Advertisement

Heath Streak ಇನ್ನೂ ಬದುಕಿದ್ದಾರೆ…: ಸ್ಪಷ್ಟನೆ ನೀಡಿದ ಹೆನ್ರಿ ಒಲಾಂಗ

11:52 AM Aug 23, 2023 | Team Udayavani |

ಹರಾರೆ: ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ, ದಿಗ್ಗಜ ಆಲ್ ರೌಂಡರ್ ಹೀತ್ ಸ್ಟ್ರೀಕ್ ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ 49 ವರ್ಷದ ಜಿಂಬಾಬ್ವೆ ಲೆಜೆಂಡ್ ಇನ್ನಿಲ್ಲ ಎನ್ನಲಾಗಿತ್ತು. ಆದರೆ ಇದೀಗ ಈ ಸುದ್ದಿ ಸುಳ್ಳು ಎಂದು ಜಿಂಬಾಬ್ವೆಯ ಮತ್ತೋರ್ವ ಮಾಜಿ ಆಟಗಾರ ಹೆನ್ರಿ ಒಲಾಂಗ ಸ್ಪಷ್ಟಪಡಿಸಿದ್ದಾರೆ.

Advertisement

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದಿರುವ ಹೆನ್ರಿ ಒಲಾಂಗ, “ಹೀತ್ ಸ್ಟ್ರೀಕ್ ಅವರ ನಿಧನದ ವದಂತಿಗಳು ಹೆಚ್ಚು ಉತ್ಪ್ರೇಕ್ಷಿತವಾಗಿವೆ ಎಂದು ನಾನು ದೃಢೀಕರಿಸಬಲ್ಲೆ. ನಾನು ಅವನಿಂದ ಕೇಳಿದೆ. ಮೂರನೇ ಅಂಪೈರ್ ಅವರನ್ನು ವಾಪಸ್ ಕರೆದಿದ್ದಾರೆ. ಅವರು ಜೀವಂತವಾಗಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.

ಹೆನ್ರಿ ಒಲಾಂಗ ಅವರು ಅದಕ್ಕೂ ಮೊದಲು ಹೀತ್ ಸ್ಟ್ರೀಕ್ ಅವರ ನಿಧನದ ಸುದ್ದಿಗೆ ಬೇಸರ ವ್ಯಕ್ತ ಪಡಿಸಿದ್ದರು. ಅವರು ಈ ಬಗ್ಗೆ ಟ್ವೀಟ್ ಕೂಡಾ ಮಾಡಿದ್ದರು. “ಹೀತ್ ಸ್ಟ್ರೀಕ್ ಅವರು ಮತ್ತೊಂದು ಬದಿಗೆ ದಾಟಿದರು ಎಂಬ ದುಃಖದ ಸುದ್ದಿ ಬರುತ್ತಿದೆ. ಜಿಂಬಾಬ್ವೆ ಕ್ರಿಕೆಟ್ ದಂತಕಥೆಗೆ ಶಾಂತಿ ಸಿಗಲಿ” ಎಂದು ಬರೆದಿದ್ದರು. ಆದರೆ ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ.

ಇದನ್ನೂ ಓದಿ:Chandrayaan 3: ಶಿಶಿರನ ಮೇಲಿನ ನೀರನ್ನು ಯಾಕೆ ಹುಡುಕಬೇಕು? ಅದಕ್ಕೆ ಯಾಕಿಷ್ಟು ಮಹತ್ವ?

ಸ್ಟ್ರೀಕ್ ಅವರ ಸಾವಿನ ಸುದ್ದಿ ವೇಗವಾಗಿ ಹರಡಿತ್ತು. ಇದು ಅಭಿಮಾನಿಗಳು ಮತ್ತು ಸಹ ಕ್ರಿಕೆಟಿಗರಲ್ಲಿ ದುಃಖವನ್ನು ಉಂಟುಮಾಡಿತು. ಅದೇನೇ ಇದ್ದರೂ, ಒಲಾಂಗಾ ಅವರ ಮಾಹಿತಿಯಿಂದ ಸ್ಟ್ರೀಕ್‌ ಅವರ ಯೋಗಕ್ಷೇಮದ ಸುತ್ತಲಿನ ಅನಿಶ್ಚಿತತೆಗೆ ತೆರೆ ಎಳೆಯಲಾಗಿದೆ.

Advertisement

ಸ್ಟ್ರೀಕ್ ಜಿಂಬಾಬ್ವೆಯ ಅತ್ಯಂತ ಗುರುತಿಸಲ್ಪಟ್ಟ ಆಟಗಾರರಲ್ಲಿ ಒಬ್ಬರು. 65 ಟೆಸ್ಟ್‌ ಗಳು ಮತ್ತು 189 ಏಕದಿನಗಳಲ್ಲಿ ಅವರು ಜಿಂಬಾಬ್ವೆಯನ್ನು ಪ್ರತಿನಿಧಿಸಿದ್ದರು. 4933 ರನ್‌ ಗಳನ್ನು ಗಳಿಸಿರುವ ಅವರು ಒಟ್ಟು 455 ವಿಕೆಟ್‌ ಗಳನ್ನು ಪಡೆದಿದ್ದಾರೆ. ಸ್ಟ್ರೀಕ್ ಟೆಸ್ಟ್‌ನಲ್ಲಿ 1000 ರನ್ ಮತ್ತು 100 ವಿಕೆಟ್ ಪಡೆದ ಮೊದಲ ಜಿಂಬಾಬ್ವೆ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next