ಮುಂಬಯಿ: ರೋಹಿತ್ ಶರ್ಮ ಅವರು ಭಾರತೀಯ ಕ್ರಿಕೆಟ್‌ನ ಎಲ್ಲ ಮಾದರಿಯ ತಂಡಗಳ ನಾಯಕರಾಗಿದ್ದಾರಲ್ಲದೇ ಲಾ ಲಿಗಾ ಫುಟ್ ಬಾಲ್ ತಂಡದ ಭಾರತದ ಅಧಿಕೃತ ರಾಯಭಾರಿ ಕೂಡ ಆಗಿದ್ದಾರೆ.
34ರ ಹರೆಯದ ರೋಹಿತ್ ಅವರು ಸ್ಪಾನಿಷ್ ಫುಟ್ ಬಾಲ್ ಲೀಗ್‌ನ ಪ್ರಚಾರ ಕಾರ್ಯವನ್ನು ಕೂಡ ಮಾಡುತ್ತಿದ್ದಾರೆ. ಮಾತ್ರವಲ್ಲದೇ ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಲೋನಾ ನಡುವಣ ಪಂದ್ಯವೊಂದನ್ನು ವೀಕ್ಷಿಸಲು 2020ರಲ್ಲಿ ಯುರೋಪ್‌ಗೆ ಪ್ರಯಾಣ ಬೆಳೆಸಿದ್ದರು. ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಲೋನಾ ದೀರ್ಘ ಸಮಯದಿಂದ ವಿಶ್ವ ಫುಟ್ ಬಾಲ್‌ನ ಬೃಹತ್ ಕ್ಲಬ್‌ಗಳಾಗಿವೆ.
ರೋಹಿತ್ ತನ್ನ ಫೇವರಿಟ್ ಫುಟ್ ಬಾಲರ್ ಯಾರೆಂದು ಬಹಿರಂಗಪಡಿಸಿದ್ದಾರೆ. ರಿಯಲ್ ಮ್ಯಾಡ್ರಿಡ್‌ನ ಮಾಜಿ ಫುಟ್ ಬಾಲರ್ ಆಗಿರುವ ಜಿನೆದಿನ್ ಜಿದಾನೆ ಅವರು ರೋಹಿತ್ ಅವರ ಫೇವರಿಟ್ ಆಟಗಾರ ಆಗಿದ್ದಾರೆ. ಜಿದಾನೆ ಫ್ರಾನ್ಸ್ ಪರ ನಾಲ್ಕು ವಿಶ್ವಕಪ್ ಕೂಟಗಳಲ್ಲಿ ಆಡಿದ್ದಾರೆ. ರಿಯಲ್ ಮ್ಯಾಡ್ರಿಡ್‌ನ ಮ್ಯಾನೇಜರ್ ಆಗಿಯೂ ಕರ್ತವ್ಯ ನಿಭಾಯಿಸಿದ ಜಿದಾನೆ 1998ರಲ್ಲಿ ಬಾಲನ್ ಡಿ’ಓರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಜಿದಾನೆ ಅವರ ಬಲುದೊಡ್ಡ ಅಭಿಮಾನಿಗಳ ಪಟ್ಟಿಯಲ್ಲಿ ರೋಹಿತ್ ಅವರ ಹೆಸರೂ ಸೇರಿಕೊಂಡಿದೆ.
ಇದನ್ನೂ ಓದಿ:ಐಪಿಎಲ್ : ಏಕಪಕ್ಷೀಯವಾಗಿ ಗೆದ್ದ ಕೋಲ್ಕತ್ತ ನೈಟ್ ರೈಡರ್ಸ್
ರೋಹಿತ್ ಸದ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದಾರೆ. ಡೆಲ್ಲಿ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಅವರು 31 ಎಸೆತಗಳಿಂದ 42 ರನ್ ಗಳಿಸಿದ್ದಾರೆ. ದ್ವಿತೀಯ ಪಂದ್ಯದಲ್ಲಿ ಕೇವಲ 10 ರನ್ನಿಗೆ ಔಟಾಗಿದ್ದರು.