Advertisement
ಮದ್ದೂರು ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿ ಬಳಿ ಆಗಮಿಸಿದ ಸೋಮನಹಳ್ಳಿ ಜಿಪಂ ಸದಸ್ಯ ಬೋರಯ್ಯ, ಬೆಸಗರಹಳ್ಳಿ ಜಿಪಂ ಸದಸ್ಯ ಮರಿಹೆಗಡೆ ಹಾಗೂ ಚಿಕ್ಕಅರಸಿನಕೆರೆ ಮತ್ತುಕೆಸ್ತೂರು ಜಿಪಂ ವ್ಯಾಪ್ತಿಯ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
Related Articles
Advertisement
ಧರಣಿ ಎಚ್ಚರಿಕೆ: ಸೋಮನಹಳ್ಳಿ ಜಿಪಂ ವ್ಯಾಪ್ತಿಯ ತೈಲೂರು, ಹುಣಸೆಮರದದೊಡ್ಡಿ, ತಿಪ್ಪೂರು, ತೊಪ್ಪನಹಳ್ಳಿ, ನೀಲಕಂಠನಹಳ್ಳಿ, ಕೂಳಗೆರೆಗ್ರಾಮಗಳನ್ನು ಆಯ್ಕೆಮಾಡಿದ್ದು ಅಭಿವೃದ್ಧಿಕಾರ್ಯಗಳಿಗೆ ಅಧಿಕಾರಿಗಳು ಮುಂದಾಗದಿದ್ದಲ್ಲಿಸದಸ್ಯರ ನೇತೃತ್ವದಲ್ಲಿ ನಿರಂತರ ಧರಣಿ ಕೈಗೊಳ್ಳಲಾಗುವುದೆಂದರು.
ತರಾಟೆ: ಗ್ರಾಮಗಳಲ್ಲಿ ಕೈಗೊಳ್ಳುವ ಗುದ್ದಲಿ ಪೂಜೆ ಕಾರ್ಯಕ್ರಮದ ವೇಳೆ ಜಿಪಂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಚುನಾಯಿತ ಪ್ರತಿನಿಧಿಗಳನ್ನು ಶಿಷ್ಟಾಚಾರ ಉಲ್ಲಂಘಿಸಿ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗುತ್ತಿರುವ ಬಗ್ಗೆ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಭಟನಾ ಸ್ಥಳಕ್ಕಾಗಮಿಸಿದ ಇಇ ಮಹದೇವಪ್ಪ ಮಾತನಾಡಿ, ಕೆಲ ಗುತ್ತಿಗೆದಾರರ ವಿಳಂಬದಿಂದಾಗಿ ಕಾಮಗಾರಿಗಳು ನನೆಗುದಿಗೆ ಬೀಳಲು ಕಾರಣವಾಗಿದೆ. ಅವರ ಜತೆ ಚರ್ಚಿಸಿ ಫೆ.27ರಂದು ತಮ್ಮಗಳ ಸಮ್ಮುಖದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಿರುವುದಾಗಿ ತಿಳಿಸಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆ ವೇಳೆ ಮುಖಂಡರಾದ ಹನುಮಂತೇಗೌಡ, ಮನುಕುಮಾರ್, ಮಾದೇಶ ಮತ್ತಿತರರಿದ್ದರು.