Advertisement

ಪಂದ್ಯ ಫಿಕ್ಸ್‌  ಮಾಡಲು ಪ್ರಯತ್ನ: ಹರಾರೆ ಅಧಿಕಾರಿಗೆ 20 ವರ್ಷ ನಿಷೇಧ

06:00 AM Mar 28, 2018 | Team Udayavani |

ದುಬಾೖ: ಕಳೆದ ವರ್ಷ ಪಂದ್ಯವೊಂದನ್ನು ಫಿಕ್ಸ್‌ ಮಾಡಲು ಜಿಂಬಾಬ್ವೆ ನಾಯಕ ಗ್ರೇಮ್‌ ಕ್ರೀಮರ್‌ ಅವರಿಗೆ ಹಣದ ಕೊಡುಗೆ ನೀಡಿದ ಹರಾರೆಯ ಅಧಿಕಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಕ್ರಿಕೆಟ್‌ ಚಟುವಟಿಕೆಯಿಂದ ದೂರ ಇರುವಂತೆ 20 ವರ್ಷಗಳ ನಿಷೇಧ ಹೇರಿದೆ.

Advertisement

ಹರಾರೆ ಮೆಟ್ರೋಪಾಲಿಟನ್‌ ಕ್ರಿಕೆಟ್‌ಇದರ ಕೋಶಾಧಿಕಾರಿ ಮತ್ತು ಮಾರು ಕಟ್ಟೆ ನಿರ್ದೇಶಕರಾಗಿರುವ ರಾಜನ್‌ ನಾಯರ್‌ ಅವರು ಕ್ರೀಮರ್‌ಗೆ ಪಂದ್ಯ ಫಿಕ್ಸ್‌ ಮಾಡಲು 30 ಸಾವಿರ ಡಾಲರ್‌ಗಳ ಕೊಡುಗೆ ನೀಡಿದ್ದರು. ಇದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಐಸಿಸಿ ಹೇಳಿದೆ. 

ವಿಚಾರಣೆ ಪ್ರಕ್ರಿಯೆ ವೇಳೆ ಗ್ರೇಮ್‌ ಕ್ರೀಮರ್‌ ವೃತ್ತಿಪರತೆ ಹೊಂದಿದವರಂತೆ ಭಾಗವಹಿಸಿದ್ದಕ್ಕೆ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಐಸಿಸಿಯ ಭ್ರಷ್ಟಾಚಾರ ವಿರೋಧಿ ದಳ (ಎಸಿಯು)ದ ಜನರಲ್‌ ಮ್ಯಾನೇಜರ್‌ ಅಲೆಕ್ಸ್‌ ಮಾರ್ಷಲ್‌ ಹೇಳಿದ್ದಾರೆ. 

ರಾಜನ್‌ ನಾಯರ್‌ ಹಣದ ಕೊಡುಗೆ ನೀಡಿದ ತತ್‌ಕ್ಷಣವೇ ಕ್ರೀಮರ್‌ ಈ ವಿಷಯವನ್ನು ಐಸಿಸಿಗೆ ವರದಿ ಮಾಡಿದ್ದರು. ಹಾಗಾಗಿ ನಾವು ತನಿಖೆ ನಡೆಸಲು ಸಾಧ್ಯವಾಯಿತು.  ಫಿಕ್ಸಿಂಗ್‌ ಅಪಾಯದ ಕುರಿತು ಆಟಗಾರರಿಗೆ ಮಾರ್ಗದರ್ಶನ, ತಿಳಿ ಹೇಳುತ್ತಿರುವ ಐಸಿಸಿಯ ಕ್ರಮಕ್ಕೆ ಕ್ರೀಮರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಟಕ್ಕೆ ನಿಕಟ ಸಂಬಂಧಪಟ್ಟ ವ್ಯಕ್ತಿ ಯೊಬ್ಬನ ಭೇಟಿ ಮಾಡುವಾಗ ನಾನು ದಿಗಿಲುಗೊಂಡಿದ್ದೆ ಮತ್ತು ಸಾಧ್ಯವಾದಷ್ಟು ಬೇಗ ಇದನ್ನು ಸಂಬಂ ಧಪಟ್ಟವರಿಗೆ ವರದಿ ಮಾಡುವಂತೆ ನನ್ನ ಮನಸ್ಸು ಹೇಳುತ್ತಿತ್ತು ಎಂದು 31ರ ಹರೆಯದ ಕ್ರೀಮರ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next