Advertisement
ಬಳ್ಳಾರಿಯ ತೋರಣಗಲ್ಲಿನ ಜಿಂದಾಲ್ ಸ್ಟೀಲ್ ಕಾರ್ಖಾನೆಯಲ್ಲಿ ಒಂದಷ್ಟು ಜನ ನೌಕರರು ಇದ್ದಾರೆ. ಅವರ ಇಷ್ಟದ ಕೆಲಸ ಅಂದರೆ ಸಮಾಜ ಸೇವೆ. ಅನಾಥರು, ನಿರ್ಗತಿಕರು, ಬಡ ವಿದ್ಯಾರ್ಥಿಗಳು, ರೋಗಿಗಳು… ಹೀಗೆ ಎಲ್ಲಾ ವರ್ಗದ ಜನರಿಗಾಗಿ ಸದಾ ತುಡಿಯುವ ಸಮಾನ ಮನಸ್ಕರರ ತಂಡ ಇದು. ಇದಕ್ಕೆ “ಯುವ ಸೇವಾ’ ಅಂತ ಹೆಸರಿಟ್ಟುಕೊಂಡಿದ್ದಾರೆ. ಸ್ವಾಮಿ ವಿವೇಕಾನಂದರ ಮಾತುಗಳೇ ಇವರಿಗೆ ಸ್ಫೂರ್ತಿಯಂತೆ. ಯುವ ಸೇವಾ ತಂಡದಲ್ಲಿರುವ ಪ್ರತಿಯೊಬ್ಬರು ಬಡತನವನ್ನು ಅನುಭವಿಸಿ ಬಂದವರೇ.
Related Articles
Advertisement
ವಾಟ್ಯಾ$Õಪ್ , ಫೇಸ್‌ಬುಕ್, ಇ-ಮೇಲ್ ಮೂಲಕ ಸದಸ್ಯರನ್ನು ಸಂಪರ್ಕಿಸುತ್ತಾರೆ. ಅಲ್ಲಿ ಕೂಡ ಚರ್ಚೆ ನಡೆದು ಕೊನೆಗೆ ಕಾರ್ಯಕ್ರಮ ಫೈನಲ್ ಆಗುತ್ತೆ. ಇಲ್ಲಿ ಸಂಗ್ರಹವಾಗುವ ಪ್ರತಿ ಪೈಸೆಗೂ ಲೆಕ್ಕ ಇರುತ್ತದೆ. ಆಗಿಂದಾಗ್ಗೆ ಆದ ವೆಚ್ಚದ ಬಗ್ಗೆ ತಂಡದ ಸದಸ್ಯರಿಗೆ ತಿಳಿಸಲಾಗುತ್ತದೆ. ಒಟ್ಟಿನಲ್ಲಿ ಸೇವೆ ಸಂಪೂರ್ಣ ಪಾರದರ್ಶಕ.
ಬಳ್ಳಾರಿಯ ಸಂಗನಕಲ್ಲು ರಸ್ತೆಯಲ್ಲಿರುವ ವೃದ್ಧಾಶ್ರಮ, ಅನಾಥಶ್ರಮ, ಸುಧಾ ಕ್ರಾಸ್ ಬಳಿಯ ಬುದ್ಧಿಮಾಂಧ್ಯ ಮಕ್ಕಳ ಆಶ್ರಮ, ಅನಾಥರು, ಬಡ ಶಾಲಾ ಮಕ್ಕಳು, ಹೊಸಪೇಟೆಯ ಕಾರುಣ್ಯ ಅನಾಥಶ್ರಮ.. ಹೀಗೆ ಇವರ ಸೇವೆ ನಾನಾ ಕಡೆ ನಡೆಯುತ್ತಲೇ ಇರುತ್ತದೆ. ಆಶ್ರಮಗಳ ಶೌಚಾಲಯದಿಂದ ಡಿದು ಬಟ್ಟೆ ಬರೆ, ಬೆಡ್‌ಶೀಟ್ ಶುಚಿ ಮಾಡುತ್ತಾರೆ!. ” ಇದರಲ್ಲಿ ಯಾವುದೇ ಮುಜುಗರ, ಸಂಕೋಚ, ಅಸಹ್ಯ ಆಗಲ್ಲ. ಎಲ್ಲರೂ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತೇವೆ. ಸೇವೆ ಅಂದರೆ ಇದೇ ತಾನೆ..’ ಎನ್ನುತ್ತಾರೆ ತಂಡದ ಸತೇಂದ್ರ ಕುಮಾರ್.
