Advertisement

ಆಯುರ್ವೇದ ಉಳಿಸಿ ಬೆಳೆಸಿ: ಬಿವೈಆರ್‌

03:24 PM Nov 05, 2021 | Adarsha |

ಶಿವಮೊಗ್ಗ: ಯೋಗ ಶಿಕ್ಷಣ ಮತ್ತುಆಯುರ್ವೆàದ ಇವು ವಿಶೇಷ ಶಕ್ತಿ.ಇದನ್ನು ನಮ್ಮ ಪೂರ್ವಜರು ನಮಗೆ ಬಿಟ್ಟುಹೋಗಿದ್ದಾರೆ. ಇದನ್ನು ನಾವು ಉಳಿಸಿಬೆಳೆಸಬೇಕು. ನಿತ್ಯ ನಿರ್ದಿಷ್ಟ ಸಮಯವನ್ನುಯೋಗಕ್ಕೆ ಮೀಸಲಿಡುವ ಮೂಲಕ ದೇಹ,ಮನಸ್ಸನ್ನು ನಿಯಂತ್ರಣದಲ್ಲಿಡಲು ಸಾಧ್ಯ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

Advertisement

ನಗರದ ಯೋಗ ಶಿಕ್ಷಣ ಸಮಿತಿಯಿಂದವಿಕಾಸ ಟ್ರಸ್ಟ್‌ ಮತ್ತು ಆರೋಗ್ಯ ಭಾರತಿ ಸಹಯೋಗದಲ್ಲಿ ಸುವರ್ಣ ಸಂಸ್ಕೃತಿಭವನದಲ್ಲಿ ಆಯೋಜಿಸಿದ್ದ ಧನ್ವಂತರಿದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರುಮಾತನಾಡಿದರು. ಶಿವಮೊಗ್ಗ ಜಿಲ್ಲೆಯ ಸೋಗಾನೆಯಲ್ಲಿ ಆಯುರ್ವೆàದ ಯೂನಿವರ್ಸಿಟಿಗೆ 100 ಎಕರೆಪ್ರದೇಶವನ್ನು ಮೀಸಲಿಡಲಾಗಿದೆ. ಡಿಆರ್‌ಡಿಒ ವಿಭಾಗದ ಸಂಶೋಧನಾ ಕೇಂದ್ರವನ್ನುಸ್ಥಾಪಿಸಲು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಪ್ರಸ್ತಾವನೆ ನೀಡಿದ್ದೇವೆ.

ಶೀಘ್ರವೇ ಇದಕ್ಕೆ ಶುಭ ಸೂಚನೆ ದೊರೆಯಲಿದೆ ಎಂದರು. ಕೇಂದ್ರ ಸರ್ಕಾರ ಯೋಗ ಮತ್ತುಆಯುರ್ವೆàದ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವಕೊಡುತ್ತಿದೆ ಎಂದರು. ಯೋಗ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಭ.ಮ.ಶ್ರೀಕಂಠ ಅವರನ್ನು ಸನ್ಮಾನಿಸಲಾಯಿತು. ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಡಾ|ಸಂಜಯ್‌ ಕುಮಾರ್‌ ಅವರು ಮಾತನಾಡಿ,ಪ್ರತಿ ಬಡಾವಣೆಯಲ್ಲೂ ಯೋಗಮಂದಿರಗಳನ್ನು ಸ್ಥಾಪಿಸಬೇಕು.

ಜೊತೆಗೆ ಈಗಿರುವ ಸಮುದಾಯ ಭವನಗಳಲ್ಲಿ ಆಯಾ ಸ್ಥಳೀಯರು ಪ್ರತಿದಿನ ಬೆಳಗ್ಗೆ ಮತ್ತುಸಂಜೆ 1ಗಂಟೆ ಕಾಲ ಯೋಗ ಮಾಡಲುಅನುವು ಮಾಡಿಕೊಡುವಂತೆ ಮನವಿ ಪತ್ರನೀಡಿದರು.ಮೇಯರ್‌ ಸುನಿತಾ ಅಣ್ಣಪ್ಪ, ಖ್ಯಾತ ಮಕ್ಕಳತಜ್ಞ ವೈದ್ಯ ಡಾ| ಧನಂಜಯ ಸರ್ಜಿ, ಅಥರ್ವಆಯುರ್ಧಾಮದ ಡಾ| ಮಲ್ಲಿಕಾರ್ಜುನಡಂಬಳ, ಮನೆ ಔಷ ಧ ತಜ್ಞ ಎನ್‌.ಎಸ್‌.ಸೀತಾರಾಮ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next