ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು,
ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ
ಕ್ಷೇತ್ರಗಳ ಮತಯಂತ್ರಗಳು ಸ್ಟ್ರಾಂಗ್ ರೂಂನಲ್ಲಿ
ಭದ್ರವಾಗಿವೆ. ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಮತಯಂತ್ರಗಳನ್ನು ಭದ್ರವಾಗಿ ಇಡಲಾಗಿದೆ.
Advertisement
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್. ವಿನೋತ್ ಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಾ| ಕೆ. ಅರುಣ್, ಕೇಂದ್ರ ಚುನಾವಣಾ ವೀಕ್ಷಕರು ಸ್ಥಳ ಪರಿಶೀಲನೆ ಮಾಡಿದರು. ಸರ್ಕಾರಿವಿಜ್ಞಾನ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಿರುವ
11 ಸ್ಟ್ರಾಂಗ್ ರೂಂಗಳು ಮತ್ತು ಪೋಸ್ಟಲ್ ಮತಗಳನ್ನು ಮತ್ತೂಂದು ಸ್ಟ್ರಾಂಗ್ ರೂಂನಲ್ಲಿ ಇಡಲಾಗಿದೆ.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ
ಬರೆಯಲಾಗಿದೆ. ಮೊಳಕಾಲ್ಮೂರು ಕ್ಷೇತ್ರದ 284, ಚಳ್ಳಕೆರೆಯ 259, ಚಿತ್ರದುರ್ಗದ 283, ಹಿರಿಯೂರು 285, ಹೊಸದುರ್ಗ 240, ಹೊಳಲ್ಕೆರೆ 297, ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ 267, ಪಾವಗಡ ಕ್ಷೇತ್ರದ 246 ಮತಗಟ್ಟೆಗಳ ಒಟ್ಟು 2161 ಮತಯಂತ್ರಗಳನ್ನು ಇಟ್ಟಿರುವ ಕೊಠಡಿಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಇದೇ ಕಟ್ಟಡದಲ್ಲಿ ಮತ
ಎಣಿಕೆಗಾಗಿ 8 ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಸೊಳ್ಳೆ, ನೊಣಗಳು ಹೋಗದಂತೆ ಕಿಟಕಿ, ಬಾಗಿಲು,
ಶೌಚಾಲಯ, ವೆಂಟಿಲೇಟರ್ ಜಾಗಗಳ
ಇಟ್ಟಿಗೆಯಿಂದ ಮುಚ್ಚಿ ಅದರ ಮೇಲೆ ಪ್ಲೈವುಡ್
ಶೀಟ್ ಹಾಕಿ ಭದ್ರಪಡಿಸಲಾಗಿದೆ.
Related Articles
Advertisement
ಮತಯಂತ್ರಗಳನ್ನು ಸಿಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ರಕ್ಷಣೆ ಮಾಡಲಾಗುತ್ತದೆ. ಒಟ್ಟು 90ಸಿಸಿ ಕ್ಯಾಮೆರಾಗಳನ್ನು ಕಟ್ಟಡಕ್ಕೆ ಅಳವಡಿಸಲಾಗಿದೆ. ಸಿಸಿ ಕ್ಯಾಮೆರಾಗಳ ಜೊತೆಗೆ ಪೊಲೀಸ್ ಸರ್ಪಗಾವಲು
ಹಾಕಲಾಗಿದೆ. ಸ್ಟ್ರಾಂಗ್ ರೂಂ ಸುತ್ತ ಮುತ್ತ ಸೇರಿದಂತೆ ಮೂರು ಹಂತದಲ್ಲಿ ಭದ್ರತೆ ಮಾಡಲಾಗಿದೆ. ಸ್ಟ್ರಾಂಗ್ ರೂಂ ಬಳಿ ಸಿಆರ್‌ಪಿಎಫ್ ಯೋಧರ ಪಡೆ, ಅದರಲ್ಲೂ ಮಹಿಳಾ ಯೋಧರು, ಎರಡನೇ ಹಂತದಲ್ಲಿ ಕೆಆರ್ ಪಿಎಫ್ ಪಡೆ, ಮೂರನೇ ಹಂತದಲ್ಲಿ ಕರ್ನಾಟಕ ಪೊಲೀಸರ
ಪಡೆಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಒಟ್ಟು ನೂರು ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.