ಆಶ್ರಮಗಳಿಗೆ ಬೆಡ್‌ಶೀಟ್, ಕಾಟ್‌ಗಳು, ಹೊಸ ಉಡುಪು, ಹಣ್ಣು ಹಂಪಲುಗಳನ್ನು ತಂಡ ವಿತರಿಸುತ್ತದೆ. ಚಳಿಗಾಲದಲ್ಲಿ ರಸ್ತೆಬದಿಯಲ್ಲಿ ಮಲಗಿರುವ ಭಿಕ್ಷುಕರಿಗೆ ಬೆಚ್ಚನೆಯ ಉಡುಪು ವಿತರಿಸುತ್ತಾರೆ. ನಗರದ ಕೊಳಗೇರಿಗಳು, ಹಳ್ಳಿಗಳಿಗೆ ತೆರಳಿ ಸ್ವತ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುತ್ತಾರೆ. ಇತ್ತೀಚೆಗೆ ಉತ್ತರ ಕರ್ನಾಟದ ನೆರೆಗೆ ನಲುಗಿದವರಿಗೆ ಬಟ್ಟೆ ಬರೆ, ಬೆಡ್‌ಶೀಟ್ ಕಳುಹಿಸಿದ್ದಾರೆ.
ಯುವ ಸೇವೆಯ ಸದಸ್ಯರು ಸೇವೆ ಮಾಡಿ, ದಿನವಿಡೀ ಶಾಲಾ ಮಕ್ಕಳೊಂದಿಗೆ ಕಳೆದು, ಅವರೊಟ್ಟಿಗೆ ಆಟವಾಡುತ್ತಾರೆ. ನಕ್ಕು ನಲಿಯುತ್ತಾರೆ. ಇದರಿಂದ ಅವರಲ್ಲಿಯ ಅನಾಥಪ್ರಜ್ಞೆ, ಒಂಟಿತನ ದೂರವಾಗುತ್ತದೆ ಅನ್ನೋದು ಮೂಲ ಉದ್ದೇಶ. ” ರಿಮೋಟ್ ವಿಲೇಜ್‌ಗಳನ್ನು ಮೊದಲು ಗುರುತಿಸುತ್ತೇವೆ. ಅಲ್ಲಿ ಓದುವ ಮಕ್ಕಳ ಸ್ಥಿತಿಗತಿ ಅವಲೋಕಿಸುತ್ತೇವೆ. ಇವರಿಗೆ ಹೆಲ್ಪ್ ಮಾಡಿದರೆ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುತ್ತೆ ಎಂದು ಖಾತ್ರಿ ಆದ ನಂತರ ಕಲಿಕಾ ಸಾಮಗ್ರಿ ತರಿಸುತ್ತೇವೆ..’ ಎನ್ನುತ್ತಾರೆ ಮೃನ್ಮೆ„ ಪಶುಪಾಲಕ್. ಸಂಡೂರು ತಾಲ್ಲೂಕಿನ ತಾಳೂರು, ಚಿಕ್ಕಾಂತಪುರ, ನಿಡಗುರ್ತಿ.. ಹೀಗೆ, ವಿವಿಧ ಹಳ್ಳಿಯ ಶಾಲಾ ಮಕ್ಕಳ ಕಲಿಕೆಗೆ ಈಗಾಗಲೇ ಆಸರೆ ಆಗಿದ್ದಾರೆ. ” ಕೇವಲ ಮಕ್ಕಳಿಗೆ ಕಲಿಕಾ ಸಾಮಾಗ್ರಿ ತರಿಸಿ ಬರಲ್ಲ. ಸ್ಪರ್ಧಾತ್ಮಕ ಮನೋಭಾವ ಬೆಳೆಯಲಿ ಎಂದು ಪರೀಕ್ಷೆಯಲ್ಲಿ ಮೊದಲು ಬಂದವರಿಗೆ ಬಹುಮಾನ ನೀಡುವುದಾಗಿ ಘೋಷಿಸುವುದು ಉಂಟಂತೆ.
ಇನ್ನು ಅದೆಷ್ಟೋ ಬಡವರ ವೈದ್ಯಕೀಯ ವೆಚ್ಚ ಬರಿಸಿದ್ದಾರೆ. ತಂಡದ ಎಲ್ಲಾ ಸದಸ್ಯರು ರಕ್ತದಾನವನ್ನೂ ಸಹ ಮಾಡುತ್ತಾರೆ!. ಯಾರಿಗಾದರೂ ರಕ್ತದ ಅವಶ್ಯಕತೆ ಇದೆ ಎಂದು ತಿಳಿದ ತಕ್ಷಣವೇ ಬಂದರೆ ಸಾಕು ನಮ್ಮಲ್ಲಿ ಯಾರದ್ದು ಆ ರಕ್ತದ ಗುಂಪಿಗೆ ಹೊಂದಿಕೆ ಆಗುತ್ತೆ ಎಂದು ಪರಿಶೀಲಿಸಿ, ಆ ರೋಗಿಗಳಿಗೆ ಹತ್ತಿರ ಇರುವ ಸದಸ್ಯರು ಹೋಗಿ ರಕ್ತ ಕೊಡುತ್ತಾರೆ.
ಹೀಗೆ, ಯುವ ಸೇವೆಯೇ ಆಜನ್ಮ ಸಿದ್ಧ ಹಕ್ಕಾಗಿದೆ. ಮಾಹಿತಿಗೆ- 9482340985 ಸ್ವರೂಪಾನಂದ ಎಂ. ಕೊಟ್ಟೂರು