Advertisement

ಎಚ್ಚರ…Zoom App ಸುರಕ್ಷಿತಲ್ಲ;ದಿಢೀರ್ ಜನಪ್ರಿಯವಾದ ಆ್ಯಪ್ ಬಗ್ಗೆ ಕೇಂದ್ರ ಸರ್ಕಾರದ ಸೂಚನೆ

09:04 AM Apr 17, 2020 | Nagendra Trasi |

ನವದೆಹಲಿ:ಏಕಕಾಲಕ್ಕೆ ನೂರು ಜನರನ್ನು ಸೇರಿಸಿಕೊಳ್ಳಬಹುದಾದ ಉಚಿತ ಎಚ್ ಡಿ ವಿಡಿಯೋ ಕಾಲ್ ಝೂಮ್ ಆ್ಯಪ್ ಸುರಕ್ಷಿತವಲ್ಲ. ಈ ಹಿನ್ನೆಲೆಯಲ್ಲಿ ಕಚೇರಿ ಮೀಟಿಂಗ್, ಆಫೀಸ್ ಟ್ರೈನಿಂಗ್ ಗೆ ಬಳಸಿಕೊಳ್ಳದಂತೆ ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.

Advertisement

ಝೂಮ್ ಆ್ಯಪ್ ಸುರಕ್ಷಿತವಲ್ಲ ಎಂಬ ಹಿನ್ನೆಲೆಯಲ್ಲಿ ಖಾಸಗಿ ಬಳಕೆದಾರರಿಗೂ ಕೂಡಾ ನಿಯಮಾವಳಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಯಾರು ವೈಯಕ್ತಿಕ ಉದ್ದೇಶಕ್ಕಾಗಿ ಝೂಮ್ ಬಳಸುವವರು ಕೂಡಾ ಎಚ್ಚರದಿಂದ ಇರಬೇಕು ಎಂದು ಕೇಂದ್ರ ಸೂಚನೆ ನೀಡಿದೆ.

ದೇಶಾದ್ಯಂತ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಘೋಷಿಸಿದ್ದ ನಂತರ ದೇಶದಲ್ಲಿ ದಿಢೀರನೆ ಝೂಮ್ ಆ್ಯಪ್ ಬಳಕೆದಾರರ ಸಂಖ್ಯೆ ದ್ವಿಗುಣವಾಗಿತ್ತು. ಕಚೇರಿಗಳಲ್ಲಿ ವಿಡಿಯೋ ಕಾಲ್ ಸೇರಿದಂತೆ ವಿವಿಧ ಉದ್ದೇಶಗಳಿಗೆ ಝೂಮ್ ಆ್ಯಪ್ ಬಳಕೆ ಹೆಚ್ಚಾಗಿತ್ತು ಎಂದು ವರದಿ ವಿವರಿಸಿದೆ.

ಝೂಮ್ ಆ್ಯಪ್ ಬಳಕೆ ಸುರಕ್ಷಿತವಲ್ಲ, ಒಂದು ವೇಳೆ ವೈಯಕ್ತಿಕವಾಗಿ ಬಳಸುತ್ತಿದ್ದರು ಕೂಡಾ ಅವರಿಗೆ ಈಗಾಗಲೇ ಸಿಇಆರ್ ಟಿ ಇಂಡಿಯಾದ ಮೂಲಕ ವಿವರವಾದ ಸಲಹೆಯ ಮಾರ್ಗಸೂಚಿಯನ್ನು ಕಳುಹಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next