Advertisement
ವಾರದ ಸಂತೆ ಕರ ವಸೂಲಿಗೆ ಮೂರು ವರ್ಷಗಳಿಂದ ಟೆಂಡರ್ಪ್ರಕ್ರಿಯೆ ನಡೆದಿಲ್ಲ. ಗ್ರಾಮ ಪಂಚಾಯಿತಿಯಿಂದಲೇ ಕರ
ವಸೂಲಿ ಮಾಡಲಾಗುತ್ತಿದ್ದು, ಇದಕ್ಕೆ ಒಬ್ಬ ಖಾಸಗಿ ವ್ಯಕ್ತಿಯನ್ನು
ನೇಮಿಸಲಾಗಿದೆ. ಸಂತೆ ಜಾಗದಲ್ಲಿ ಹೈಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ 2016-17ನೇ ಸಾಲಿನಲ್ಲಿ ಮಹಿಳೆಯರ ಶೌಚಾಲಯ ನಿರ್ಮಿಸಿದ್ದರೂ ಈವರೆಗೆ ಉದ್ಘಾಟನೆ ಆಗಿಲ್ಲ. ಶೌಚಾಲಯಕ್ಕೆ ನೀರಿನ ಸೌಲಭ್ಯಕ್ಕಾಗಿ ಕೊಳವೆಬಾವಿ ಕೊರೆಸಲಾಗಿದೆ. ನೀರಿನ ಸಂಪರ್ಕ ಕಲ್ಪಿಸದಿರುವುದು ಉದ್ಘಾಟನೆಗೆ
ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ. ಇನ್ನು ವ್ಯಾಪಾರಸ್ಥರಿಗೆ ಕನಿಷ್ಠ ಕುಡಿಯುವ ನೀರಿನ ಸೌಲಭ್ಯವೂ ಇಲ್ಲ. ನೆರಳಿನ ವ್ಯವಸ್ಥೆಯೂ ಇಲ್ಲದೇ ಪರದಾಡುವಂತಾಗಿದೆ.
ಸಂಸದರ ಗ್ರಾಮದಲ್ಲೇ ಈ ರೀತಿ ವ್ಯಾಪಾರಸ್ಥರಿಗೆ ಸೌಲಭ್ಯ ಇಲ್ಲವಾಗಿದೆ. ಶಾಸಕರು, ಸಂಸದರು ಭಾಷಣದಲ್ಲಿ ಕೋಟ್ಯಂತರ ರೂ. ಅಭಿವೃದ್ಧಿಗೆ ತಂದಿದ್ದೇವೆ ಎಂದು ಹೇಳುತ್ತಾರೆ. ಆದರೆ ಅವರ ಸ್ವಗ್ರಾಮವೇ ಸೌಲಭ್ಯದಿಂದ ವಂಚಿತವಾಗಿರುವುದು ವಿಪರ್ಯಾಸವಾಗಿದೆ ಎಂದು ಅವರು ತಿಳಿಸಿದ್ದಾರೆ. ಕೂಡಲೇ
ಸಂತೆ ಜಾಗದಲ್ಲಿ ವ್ಯಾಪಾರಸ್ಥರಿಗೆ ಕುಡಿಯುವ ನೀರು, ಶೌಚಾಲಯ,
ನೆರಳಿನ ವ್ಯವಸ್ಥೆ ಕಲ್ಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಶೌಚಾಲಯ ಉದ್ಘಾಟಿಸಿ ಸಂತೆ ವ್ಯಾಪಾರಸ್ಥರಿಗೆ ಅನುಕೂಲ
ಕಲ್ಪಿಸಬೇಕೆನ್ನುವಷ್ಟರಲ್ಲಿ ಲೋಕಸಭೆ ಚುನಾವಣೆ ಘೋಷಣೆ ಆಗಿದೆ. ಸೌಲಭ್ಯ ಕೊರತೆಯಿಂದ ಟೆಂಡರ್ ಪ್ರಕ್ರಿಯೆ ವಿಳಂಬವಾಗಿದೆ. ಆದಷ್ಟು ಬೇಗನೆ ಕುಡಿಯುವ ನೀರು, ಶೌಚಾಲಯ ಸೌಲಭ್ಯ ಕಲ್ಪಿಸಲಾಗುವುದು.
.ಪ್ರಭುಲಿಂಗ ಪಾಟೀಲ,
ಪಿಡಿಒ