Advertisement

ಜಿಪಂ ಅಧ್ಯಕ್ಷರು ಗಟ್ಟಿ ನಿರ್ಧಾರ ತೆಗೆದುಕೊಳ್ಳಲಿ: ಪಾಟೀಲ

11:37 AM Feb 24, 2019 | Team Udayavani |

ಹೊಸಪೇಟೆ: ಕಾನೂನಾತ್ಮಕವಾಗಿ ದೊರೆತ ಅವಕಾಶ, ಜವಾಬ್ದಾರಿಯನ್ನು ಜಿಪಂ ಅಧ್ಯಕ್ಷರು ಹಿಂದು-ಮುಂದು ನೋಡದೇ ಚಲಾಯಿಸಬೇಕು ಎಂದು ಮಾಜಿ ಶಾಸಕ ಡಿ.ಆರ್‌.ಪಾಟೀಲ ಕಿವಿ ಮಾತು ಹೇಳಿದರು.

Advertisement

ಕನ್ನಡ ವಿಶ್ವವಿದ್ಯಾಲಯ ಅಭಿವೃದ್ಧಿ ಅಧ್ಯಯನ ವಿಭಾಗ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಅಬ್ದುಲ್‌ ನಜೀರ್‌ಸಾಬ್‌ ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಜಿಪಂ ಅಧ್ಯಕ್ಷರ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಶನಿವಾರ ಚಾಲನೆ ನೀಡಿ
ಮಾತನಾಡಿದರು.

ಕಾನೂನಾತ್ಮಕವಾಗಿ ದೊರೆತ ಅವಕಾಶ, ಜವಾಬ್ದಾರಿಯನ್ನು ಚಲಾಯಿಸಲು ಜಿಪಂ ಅಧ್ಯಕ್ಷರು ಹಿಂದು-ಮುಂದು ನೋಡದೇ ದೃಢ ನಿರ್ಧಾರ ತೆಗೆದುಕೊಳ್ಳಬೇಕು.

ಕಾನೂನಿನ ಪ್ರಕಾರ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ್‌ ಹಾಗೂ ಗ್ರಾಮ ಸಭೆಗಳು ತಮ್ಮ ಪಾತ್ರ ನಿರ್ವಹಿಸುವ ಅಧಿಕಾರ ಚಲಾಯಿಸುವ ಸುವ್ಯವಸ್ಥೆ ತರುವ ಪ್ರಯತ್ನ ಮಾಡದಿದ್ದರೆ ವ್ಯವಸ್ಥೆ ಬದಲಾಯಿಸಲು ಸಾಧ್ಯವಾಗುವುದಿಲ್ಲ. ಜಿಪಂ ಅಧ್ಯಕ್ಷರು ಆತ್ಮವಿಶ್ವಾಸ ಹೊಂದುವ ಮೂಲಕ ಗಟ್ಟಿಯಾಗಬೇಕು ಎಂದು ಸಲಹೆ ನೀಡಿದರು.

1962ರಲ್ಲಿ ಜವಾಹರ್‌ಲಾಲ್‌ ನೆಹರು ಅವರಿಂದ ಚಾಲನೆ ಗೊಂಡ ಕರ್ನಾಟಕ ಪಂಚಾಯತ್‌ ಪರಿಷತ್‌ ಬೆಂಗಳೂರು ಗ್ರಾಮಾಂತರ ಜಿಪಂ ಮಾಜಿ ಅಧ್ಯಕ್ಷ ಸಿ. ನಾರಾಯಣಸ್ವಾಮಿ ಮಾತನಾಡಿ, 73-74ನೇ ಸಂವಿಧಾನ ತಿದ್ದುಪಡಿ ಮೂಲಕ ಜಾರಿಗೆ ಬಂದ ಪಂಚಾಯತ್‌ರಾಜ್‌ ಕರ್ನಾಟಕದಲ್ಲಿ ವಿಶಿಷ್ಟವಾಗಿ ಬೆಳವಣಿಗೆಯಾಗಿದೆ. ರಾಷ್ಟ್ರದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯ ಪಂಚಾಯತ್‌ ರಾಜ್‌ ಕಾಯ್ದೆಯಲ್ಲಿ ಅತ್ಯುತ್ತಮ ಅಂಶಗಳಿವೆ ಎಂದು ಅಭಿಪ್ರಾಯಪಟ್ಟರು.

Advertisement

ಡಾ. ಸ.ಚಿ.ರಮೇಶ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ವಿಶ್ವವಿದ್ಯಾಲಯದ ಪ್ರತಿಯೊಂದು ಕಾರ್ಯಕ್ರಮಗಳು ಜನಸಾಮಾನ್ಯರನ್ನು ತಲುಪಬೇಕು. ಪ್ರಜಾಪ್ರಭುತ್ವದ ಆಳ, ಗಟ್ಟಿತನ ಇರುವುದು ಸ್ಥಳೀಯ ವ್ಯವಸ್ಥೆಯಲ್ಲಿ. ಸ್ಥಳೀಯ ವ್ಯವಸ್ಥೆಯನ್ನು ಗೌರವಿಸಿ ಎಡರು, ತೊಡರುಗಳನ್ನು
ಸರಿಪಡಿಸಿಕೊಂಡರೆ ಒಳ್ಳೆಯ ಆಡಳಿತ ಹೊಂದಲು ಸಾಧ್ಯ ಎಂದರು.

ಕುಲಸಚಿವರಾದ ಡಾ. ಅಶೋಕಕುಮಾರ ರಂಜೇರೆ ಇದ್ದರು. ಅಭಿವೃದ್ಧಿ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜನಾರ್ದನ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಡಾ. ಗೀತಮ್ಮ ನಿರೂಪಿಸಿದರು. ಡಾ. ಗೋವರ್ಧನ ವಂದಿಸಿದರು.

ಮೂರು ಹಂತದ ಪಂಚಾಯತ್‌ಗಳ ಪರವಾಗಿ ಕಾರ್ಯನಿರ್ವಹಿಸಲು ತಯಾರಿದ್ದರೂ ಸರ್ಕಾರದಿಂದ ಹಣಕಾಸಿನ ನೆರವು ದೊರೆತಿಲ್ಲ. ಸರಿಯಾದ ಪಂಚಾಯತ್‌ರಾಜ್‌ ವ್ಯವಸ್ಥೆ ಅಸ್ತಿತ್ವಕ್ಕೆ ಬಂದರೆ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಗ್ರಾಮ ಮಟ್ಟದಲ್ಲಿ ಗ್ರಾಮ ಸಭೆಗಳಂತೆ ನಗರ ಪ್ರದೇಶಗಳಲ್ಲಿ ವಾರ್ಡ್‌ ಸಭೆಗಳು ಅಸ್ತಿತ್ವಕ್ಕೆ ಬಂದರೆ ಅನೇಕ ಅನುಕೂಲಗಳಾಗುತ್ತದೆ. ಸಂವಿಧಾನದಲ್ಲಿರುವ ನಿಯಮಗಳಂತೆ ಕೆಲಸಗಳಾಗುತ್ತಿಲ್ಲ. ಗ್ರಾಮ ಸಭೆಗಳನ್ನು ಸಬಲೀಕರಣಗೊಳಿಸಬೇಕಾಗಿದೆ.
 ಡಿ.ಆರ್‌. ಪಾಟೀಲ, ಮಾಜಿ ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next