Advertisement
ಸುರೇಶ್ ಕುಮಾರ್: ರಾಜಕಾರಣಿಗಳಿಗೆ ಝೀರೋ ಟ್ರಾಫಿಕ್ ಸೌಲಭ್ಯ ನೀಡಬಾರದು. ಇದರಿಂದಾಗಿ ವೈದ್ಯಕೀಯ ತುರ್ತು ಇದ್ದವರಿಗೆ ಕಷ್ಟವಾಗುತ್ತದೆ. ತೀರಾ ಅಗತ್ಯ ಪರಿಸ್ಥಿತಿಯಲ್ಲಿ ಬಳಸಬಹುದು. ನಾವು ಕಟ್ಟುವ ಟಾಕ್ಸ್ ನಿಂದ ಈ ರಾಜಕಾರಣಿಗಳು ಇಂತಹ ಅನುಕೂಲ ಅನುಭವಿಸುವುದು ತಪ್ಪು.
Related Articles
Advertisement
ಮಂಜು ಶಿರಸಿ: ಅವಶ್ಯ ಹುದ್ದೆಗೆ ಅನಿವಾರ್ಯ ಸಮಯದಲ್ಲಿ ಕೊಡಬೇಕು. ಮುಖ್ಯಮಂತ್ರಿಗಳಿಗೆ ಕಡ್ಡಾಯವಾಗಿ ಕೊಡಬೇಕು. ಅವರ ಪ್ರತಿ ನಿಮಿಷ ಸಮಯವು ಅತ್ಯಂತ ಮಹತ್ವದ್ದು ಆಗಿರುತ್ತದೆ. ಅವರು ತಮ್ಮ ಸಂಪೂರ್ಣ ಸಮಯ ರಾಜ್ಯದ ಹಿತಾಸಕ್ತಿಗಾಗು ವ್ಯಯ ಮಾಡಬೇಕು.
ಮಂಜುನಾಥ್ ಎಸ್ ಎಂ ರಾಮ್: ಝೀರೋ ಟ್ರಾಫಿಕ್ ಎನ್ನುವುದು ಇವರನ್ನು ಮಹಾರಾಜರ ಹಾಗೆ ಬಿಂಬಿಸಿಕೊಳ್ಳಲು ಬಳಸುವುದು ತಪ್ಪು. ಅತೀ ತ್ವರಿತ ಕಾರ್ಯಕ್ರಮ ಇದ್ದಾಗ ಮಾತ್ರ ನಿಗದಿತ ಹುದ್ದೆಗೆ ಮಾತ್ರ ಇದನ್ನು ಬಳಸಬೇಕು. ಮುಖ್ಯಮಂತ್ರಿಗಳೂ ಕೂಡಾ ಎಲ್ಲ ಸಮಯದಲ್ಲೂ ಇದನ್ನು ಬಳಸಬಾರದು. ನಾಡಿನ ಹಿತದೃಷ್ಟಿಯಿಂದ, ರಕ್ಷಣೆ ತೊಂದರೆ ಆಗಬಾರದು ಎಂಬುವವರಿಗೆ ಮಾತ್ರ ಈ ವ್ಯವಸ್ಥೆ ಒಳ್ಳೆಯದು. ಈ ವಿಚಾರದಲ್ಲಿ ಮನೋಹರ್ ಪರಿಕ್ಕರ್ ರವರನ್ನು ಆದರ್ಶವಾಗಿ ಸ್ವೀಕರಿಸಿದರೆ ಅಷ್ಟೇ ಸಾಕು
ವಿಜೇಂದ್ರ ಪೂಜಾರಿ: ಜನರಿಂದ ಆಯ್ಕೆಯಾದ ಓರ್ವ ರಾಜಕಾರಣಿಗೆ ಜನರ ಬಳಿ ಬರುವಾಗ ಹೆದರಿಕೆ ಯಾಕೆ? ಜನರಿಗೆ ಹೆದರೋದಾದರೆ ಆತ ರಾಜಕಾರಣಿ ಯಾಕಾಗಬೇಕು ? ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ ಗೆ ಹೊರತುಪಡಿಸಿ ಬೇರೆ ಯಾವೊಬ್ಬ ರಾಜಕಾರಣಿಗೂ ಝೀರೋ ಟ್ರಾಫಿಕ್ ಸೌಲಭ್ಯ ನೀಡಲೇ ಬಾರದು.
