Advertisement

Zomato ಫುಡ್‌ ಡೆಲಿವರಿ ಮಾಡುವ ಮಹಿಳೆಯರಿಗೆ ಕುರ್ತಾ

01:07 AM Mar 10, 2024 | Team Udayavani |

ಹೊಸದಿಲ್ಲಿ: ಆಹಾರ ಸರಬರಾಜು ಆ್ಯಪ್‌ ಝೊಮ್ಯಾಟೋ, ಫುಡ್‌ ಡೆಲಿವರಿ ಮಾಡುವ ಮಹಿಳೆಯರಿಗೆ ಕುರ್ತಾ ಸಮವಸ್ತ್ರವನ್ನು ಪರಿ­ಚಯಿಸಿದೆ. ಈ ಮೊದಲು ಅವರಿಗೆ ಝೊಮ್ಯಾಟೋ ಟಿ ಶರ್ಟ್ಸ್ ನೀಡಲಾಗುತ್ತಿತ್ತು. ಈ ಹೊಸ ಸಮವಸ್ತ್ರ ವೀಡಿ­ಯೋವನ್ನು ಕಂಪೆನಿಯು ಸೋಷಿಯಲ್‌ ಮೀಡಿಯಾ­ದಲ್ಲಿ ಹಂಚಿಕೊಂಡಿದ್ದು, ಭಾರೀ ಮೆಚ್ಚುಗೆ ದೊರೆತಿದೆ.

Advertisement

ಟೀ ಶರ್ಟ್‌ ಸಮವಸ್ತ್ರದಿಂದಾಗುತ್ತಿರುವ ತೊಂದರೆಗಳ ಬಗ್ಗೆ ಮಹಿಳೆಯರು ದೂರು ನೀಡಿ­ದ್ದರು. ಹಾಗಾಗಿ, ಕಂಪೆನಿಯು ಅವರಿಗೆ ದೇಶಿ ಶೈಲಿಯ ಕುರ್ತಾ ಒದಗಿಸಿದೆ. ಇದರಿಂದ ಕೆಲಸ ಮಾಡುವ ಮಹಿಳೆಯರು ಫುಡ್‌ ಖುಷ್‌ ಆಗಿ­ದ್ದಾರೆ. ಫುಡ್‌ ಡೆಲಿವರಿ ಸಂಸ್ಥೆಗಳ ಪೈಕಿ ಝೊಮ್ಯಾಟೋ ಪ್ರಮುಖ ಸಂಸ್ಥೆಯಾಗಿದೆ. ನಿತ್ಯ ಝೊಮ್ಯಾಟೋ 1.3 ಮಿಲಿಯನ್‌ ಫುಡ್‌ ಡೆಲಿವರಿ ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next