Advertisement

2ನೇ ಸುತ್ತು ದಾಟಿದ ಜ್ವೆರೇವ್‌, ಮೆಡ್ವಡೇವ್‌

02:18 AM Aug 31, 2019 | Team Udayavani |

ನ್ಯೂಯಾರ್ಕ್‌: ಸ್ಪೇನಿನ ರಫೆಲ್‌ ನಡಾಲ್‌ ಅಂಕಣಕ್ಕಿಳಿ ಯದೆಯೇ ಯುಎಸ್‌ ಓಪನ್‌ ಕೂಟದ 2ನೇ ಸುತ್ತು ದಾಟಿದ್ದಾರೆ. ಆಸ್ಟ್ರೇಲಿಯದ ಎದುರಾಳಿ ಥನಾಸಿ ಕೊಕಿನಾಕಿಸ್‌ ಗಾಯಾಳಾಗಿ ಹಿಂದೆ ಸರಿದುದರಿಂದ ನಡಾಲ್‌ಗೆ ಈ ಅವಕಾಶ ಲಭಿಸಿತು.

Advertisement

ಪುರುಷರ ಸಿಂಗಲ್ಸ್‌ ದ್ವಿತೀಯ ಸುತ್ತಿನ ಮುಖಾಮುಖೀಯಲ್ಲಿ ಗೆಲುವು ಸಾಧಿಸಿದ ಇತರ ಪ್ರಮುಖರೆಂದರೆ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌, ರಶ್ಯದ ಡ್ಯಾನಿಲ್‌ ಮೆಡ್ವಡೇವ್‌, ಆತಿಥೇಯ ನಾಡಿನ ಜಾನ್‌ ಇಸ್ನರ್‌, ಆಸ್ಟ್ರೇಲಿಯದ ನಿಕ್‌ ಕಿರ್ಗಿಯೋಸ್‌, ಫ್ರಾನ್ಸ್‌ ನ ಗೇಲ್‌ ಮಾನ್‌ಫಿಲ್ಸ್‌, ಕ್ರೊವೇಶಿಯಾದ ಮರಿನ್‌ ಸಿಲಿಕ್‌ ಮತ್ತು ಸ್ವಿಜರ್‌ಲ್ಯಾಂಡಿನ ಸ್ಟಾನಿಸ್ಲಾಸ್‌ ವಾವ್ರಿಂಕ.
3 ಸಲ ಇಲ್ಲಿ ಪ್ರಶಸ್ತಿ ಎತ್ತಿದ ರಫೆಲ್‌ ನಡಾಲ್‌ ಮುಂದಿನ ಸುತ್ತಿನಲ್ಲಿ ದ. ಕೊರಿಯಾದ ಹಿಯಾನ್‌ ಚುಂಗ್‌ ವಿರುದ್ಧ ಆಡಲಿದ್ದಾರೆ.

ಜ್ವೆರೇವ್‌ 5 ಸೆಟ್‌ಗಳ ಹೋರಾಟ
6ನೇ ಶ್ರೇಯಾಂಕದ ಅಲೆಕ್ಸಾಂಡರ್‌ ಜ್ವೆರೇವ್‌ ಗೆಲುವು ಕಾಣಲು ಸತತ 2ನೇ ಸಲ 5 ಸೆಟ್‌ಗಳ ಹೋರಾಟ ನಡೆಸಬೇಕಾಯಿತು. ಅವರು 6-3, 3-6, 6-2, 2-6, 6-3ರಿಂದ ಅಮೆರಿಕದ ಫ್ರಾನ್ಸೆಸ್‌ ಟಿಯಾಫೊ ವಿರುದ್ಧ ಮೇಲುಗೈ ಸಾಧಿಸಿದರು. ಇದರೊಂದಿಗೆ 2018ರ ಬಳಿಕ ಜ್ವೆರೇವ್‌ ಅತೀ ಹೆಚ್ಚು 11ನೇ ಸಲ 5 ಸೆಟ್‌ಗಳ ಪಂದ್ಯಗಳಲ್ಲಿ ಕಾಣಿಸಿಕೊಂಡಂತಾಯಿತು.

ಡ್ಯಾನಿಲ್‌ ಮೆಡ್ವಡೇವ್‌ ಬೊಲಿವಿಯಾದ ಹ್ಯೂಗೊ ಡೆಲ್ಲೀನ್‌ ಅವರನ್ನು 6-3, 7-5, 5-7, 6-3ರಿಂದ; ಜಾನ್‌ ಇಸ್ನರ್‌ ಭಾರೀ ಹೋರಾಟದ ಬಳಿಕ ಜರ್ಮನಿಯ ಜಾನ್‌ ಲೆನಾರ್ಡ್‌ ಸ್ಟ್ರಫ್ ಅವರನ್ನು 6-3, 7-6 (7-4), 7-6 (7-5)ರಿಂದ; ನಿಕ್‌ ಕಿರ್ಗಿಯೋಸ್‌ ಫ್ರಾನ್ಸ್‌ ನ ಅಂಟೋಯಿನ್‌ ಹಾಂಗ್‌ ಅವರನ್ನು 6-4, 6-2, 6-4ರಿಂದ ಮಣಿಸಿ ಮುನ್ನಡೆದರು.

ಫ್ರಾನ್ಸ್‌ನ ಗೇಲ್‌ ಮಾನ್‌ಫಿಲ್ಸ್‌ ರೊಮೇನಿಯಾದ ಮಾರಿಯಸ್‌ ಕೊಪಿಲ್‌ ವಿರುದ್ಧ 6-3, 6-2, 6-2ರಿಂದ ಗೆದ್ದು ಬಂದರು. ಸ್ವಿಜರ್‌ಲ್ಯಾಂಡಿನ ಸ್ಟಾನಿಸ್ಲಾಸ್‌ ವಾವ್ರಿಂಕ ಫ್ರಾನ್ಸ್‌ನ ಜೆರೆಮಿ ಚಾರ್ಡಿ ಅವರನ್ನು 6-4, 6-3, 6-7 (3-7), 6-3ರಿಂದ ಮಣಿಸಿದರು. ಕೆನಡಾದ ಡೆನ್ನಿಸ್‌ ಶೆಪೊವಲೋವ್‌ ಕೂಡ ದ್ವಿತೀಯ
ಸುತ್ತು ದಾಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next