ಅನಂತ್ ಪ್ರಭು: ಮುಖ್ಯಮಂತ್ರಿಗೆ ಕೂಡ ಝೀರೋ ಟ್ರಾಫಿಕ್ ಅಗತ್ಯವಿಲ್ಲ . ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು ನಾಯಕನೇ ಸೇವಕ.
ಬಸವನಗೌಡ ಪಾಟೀಲ್: ತುರ್ತು ಸಂದರ್ಭಗಳಲ್ಲಿ ಮಾತ್ರ ಝೀರೋ ಟ್ರಾಫಿಕ್ ಕೊಡುವುದು ಸೂಕ್ತ. ಅದನ್ನು ಬಿಟ್ಟು ಸಾಮಾನ್ಯ ದಿನಗಳಲ್ಲಿ ಅವರಿಗೆ ಝೀರೋ ಟ್ರಾಫಿಕ್ ಕೊಡುವ ಅಗತ್ಯ ವಿಲ್ಲ. ಇದು ರಾಜಾತಿಥ್ಯ ದೇಶವಲ್ಲ. ಸಂವಿಧಾನಿಕ ದೇಶ ಇಲ್ಲಿ ಎಲ್ಲರೂ ಒಂದೇ
ಎಂ ಹರೀಶ್: ಝೀರೋ ಟ್ರಾಫಿಕ್ ವ್ಯವಸ್ಥೆ ಕೊಟ್ಟರೆ, ಸಾಮಾನ್ಯ ಜನರ ಕಷ್ಟ ಹೇಗೆ ತಿಳಿಯುತ್ತದೆ…?
ವೆಂಕಟೇಶ್ ರಘುಪತಿ: ಅಚರಿಗೆ ಯಾಕೆ ಈ ಅನುಕೂಲ ಕೊಡಬೇಕು. ಅವರು ಜನರಿಂದ ಆಯ್ಕೆಯಾದವರು. ಹಾಗಾಗಿ ಜನರ ಮಧ್ಯೆಯೆ ಇರಬೇಕು. ಎಲ್ಲರಂತೆಯೇ ಅವರು ಕೂಡಾ ಟ್ರಾಫಿಕ್ ನಲ್ಲಿಯೇ ಬರಬೇಕು.
ವಾಸುದೇವ ಪ್ರಭು: ಆಂಬುಲೆನ್ಸ್ ನಂತಹ ತಯರ್ತು ಅಗತ್ಯ ಸೇವೆಗಳಿಗೆ ಮಾತ್ರ ಝೀರೋ ಟ್ರಾಫಿಕ್ ಕೊಡಬೇಕು.
ಶ್ಯಾಮಲಾ ರಾಜ್: ಯಾಕೆ ಬೇಕು ಅವರಿಗೆ ಝೀರೋ ಟ್ರಾಫಿಕ್ ? ಕೆಲಸಕ್ಕೆ ಸರಿಯಾದ ಸಮಯಕ್ಕೆ ಹೋಗಿ. ಅಷ್ಟು ಅವಸರ ಇದ್ದರೆ ಮನೆಯಿಂದ ಬೇಗ ಹೊರಡಿ.
ವಿನೋದ್ ಮಡಿಕೇರಿ: ಈ ವ್ಯವಸ್ಥೆ ಸರಿಯಲ್ಲ. ಪ್ರತಿಯೊಬ್ಬರಿಗೂ ಅವಸರ ಇದ್ದೇ ಇರುತ್ತೆ. ಅಂತ ಸಂದರ್ಭಗಳಲ್ಲಿ ಒಬ್ಬ ಮಂತ್ರಿ ಬರುತ್ತಾರೆ ಅಂತ ಅರ್ಧ ಗಂಟೆಗೂ ಹೆಚ್ಚು ಕಾಲ ಸಾರ್ವಜನಿಕರಿಗೆ ತೊಂದರೆ ಕೊಡುವುದು ಸೂಕ್ತವಲ್ಲ.
ನಾಗರಾಜ ಬಿ ಆರ್: ಆಂಬುಲೆನ್ಸ್ ಬಿಟ್ಟು ಯಾರಿಗೂ ಬೇಡ.