ಮೂಲ ವಿಜ್ಞಾನದ ಭಾಗವಾಗಿರುವ ಇದು ಸಂಶೋಧನೆಯಿಂದ ಹಿಡಿದು ಸ್ವ ಉದ್ಯೋಗದವರೆಗೆ ಬೇರೆ ಬೇರೆ ಆಯಾಮಗಳಲ್ಲಿ ಇಂದು ಉದ್ಯೋಗಾವಕಾಶವನ್ನು ನೀಡಿದೆ.
Advertisement
Qಕಲಿಕೆಯ ಅನಂತರ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿದ್ದಾರೆಯೇ?ವಿದ್ಯಾರ್ಥಿಗಳು ಕಲಿಕೆಯ ಅನಂತರ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಬದಲು ಪದವಿ ಮಟ್ಟದಲ್ಲೇ ಈ ರೀತಿಯಾಗಿ ಸಂಶೋಧನೆಗಳನ್ನು ನಡೆಸಿ, ಆ ವಿಷಯದಲ್ಲಿ ಮುಂದುವರಿಯುವ ಆಸಕ್ತಿಯನ್ನು ಕೆಲವರಾದರೂ ತೋರಿಸುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ಜೀವವಿಜ್ಞಾನದ ಯಾವುದೇ ವಿಭಾಗಗಳ ಸ್ನಾತಕೋತ್ತರ ಅಧ್ಯಯನಕ್ಕೆ ಅವಕಾಶ ಇರುತ್ತವೆ. ಜೀವಶಾಸ್ತ್ರದ ಭಾಗವಾಗಿರುವ ಪ್ರಾಣಿಶಾಸ್ತ್ರ ಸಂಶೋಧನ ವಿದ್ಯಾರ್ಥಿ ಗಳಿಗೆ ಒಂದು ಉತ್ತಮ ಆಯ್ಕೆ. ಪ್ರಾಣಿ ಗಳ ವರ್ಗೀಕರಣಗಳಿಂದ ಪ್ರಾರಂಭಿಸಿ ಶರೀರಶಾಸ್ತ್ರ, ತಳವಿಜ್ಞಾನ, ಅಣುವಿಜ್ಞಾನ, ವಿಕಸನಶಾಸ್ತ್ರ ಹಾಗೂ ಭೌತಶಾಸ್ತ್ರಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬಹುದು. Qಉದ್ಯೋಗ, ಸಂಪಾದನೆ ಗಾಗಿ ಮಾತ್ರ ವಿಜ್ಞಾನ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ನಿಮ್ಮ ಕಿವಿಮಾತೇನು?
ವಿಜ್ಞಾನವನ್ನು ಉದ್ಯೋಗ ಅಥವಾ ಸಂಪಾದನೆಯ ದೃಷ್ಟಿಯಿಂದ ಆಯ್ಕೆ ಮಾಡಬಹುದು ಎನ್ನುವುದು ನನ್ನ ಅನಿಸಿಕೆ. ವಿಷಯದಲ್ಲಿ ವಿಶೇಷವಾದ ಜ್ಞಾನ, ಕ್ರಿಯಾಶೀಲತೆಯನ್ನು ಮೂಡಿಸಿದಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಪ್ರಾಣಿಶಾಸ್ತ್ರವನ್ನು ಕಲಿತರೂ ವಿವಿಧ ಪ್ರಯೋಗಾಲಯಗಳಲ್ಲಿ, ಅನೇಕ ಸಂಶೋಧನ ಸಂಸ್ಥೆಗಳಲ್ಲಿ ಕೆಲಸ ಪಡೆಯಬಹುದು.
Related Articles
Advertisement
Qಪ್ರಾಣಿಶಾಸ್ತ್ರ ಕ್ಷೇತ್ರದಲ್ಲಿ ಆಗಬೇಕಾಗಿರುವ ಬದಲಾವಣೆಗಳು ಏನು? ಹೇಗೆ? ಮೂಲ ಪ್ರಾಣಿಶಾಸ್ತ್ರಗಳ ವಿಭಾಗಗಳಾದ ಟೇಕ್ಸೊನೋಮಿ (ಜೀವ ವರ್ಗೀಕರಣಶಾಸ್ತ್ರ), ಕೀಟಶಾಸ್ತ್ರಗಳಂತಹ ವಿಷಯಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಅಧ್ಯಯನ ಮತ್ತು ಸಂಪನ್ಮೂಲ ವ್ಯಕ್ತಿಗಳು ತಯಾರಾಗಬೇಕಿದೆ. ಪದವಿ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅಂಗಾಂಶ ರಚನೆಯನ್ನು ತಿಳಿಸಿ ಕೊಡುವುದಕ್ಕಾಗಿ ಕೆಲವೊಂದು ಪ್ರಾಣಿಗಳ ಡಿಸೆಕ್ಷನ್ ಆದರೂ ಪಠ್ಯದಲ್ಲಿ ಅಳವಡಿಸಿಕೊಳ್ಳಬೇಕು.