Advertisement

ಜಿಂಬಾಬ್ವೆ ಆಟಗಾರರಿಂದ ಪಾಕ್‌, ಆಸೀಸ್‌ ಟಿ20 ಸರಣಿ ಬಹಿಷ್ಕಾರ?

06:00 AM Jun 06, 2018 | |

ಹರಾರೆ: ಜಿಂಬಾಬ್ವೆ ಕ್ರಿಕೆಟ್‌ ಮಂಡಳಿ ಆಟಗಾರರಿಗೆ ಇನ್ನೂ ಸಂಭಾವನೆ ನೀಡಿಲ್ಲ. ಇದೇ ಕಾರಣದಿಂದ ಜಿಂಬಾಬ್ವೆ ತಂಡದ ಆಟಗಾರರು ಮುಂಬರುವ ಪಾಕಿಸ್ಥಾನ ಹಾಗೂ ಆಸ್ಟ್ರೇಲಿಯ ವಿರುದ್ಧದ ತ್ರಿಕೋನ ಟಿ20 ಸರಣಿಯನ್ನು ಬಹಿಷ್ಕರಿಸುವ ಬೆದರಿಕೆ ಹಾಕಿದ್ದಾರೆ. 

Advertisement

ಜು.1ಕ್ಕೆ ತ್ರಿಕೋನ ಸರಣಿ ನಡೆಯಲಿದೆ. ಸದ್ಯ ಜಿಂಬಾಬ್ವೆ ಕ್ರಿಕೆಟ್‌ ಮಂಡಳಿ ಆಟಗಾರರಿಗೆ ಮೂರು ತಿಂಗಳ ಸಂಭಾವನೆ ನೀಡಲು ಬಾಕಿ ಇದೆ. ಜತೆಗೆ ಲಂಕಾ ವಿರುದ್ಧದ ಪಂದ್ಯದ ಹಣವೂ ಅವರಿಗೆ ದೊರಕಿಲ್ಲ. ಇದರಿಂದ ಆಟಗಾರರು ಸಿಟ್ಟಾಗಿದ್ದಾರೆ. ತತ್‌ಕ್ಷಣ ನಮಗೆ ಬರಬೇಕಾದ ಹಣ ನೀಡಬೇಕು. ಇಲ್ಲದಿದ್ದರೆ ಸರಣಿ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next