Advertisement
ರಾಜ್ಯ ಚುನಾವಣ ಆಯೋಗ ಎಲ್ಲ ಜಿ.ಪಂ., ತಾ.ಪಂ.ಗಳ ಕ್ಷೇತ್ರ ಹಾಗೂ ಸದಸ್ಯರ ಸಂಖ್ಯೆಯನ್ನು ಅಂತಿಮಗೊಳಿಸಿ ಮಾ. 24ರಂದು ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು. ಆದರೆ ಈ ಹಂತದಲ್ಲಿ ರಾಜ್ಯ ಸರಕಾರ ಜನಸಂಖ್ಯೆ ಆಧಾರದ ಮೇಲೆ ಪ್ರತಿಯೊಂದು ತಾ.ಪಂ. ಮತ್ತು ಜಿ.ಪಂ.ಗೆ ಚುನಾಯಿಸಬೇಕಾದ ಒಟ್ಟು ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಲು ಕರ್ನಾಟಕ ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗ ರಚನೆ ಮಾಡಿದ ಹಿನ್ನೆಲೆಯಲ್ಲಿ ಇದು ಸ್ಥಗಿತಗೊಂಡಿತ್ತು. ಆಯೋಗದ ನಿರ್ದೇಶನದಂತೆ ಇದೀಗ ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳನ್ನು ಪುನರ್ ವಿಂಗಡಿಸಲಾಗಿದೆ.
ಪುನರ್ ವಿಂಗಡನೆಯಂತೆ ಮಾರ್ಚ್‌ನಲ್ಲಿ ಪ್ರಕಟಿಸಿದ ಕ್ಷೇತ್ರಗಳ ಸಂಖ್ಯೆಗೆ ಹೋಲಿಸಿದರೆ ಏರಿಳಿತವಾಗಿದೆ. ಹೊಸ ಮಾರ್ಗಸೂಚಿಯಂತೆ 40,000 ಜನಸಂಖ್ಯೆಗೆ 1 ಜಿ.ಪಂ. ಕ್ಷೇತ್ರದಂತೆ ನಿಗದಿಪಡಿಸಲಾಗಿದೆ. ತಾ.ಪಂ.ನಲ್ಲಿ ಪ್ರತೀ 10,000 ಜನಸಂಖ್ಯೆಗೆ 1 ತಾ.ಪಂ. ಸ್ಥಾನ ನಿಗದಿಪಡಿಸಲಾಗಿದೆ. ಕ್ಷೇತ್ರದ ಒಟ್ಟು ಜನಸಂಖ್ಯೆ 2 ಲಕ್ಷ ಇದ್ದರೆ 19 ಸ್ಥಾನಗಳು, 2.39 ಲಕ್ಷ ಇದ್ದರೆ 20 ಸ್ಥಾನ ದೊರಕುತ್ತವೆ. ಹೊಸದಾಗಿ ಆಗಿರುವ ಕ್ಷೇತ್ರ ಪುನರ್ ವಿಂಗಡನೆಯಲ್ಲಿ ದ.ಕ. ಜಿ.ಪಂ.ನಲ್ಲಿ 35 ಹಾಗೂ 9 ತಾ.ಪಂ.ಗಳಲ್ಲಿ ಒಟ್ಟು 126 ಸ್ಥಾನಗಳು ನಿಗದಿಯಾಗುತ್ತವೆ. 2016ರಲ್ಲಿ ದ.ಕ. ಜಿ.ಪಂ.ನ ಸದಸ್ಯ ಸಂಖ್ಯೆ 36ರ ಆಗಿತ್ತು. ಇದು 2022ರ ಪುನರ್‌ವಿಂಗಡನೆ ವೇಳೆ 42ಕ್ಕೇರಿತ್ತು. ಇದೀಗ ಸೀಮಾ ಆಯೋಗದ ಪುನರ್‌ವಿಂಗಡನೆಯಲ್ಲಿ 35ಕ್ಕಿಳಿದಿದೆ. 5 ತಾ.ಪಂ.ಗಳಿಗೆ 2016ರ ಚುನಾವಣೆ ಸಂದರ್ಭ 136 ಕ್ಷೇತ್ರಗಳಿದ್ದವು. 2022ರ ಪುನರ್ ವಿಂಗಡನೆಯಲ್ಲಿ ಹೊಸ 4 ತಾ.ಪಂ.ಗಳು ಸೇರಿ 9 ತಾ.ಪಂ.ಗಳ ಒಟ್ಟು ಒಟ್ಟು 118ಕ್ಕೆ ಇಳಿಕೆಯಾಗಿತ್ತು. ಇದೀಗ ಹೊಸ ವಿಧಾನಸಭಾವಾರು ಪುನರ್‌ವಿಂಗಡನೆಯಲ್ಲಿ 126ಕ್ಕೇರಿದೆ.
Related Articles
Advertisement