20ಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಅವಿಶ್ವಾಸ ಮಂಡನೆಗೆ ಕರೆದಿರುವ ಸಭೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಒಟ್ಟು 28 ಸದಸ್ಯ ಬಲ ಇರುವ ಜಿಪಂನಲ್ಲಿ 21 ಕಾಂಗ್ರೆಸ್, 5 ಜೆಡಿಎಸ್ ಹಾಗೂ ಸಿಪಿಎಂ ಹಾಗೂ ಬಿಜೆಪಿ ತಲಾ ಒಬ್ಬರು ಸದಸ್ಯರು ಇದ್ದಾರೆ. ಅಧಿಕಾರ ಹಿಡಿಯುವಷ್ಟು ಸಂಖ್ಯಾ ಬಲ ಇದ್ದರೂ ಕಾಂಗ್ರೆಸ್‌ನಲ್ಲಿ ಪದೇ ಪದೆ ಸ್ಫೋಟಗೊಳ್ಳುತ್ತಿರುವ ಭಿನ್ನಮತ ಈಗಾಗಲೇ ಜಿಪಂನಲ್ಲಿ ಮೂರು ಮಂದಿಯನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದೆ.
Advertisement
ಅವಿಶ್ವಾಸಕ್ಕೆ ನಿರ್ಧಾರ: ಕಳೆದ ಬಾರಿ ಜಿಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಪಿ.ಎನ್. ಪ್ರಕಾಶ್‌ರನ್ನು ಸೋಲಿಸಿ ಬಂಡಾಯ ಕಾಂಗ್ರೆಸ್ಅಭ್ಯರ್ಥಿಯಾಗಿದ್ದ ಎಂ.ಬಿ.ಚಿಕ್ಕನರ ಸಿಂಹಯ್ಯ ಗೆಲುವು ಸಾಧಿಸಿದ್ದರು. ಆದರೆ ಮಾತುಕತೆಯಿಂದ ಎರಡೂವರೆ ವರ್ಷ ಅಧಿಕಾರ ಅವಧಿ ಮುಗಿದರೂ ಉಪಾಧ್ಯಕ್ಷೆ ಪಿ.ನಿರ್ಮಲಾ ಕುರ್ಚಿಗೆ ಅಂಟಿ ಕೊಂಡಿದ್ದಾರೆಂದು ಅವರ ವಿರುದ್ಧ ಸ್ವಪಕ್ಷೀಯ ಸದಸ್ಯರೆ ಅವಿಶ್ವಾಸ ಮಂಡನೆ ಮಾಡಲು ಮುಂದಾಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದ್ದು, ಇವರ ಆಯ್ಕೆ ಅವಿರೋಧ ನಡೆಯುತ್ತಾ ಅಥವಾ ಕಳೆದ ಬಾರಿ ಜಿಪಂ ಅಧ್ಯಕ್ಷರ ಚುನಾವಣೆಯಂತೆ ಉಪಾಧ್ಯಕ್ಷರ ಅವಿಶ್ವಾಸ ಮಂಡನಾ ಸಭೆ ಮೇಲಾಟಗಳಿಗೆ ಸಾಕ್ಷಿಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
Related Articles
Advertisement
ಮೇ 20ಕ್ಕೆ ಜಿಪಂ ಉಪಾಧ್ಯಕ್ಷೆ ನಿರ್ಮಲಾ ವಿರುದ್ಧ ಅವಿಶ್ವಾಸಮಂಡನೆ ಸಭೆ ಕರೆಯಲಾಗಿದೆ. ಇದು ಪಕ್ಷದ ನಿರ್ಧಾರ. ಈ ಹಿಂದೆಯು ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿತ್ತು. ಆದರೆ ಅವರು ನೀಡಿರಲಿಲ್ಲ. ಅವರನ್ನು ಪದಚ್ಯುತಿಗೊಳಿಸಿ ಅವರ ಸ್ಥಾನಕ್ಕೆ ತೊಂಡೇಬಾವಿ ಕ್ಷೇತ್ರದ ಸದಸ್ಯೆ ಸರಸ್ವತಮ್ಮ ಅವಿರೋಧವಾಗಿ ಆಯ್ಕೆ ಯಾಗುವ ವಿಶ್ವಾಸವಿದೆ.
● ಪಿ.ಎನ್.ಪ್ರಕಾಶ್, ಕಾಂಗ್ರೆಸ್ ಜಿಪಂ ಸದಸ್ಯ ● ಕಾಗತಿ ನಾಗರಾಜಪ್ಪ