ಲಂಡನ್: ಕ್ರಿಕೆಟ್ ವಿಷಯದಲ್ಲಿ ವಿಪರೀತ ರಾಜಕೀಯ ಮಧ್ಯಪ್ರವೇಶದ ಕಾರಣದಿಂದ ಜಿಂಬಾಬ್ವೆ ಕ್ರಿಕೆಟ್ ಸಮಿತಿ ಮತ್ತು ಜಿಂಬಾಬ್ವೆ ಕ್ರಿಕೆಟ್ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅಮಾನತು ಮಾಡಿದೆ.
ಲಂಡನ್ ನಲ್ಲಿ ಸಭೆ ಸೇರಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅಧಿಕಾರಿಗಳು ತಕ್ಷಣದಿಂದಲೇ ಜಾರಿಗೊಳ್ಳುವಂತೆ ಈ ಅಮಾನತು ನಿರ್ಧಾರವನ್ನು ಕೈಗೊಂಡಿದೆ.
ಐಸಿಸಿ ಸಂವಿಧಾನದ 2.4 (ಸಿ) ಮತ್ತು (ಡಿ) ವಿಧಿಯನ್ನು ಉಲ್ಲಂಘನೆಯಾಗಿದೆ. ಮುಕ್ತ ಮತ್ತು ಪ್ರಜಾಪ್ರಭುತ್ವ ಚುನಾವಣಾ ಪ್ರಕ್ರಿಯೆಯನ್ನು ಒದಗಿಸುವುದು ಮತ್ತು ಕ್ರಿಕೆಟ್ ನಲ್ಲಿ ಯಾವುದೇ ಆಡಳಿತದ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.
ನಮ್ಮ ಸದಸ್ಯ ತಂಡವನ್ನು ಅಮಾನತು ಮಾಡುವ ವಿಷಯವನ್ನು ನಾವು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಕ್ರೀಡೆಯಲ್ಲಿ ರಾಜಕೀಯದ ಹಸ್ತಕ್ಷೇಪವನ್ನು ನಾವು ಸಹಿಸುವುದಿಲ್ಲ ಎಂದು ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಹೇಳಿಕೆ ನೀಡಿದ್ದಾರೆ.