Advertisement

ಅಜರ್‌ ವಿಷಯದಲ್ಲಿ ಚೀನಾ ಮೊಂಡು

01:30 AM Mar 30, 2019 | mahesh |

ಬೀಜಿಂಗ್‌: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಪ್ರಸ್ತಾವನೆಗೆ ಸತತ ನಾಲ್ಕು ಬಾರಿ ಅಡ್ಡಗಾಲು ಹಾಕಿರುವ ಚೀನಾ, ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ಅಲ್ಲದೆ, ಬುಧವಾರ, ಚೀನಾದ ನಡೆಯ ವಿರುದ್ಧ ಟೀಕೆ ಮಾಡಿದ್ದ ಅಮೆರಿಕಕ್ಕೆ ತಿರುಗೇಟು ನೀಡಿರುವ ಚೀನಾದ ವಿದೇಶಾಂಗ ಸಚಿವ ಗೆಂಗ್‌ ಶುವಾಂಗ್‌, ಉಗ್ರವಾದ ಪೀಡೆಗೆ ಒಳಗಾಗಿರುವ ಎರಡೂ ದೇಶಗಳು (ಭಾರತ-ಪಾಕಿಸ್ಥಾನ) ಪರಸ್ಪರ ಚರ್ಚಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲಿ ಎಂಬ ಸದುದ್ದೇಶದಿಂದ ಚೀನಾ ಹೀಗೆ ವರ್ತಿಸಿದ್ದಾಗಿ ಹೇಳಿದ್ದಾರೆ.

Advertisement

ಬುಧವಾರ ಚೀನಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪೊಂಪೊ, “”ಒಂದೆಡೆ ತನ್ನ ದೇಶದಲ್ಲಿರುವ 10 ಲಕ್ಷಕ್ಕೂ ಹೆಚ್ಚಿನ ಮುಸ್ಲಿಮರ ಮೇಲೆ ದಬ್ಟಾಳಿಕೆ ನಡೆಸುತ್ತಿರುವ ಚೀನಾ, ಮತ್ತೂಂದೆಡೆ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸಲು ಅಡ್ಡಗಾಲು ಹಾಕುತ್ತಿದೆ. ಈ ಮೂಲಕ, ಉಗ್ರರ ಪೋಷಣೆಗೆ ಚೀನಾ ಪರೋಕ್ಷವಾಗಿ ನೆರವು ನೀಡುತ್ತಿದೆ” ಎಂದಿದ್ದರು.

ಇದಕ್ಕೆ ಶುಕ್ರವಾರ ಪ್ರತಿಕ್ರಿಯಿಸಿರುವ ಶುವಾಂಗ್‌, ಅಮೆರಿಕದ ವಿರುದ್ಧ ಗುಡುಗಿದ್ದಾರೆ. “”ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯು ಹಿಂದೊಮ್ಮೆ ಅಲ್‌ಖೈದಾವನ್ನು ನಿಷೇಧಿಸಲು ಮುಂದಾದಾಗ ಯುಎನ್‌ಎಸ್‌ಸಿ ಸದಸ್ಯ ರಾಷ್ಟ್ರವೊಂದು ಅದಕ್ಕೆ ಹಲವಾರು ತಾಂತ್ರಿಕ ತಡೆಗಳನ್ನೊಡ್ಡಿತ್ತು. ಹಾಗಾದರೆ, ಆ ದೇಶವೂ ಭಯೋತ್ಪಾದನೆಯನ್ನು ಪೋಷಿಸುತ್ತಿತ್ತೇ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಭಾರತದ ಸ್ವಾಗತ: ಉಗ್ರರಿಗೆ ಧನ ಸಹಾಯ ಮಾಡುವುದರ ವಿರುದ್ಧ ಸಂಘಟಿತ ಹೋರಾಟ ಮಾಡುವ ನಿರ್ಣಯವೊಂದನ್ನು ಯುಎನ್‌ಎಸ್‌ಸಿ ಕೈಗೊಂಡಿರುವುದನ್ನು ಭಾರತ ಸ್ವಾಗತಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next