ಲಂಡನ್: ವಿವಾದಿತ ಝಿಂಗ್ ಬೇಲ್ಸ್ ಬದಲಿಸುವಂತೆ ವಿಶ್ವಕಪ್ ಸ್ಟಾರ್ ಆಟಗಾರರಿಂದ ಬಹಳಷ್ಟು ಬೇಡಿಕೆ ಬಂದರೂ ಅವುಗಳನ್ನು ಮುಂದುವರಿಸಲು ಐಸಿಸಿ ನಿರ್ಧರಿಸಿದೆ. ಚೆಂಡು ಸ್ಟಂಪ್‌ಗೆ ಬಡಿದು ಝಿಂಗ್ ಬೇಲ್ಸ್ ಮಿನುಗುತ್ತಿವೆ. ಆದರೆ, ಸ್ಥಳಾಂತರಗೊಳ್ಳುತ್ತಿಲ್ಲ. ಇಷ್ಟಾದರೂ ಸಾಂಪ್ರದಾಯಿಕ ಮರದ ಮಾದರಿಯ ಬೇಲ್ಸ್ ಬಳಸಲು ಐಸಿಸಿ ನಿರಾಕರಿಸಿದೆ.
‘ಪಂದ್ಯಾವಳಿಯ ಮಧ್ಯದಲ್ಲಿ ನಾವು ಏನನ್ನೂ ಬದಲಾಯಿಸುವುದಿಲ್ಲ. ಈ ಸಾಧನ ಎಲ್ಲ 10 ತಂಡಗಳಿಗೂ, ಎಲ್ಲ 48 ಪಂದ್ಯಗಳಲ್ಲೂ ಒಂದೇ ರೀತಿ ಇರುತ್ತದೆ. 2015ರ ವಿಶ್ವಕಪ್‌ನಿಂದ ಸ್ಟಂಪ್‌ಗ್ಳನ್ನೂ ಬದಲಿಸಿಲ್ಲ. ಸುಮಾರು 1000 ಪಂದ್ಯಗಳಂತೂ ಆಗಿವೆ. ವಿವಾದಗಳು ಪಂದ್ಯಗಳ ಭಾಗವಾಗಿರುತ್ತವೆ. ಚೆಂಡು ಸ್ಟಂಪ್‌ಗ್ಳಿಗೆ ವೇಗವಾಗಿ ಬಡಿಯದಿದ್ದರೆ ಬೇಲ್ಸ್ ಬೀಳುವುದಿಲ್ಲ ಅಷ್ಟೇ’ ಎಂದು ಐಸಿಸಿ ಸ್ಪಷ್ಟಪಡಿಸಿದೆ.
Advertisement
ಭಾರತ-ಆಸ್ಟ್ರೇಲಿಯ ಪಂದ್ಯದ ವೇಳೆ ಬುಮ್ರಾ ಎಸೆತ ಸ್ಟಂಪ್‌ಗೆ ಬಡಿದರೂ ಬೇಲ್ಸ್ ಎಗರಿ ಬೀಳದೆ ವಾರ್ನರ್ ಔಟಾಗುವುದರಿಂದ ಬಚಾವಾಗಿದ್ದರು. ಇದೇನೂ ಮೊದಲ ಬಾರಿಯಲ್ಲ. ಈ ಬಾರಿಯ ವಿಶ್ವಕಪ್‌ನಲ್ಲಿ ಬಹಳಷ್ಟು ಸಲ ಸಲ್ ಝಿಂಗ್ ಬೇಲ್ಸ್ಗಳು ಸ್ಟಂಪ್ ಬಿಟ್ಟು ಕದಲದೆ ಬೌಲರ್‌ಗಳು ವಿಕೆಟ್ ಪಡೆಯುವುದರಿಂದ ವಂಚಿತರಾಗಿದ್ದಾರೆ.