ಕುಳಗೇರಿ ಕ್ರಾಸ್ (ಬಾಗಲಕೋಟೆ): ಗ್ರಾಮದ ಪೊಲೀಸ್ ಠಾಣೆಯಿಂದ ಕೂಗಳತೆಯ ದೂರದಲ್ಲಿರುವ ಗ್ರಾಮ ಪಂಚಾಯತ್ ಪಕ್ಕದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಕನ್ನ ಹಾಕಿದ ಕಳ್ಳರು ಅಂಗನವಾಡಿ ಕೇಂದ್ರದಲ್ಲಿರುವ ದವಸ-ಧಾನ್ಯಗಳನ್ನು ಕದ್ದೊಯ್ದಿದ್ದಾರೆ.
ಅಂಗನವಾಡಿ ಕೇಂದ್ರದ ಹಿಂಭಾಗದಲ್ಲಿರುವ ಕಾಂಪೌಂಡ್ ಜಿಗಿದು ಒಳ ನುಗ್ಗಿದ ಕಳ್ಳರು ಅಂಗನವಾಡಿ ಕೀಲಿ ಮುರಿದು ಮಕ್ಕಳಿಗೆ ಸೇರಬೇಕಿದ್ದ ಧಾನ್ಯಗಳನ್ನು ಕದ್ದು ಪರಾರಿಯಾಗಿದ್ದಾರೆ.
ಜನವರಿ ತಿಂಗಳ ರೇಶನ್ 1ನೇ ತಾರಿಕಿಗೆ ಬಂದಿತ್ತು ಆದರೆ ಮಕ್ಕಳಿಗೆ ಸೇರುವ ಮುನ್ನವೇ ಶೇಂಗಾ, ಬೇಳೆ, ಸಕ್ಕರೆ ಸೇರಿದಂತೆ ಧಾನ್ಯಗಳನ್ನು ಕದ್ದಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆ ಅನೀತಾ ತಳವಾರ ಪತ್ರಿಕೆಗೆ ತಿಳಿಸಿದ್ದಾರೆ.
ಇದೆಂಥ ಕಳ್ಳರು: ಅಂಗನವಾಡಿ ಮಕ್ಕಳ ವಿದ್ಯಕೇದ್ರ ಅನ್ನೋದನ್ನೂ ಮರೇತ ಕಳ್ಳರು ಅಂಗನವಾಡಿ ಕೇಂದ್ರದಲ್ಲಿ ಮಲ-ಮೂತ್ರ ವಿಸರ್ಜನೆ ಮಾಡಿದ್ದಾರೆ. ಎಂದು ಅಂಗನವಾಡಿ ಕಾರ್ಯಕರ್ತೆ ಪತ್ರಿಕೆಯ ಮುಂದೆ ತಮ್ಮ ಅಳಲು ಹೇಳಿಕೊಂಡರು.
ಸ್ಥಳಿಯ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇತ್ತೀಚೆಗೆ ಗ್ರಾಮದಲ್ಲಿ ಸಾಕಷ್ಟು ಕಳ್ಳತನ ಪ್ರಕರಣಗಳು ನಡೆದಿವೆ. ಆದರೆ ಕೋರ್ಟ್ ಕಛೇರಿ ಎಂದು ಅಲಿಯೋದ್ಯಾಕೆ ನಮಗ್ಯಾಕೆ ಈ ಉಸಾಬರಿ. ಕಳೆದದ್ದು ಮತ್ತೆ ಸಿಗುವುದೇ ಎಂಬ ಅನುಮಾನದಲ್ಲಿ ಠಾಣೆಗೆ ಕೆಲವರು ದೂರು ಕೊಟ್ಟರೆ ಇನ್ನೂ ಕೆಲವರು ದೂರನ್ನ ಕೊಡುತ್ತಿಲ್ಲ ಎಂದು ತಿಳಿದುಬಂದಿದೆ.