ಮೈಸೂರು: ಕೋವಿಡ್-19 ನಿಯಂತ್ರಣ ಕ್ರಮವಾಗಿ ಕಳೆದ 86 ದಿನ ಬಂದ್ ಆಗಿದ್ದ ಶ್ರೀ ಚಾಮರಾಜೇಂದ್ರ ಮೃಗಾಲಯ ಜೂ.8 ರಿಂದ ಪುನಾರಂಭ ವಾಗಲಿದ್ದು, ಪ್ರವಾಸಿಗರನ್ನು ಸ್ವಾಗತಿಸಲು ಸಕಲ ಮುಂಜಾಗೃತಾ ಕ್ರಮಗೊಳೊಂದಿಗೆ ಆಡಳಿತ ಮಂಡಳಿ ಸಜ್ಜಾಗಿದೆ ಎಂದು ಮೃಗಾಲಯ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಎಂ. ಕುಲಕರ್ಣಿ ತಿಳಿಸಿದರು.
ಮೈಸೂರಿನ ಕುಂಬಾರಕೊಪ್ಪಲು ಹಾಗೂ ಹೆಬ್ಟಾಳು ಸುತ್ತಮುತ್ತ ಕೋಳಿ, ಕೆಲ ಪಕ್ಷಿಗಳೂ ಹಕ್ಕಿಜ್ವರದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯವನ್ನು ಬಂದ್ ಮಾಡಲು ನಿರ್ಧರಿಸಲಾಗಿತ್ತು. ಕೊರೊನಾ ಸೋಂಕು ಹಿನ್ನೆಲೆ ಯಲ್ಲಿ ರಾಜ್ಯದ 9 ಮೃಗಾಲ ಯಗಳನ್ನು ಮಾ.15ರಿಂದ 23ರವರೆಗೆ ಬಂದ್ ಮಾಡಲು ಮೃಗಾಲಯ ಪ್ರಾಧಿಕಾರ ಘೋಷಿಸಿತ್ತು. ಲಾಕ್‌ಡೌನ್‌ನಿಂದ ಬಂದ್ ಅವಧಿ ವಿಸ್ತರಿಸ ಲಾಗಿತ್ತು ಎಂದು ಮಾಹಿತಿ ನೀಡಿದರು.
ಗ್ರೀನ್ ಸಿಗ್ನಲ್: ಕೇಂದ್ರ ಮೃಗಾಲಯ ಪ್ರಾಧಿಕಾರ ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಜೂ.8ರಿಂದ ಮೃಗಾಲಯಗಳ ಪುನಾರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಅಲ್ಲದೆ ಕೊರೊನಾ ಹರಡಂತೆ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ಪ್ರವಾಸಿಗರು, ಸಿಬ್ಬಂದಿ ಹಾಗೂ ಪ್ರಾಣಿ-ಪಕ್ಷಿಗಳ ಹಿತ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಭೌತಿಕ ಅಂತರ ಕಾಪಾಡಿಕೊಳ್ಳಿ: ಮೃಗಾಲಯ ಪುನಾರಂಭಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅದಕ್ಕೆ ಸರ್ಕಾರ ಸಮ್ಮತಿಸಿ, ಜೂ.8ರಿಂದ ಮೃಗಾಲಯ ತೆರೆಯಲು ಅನುಮತಿ ನೀಡಿ, ಬೆಳಗ್ಗೆ 8.30 ರಿಂದ ಸಂಜೆ 5.30ರವರೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾಸ್ಕ್ ಧರಿಸು ವುದು, ಪ್ರವಾಸಿಗರ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಂಡು ಟಿಕೆಟ್ ಖರೀದಿಗೆ ಸೂಚನೆ ನೀಡಲಾಗು ತ್ತದೆ. ಮೃಗಾ ಲಯ ವೀಕ್ಷಣೆಗೆ ಪ್ರವಾಸಿಗರಿಗೆ 3 ಗಂಟೆ ಅವಧಿ ನಿಗದಿಪಡಿಸಿದೆ ಎಂದು ಹೇಳಿದರು.
ಕಡ್ಡಾಯ ನಿಯಮ ಪಾಲನೆ: ಲಗ್ಗೇಜ್ ಅಥವಾ ಲಾಕರ್ ರೂಂ ಪ್ರವೇಶ ನಿರ್ಬಂಧ, ಬ್ಯಾರಿಕೇಡ್ ಮುಟ್ಟದಂತೆ ಜಾಗೃತಿ ಮೂಡಿ ಸುವುದು. ಆವರಣ ದೊಳಗೆ ಎಲ್ಲಿಯೂ ಉಗುಳಬಾರದು, ಪಾನ್ ಮಸಾಲಾ ನಿಷೇಧಿಸಲಾಗಿದೆ. ಗಂಟೆಗೆ ಕೇವಲ 1ಸಾವಿರ ಪ್ರವಾಸಿ ಗರಿಗೆ ಮೃಗಾಲಯ ವೀಕ್ಷಣೆಗೆ ಪ್ರವೇಶ ನೀಡ ಲಾಗುತ್ತದೆ. ಇದರಿಂದ ಒಂದು ದಿನದಲ್ಲಿ 8,000 ಜನರು ಭೇಟಿ ನೀಡಲು ಅವಕಾಶ ವಿದೆ. ಪ್ರತಿಯೊಬ್ಬರು ಮೆಡಿಕೇಟೆಡ್ ಫುಟ್ ಮ್ಯಾಟ್ ಮೇಲೆ ಪಾದವೂರಿ ಒಳ ಪ್ರವೇಶಿಸ ಬೇಕು. ಪ್ರಾಣಿ-ಪಕ್ಷಿ ವೀಕ್ಷಣೆ ವೇಳೆ ಮಾತ್ರವಲ್ಲದೆ ಶೌಚಾಲಯ, ಕುಡಿಯುವ ನೀರು, ಅಂಗಡಿ ಮಳಿಗೆ, ಬ್ಯಾಟರಿ ಚಾಲಿತ ವಾಹನ ಸೇರಿದಂತೆ ಹಲವೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜೂ.8ರಿಂದ ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಪುನರಾರಂಭ ಮಾಡಲಾಗುವುದು. ಕೊರೊನಾ ವೈರಾಣು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರು ನಿರಾತಂಕವಾಗಿ ಮೃಗಾಲಯ ವೀಕ್ಷಿಸಬಹುದು. ಪ್ರಾಣಿ-ಪಕ್ಷಿ, ಸಿಬ್ಬಂದಿ ಹಾಗೂ ಪ್ರವಾಸಿಗರ ಹಿತರಕ್ಷಣೆಯೂ ನಮ್ಮ ಜವಾಬ್ದಾರಿಯಾಗಿದೆ.
-ಅಜಿತ್ ಎಂ.ಕುಲಕರ್ಣಿ, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