಟ್ಟಣದಲ್ಲಿ ವರುಣನ ಕೃಪೆಯಾಗಲಿಲ್ಲ. ಈ ಸಮಯಕ್ಕೆ ವಿದ್ಯುತ್‌ ಕೈಕೊಟ್ಟಿತು. ಆದರೂ ಮತದಾನ ಪ್ರಕ್ರಿಯೆಗೆ ಯಾವುದೇ ಅಡಚಣೆಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next