Advertisement
ಗೆಲುವಿಗೆ 388 ರನ್ನುಗಳ ಗುರಿ ಪಡೆದಿರುವ ಶ್ರೀಲಂಕಾ, 4ನೇ ದಿನದಾಟದ ಮುಕ್ತಾಯಕ್ಕೆ 3 ವಿಕೆಟಿಗೆ 170 ರನ್ ಮಾಡಿದೆ. ಉಳಿದ ಪೂರ್ತಿ ದಿನದ ಆಟದಲ್ಲಿ, 7 ವಿಕೆಟ್ ನೆರವಿನಿಂದ 218 ರನ್ ತೆಗೆಯುವ ಸವಾಲು ಲಂಕೆಯ ಮುಂದಿದೆ. ಇದೇನೂ ಅಸಾಧ್ಯವಲ್ಲ. ಆದರೆ ಜಿಂಬಾಬ್ವೆ ಬೌಲರ್‌ಗಳ ಕೈ ಮೇಲಾಗಿ, ಕೆಲವು ವಿಕೆಟ್‌ಗಳು ಪಟಪಟನೆ ಉದುರಿದರೆ ಆಗ ಲಂಕೆಗೆ ಗಂಡಾಂತರ ತಪ್ಪಿದ್ದಲ್ಲ.
Related Articles
Advertisement
ರಾಜ ಮೊದಲ ಶತಕ: ಇದಕ್ಕೂ ಮುನ್ನ 6ಕ್ಕೆ 252 ರನ್ ಮಾಡಿ 3ನೇ ದಿನದಾಟ ಮುಗಿಸಿದ್ದ ಜಿಂಬಾಬ್ವೆ 377ರ ತನಕ ತನ್ನ ದ್ವಿತೀಯ ಇನ್ನಿಂಗ್ಸ್ ಬೆಳೆಸಿತು. 97ರಲ್ಲಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಸಿಕಂದರ್ ರಾಜ ಬಹಳ ಬೇಗನೆ ಮೊದಲ ಶತಕದ ಸಂಭ್ರಮ ಆಚರಿಸಿದರು. 8ನೇ ವಿಕೆಟ್ ರೂಪದಲ್ಲಿ ಔಟಾದ ಅವರು 127 ರನ್ನುಗಳ ಕೊಡುಗೆ ಸಲ್ಲಿಸಿದರು. 205 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿತ್ತು.
37 ರನ್ ಮಾಡಿ ಆಡುತ್ತಿದ್ದ ಮಾಲ್ಕಂ ವಾಲರ್ 68 ರನ್ ಬಾರಿಸಿದರು (98 ಎಸೆತ, 8 ಬೌಂಡರಿ). ರಾಜ-ವಾಲರ್ ಅವರ 7ನೇ ವಿಕೆಟ್ ಜತೆಯಾಟದಲ್ಲಿ 154 ರನ್ ಹರಿದು ಬಂತು. ನಾಯಕ ಗ್ರೇಮ್ ಕ್ರೆಮರ್ ಕೂಡ ಬ್ಯಾಟಿಂಗಿನಲ್ಲಿ ಮಿಂಚಿ 48 ರನ್ ಕಾಣಿಕೆ ಸಲ್ಲಿಸಿದರು (94 ಎಸೆತ, 5 ಬೌಂಡರಿ). ಶ್ರೀಲಂಕಾ ಪರ ಸ್ಪಿನ್ನರ್ ರಂಗನ ಹೆರಾತ್ 133 ರನ್ನಿಗೆ 6 ವಿಕೆಟ್ ಉಡಾಯಿಸಿದರು. ಈ ಪಂದ್ಯದಲ್ಲಿ ಹೆರಾತ್ ಸಾಧನೆ 249ಕ್ಕೆ 11 ವಿಕೆಟ್.
ಸಂಕ್ಷಿಪ್ತ ಸ್ಕೋರ್: ಜಿಂಬಾಬ್ವೆ-356 ಮತ್ತು 377 (ರಾಜ 127, ವಾಲರ್ 68, ಕ್ರೆಮರ್ 48, ಹೆರಾತ್ 133ಕ್ಕೆ 6, ದಿಲುÅವಾನ್ 95ಕ್ಕೆ 3). ಶ್ರೀಲಂಕಾ-346 ಮತ್ತು 3 ವಿಕೆಟಿಗೆ 170 (ಮೆಂಡಿಸ್ ಬ್ಯಾಟಿಂಗ್ 60, ಕರುಣಾರತ್ನೆ 49, ಕ್ರೆಮರ್ 67ಕ್ಕೆ 2).