Advertisement

ಮುರುಘಾ ಶರಣರಿಂದ ಶೂನ್ಯ ಪೀಠಾರೋಹಣ

06:05 AM Oct 21, 2018 | |

ಚಿತ್ರದುರ್ಗ: ಮುರುಘಾಮಠದ ಡಾ| ಶಿವಮೂರ್ತಿ ಮುರುಘಾ ಶರಣರ ಶೂನ್ಯಪೀಠಾರೋಹಣ ಶನಿವಾರ ವಿಜೃಂಭಣೆಯಿಂದ ನಡೆಯಿತು.

Advertisement

ಶೂನ್ಯ ಪರಂಪರೆಯ ಪದ್ಧತಿಯಂತೆ ಮುರುಘಾ ಮಠದ ಪ್ರಾಂಗಣದ ಅನುಭವ ಮಂಟಪದಲ್ಲಿ ಮುರುಘಾ ಶರಣರು ರುದ್ರಾಕ್ಷಿ ಕಿರೀಟ ಧರಿಸಿ, ಪೀಠಾರೋಹಣ ಮಾಡಿದರು. ವೈಚಾರಿಕತೆಯಿಂದ ಗುರುತಿಸಿಕೊಂಡಿರುವ ಮುರುಘಾ ಮಠದ ಶೂನ್ಯ ಪೀಠಾರೋಹಣ ಮಹತ್ವ ಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ಬಸವಣ್ಣ ಹಾಗೂ ಶೂನ್ಯಪೀಠದ ಪ್ರಥಮ ಅಧ್ಯಕ್ಷ ಅಲ್ಲಮಪ್ರಭುದೇವರ ಭಾವಚಿತ್ರ ಮತ್ತು ವಚನ ಹಸ್ತಪ್ರತಿಗಳ ಮೆರವಣಿಗೆಯೂ ನಡೆಯಿತು.

ಡಾ| ಶಿವಮೂರ್ತಿ ಮುರುಘಾ ಶರಣರು, ಶ್ರೀಮಠದ ಕತೃì ಮುರುಗಿ ಶಾಂತವೀರ ಸ್ವಾಮಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಚಿನ್ನದ ಕಿರೀಟ, ಇತರ ಎಲ್ಲ ಆಭರಣಗಳನ್ನೂ ಭಕ್ತರ ಕೈಗೆ ನೀಡಿದರು. ನಂತರ ರುದ್ರಾಕ್ಷಿ ಕಿರೀಟ ಧರಿಸಿ ವಚನ ಕೃತಿಯನ್ನು ಹಿಡಿದುಕೊಂಡು ನಾಡಿನ ಮಠಾಧೀಶರು, ಸಾಧಕರು, ಭಕ್ತರು, ಉತ್ಸವ ಸಮಿತಿ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತ ಸಮೂಹದ ಸಮ್ಮುಖದಲ್ಲಿ ಅನುಭವ ಮಂಟಪದ ಶೂನ್ಯ ಪೀಠಾರೋಹಣ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next