Advertisement
ರಾಜ್ಯದಲ್ಲಿರುವ ನಿರುದ್ಯೋಗ ಸಮಸ್ಯೆ ವಿರುದ್ಧ ಎನ್‌ಜಿಒ ಸಂಸ್ಥಾಪಕ ಚಂದ್ರಮಿಶ್ರಾ ನೇತೃತ್ವದಲ್ಲಿ ಈಗಾಗಲೇ ಹೋರಾಟ ಆರಂಭಿಸಲಾಗಿದೆ. ಇದರ ಬೆನ್ನಲ್ಲೆ ಮುಂದಿನ ವಿಧಾನಸಬಾ ಚುನಾವಣೆಯಲ್ಲಿ ರಾಜಕೀಯ ರಂಗದ ಪ್ರವೇಶಕ್ಕೆ ಸಜಾಗಿದೆ.
Related Articles
Advertisement
ವರುಣಾ ಅಭ್ಯರ್ಥಿ ಅಂತಿಮ: ವರುಣಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಅಥವಾ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಸ್ಪರ್ಧಿಸಿದರೂ ತಮ್ಮ ಸಂಘಟನೆಯಿಂದ ಅಭ್ಯರ್ಥಿ ಕಣಕ್ಕಿಳಿಯುವುದು ನಿಶ್ಚಿತವಾಗಿದೆ. ಹೀಗಾಗಿ ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗಿದ್ದು,
ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬೇರೆ ಬೇರೆ ಹಂತಗಳಲ್ಲಿದೆ ಎಂದು ವರುಣಾ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿ ಹೆಸರನ್ನು ಬಹಿರಂಗಪಡಿಸಲು ಚಂದ್ರಮಿಶ್ರಾ ನಿರಾಕರಿಸಿದರು. ಈ ಹಿಂದೆ 2008ರಲ್ಲಿ ಒಡಿಶಾದಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 19 ಅಭ್ಯರ್ಥಿಗಳಲ್ಲಿ ತಮ್ಮ ಸಂಘಟನೆಯು ಬೆಂಬಲಿಸಿದ್ದ 13 ಮಂದಿ ಸ್ವತಂತ್ರ ಅಭ್ಯರ್ಥಿಗಳು ಆಯ್ಕೆಯಾಗಿದ್ದರು.
ಇದೇ ಉತ್ಸಾಹದಲ್ಲಿ ದೇಶದಲ್ಲಿ 2ನೇ ಬಾರಿಗೆ ಹಾಗೂ ರಾಜ್ಯದಲ್ಲಿ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿಯುವ ಮೂಲಕ ಚುನಾವಣೆಯಲ್ಲಿ ಪ್ರಬಲ ಎದುರಾಳಿಗಳನ್ನು ಎದುರಿಸಲು ಸಂಘಟನೆ ನಿರ್ಧರಿಸಿದೆ. ಅಲ್ಲದೆ ಇತ್ತೀಚೆಗೆ ವರುಣಾ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಜೀರೋ ಆನ್‌ಎಂಪ್ಲಾಯ್‌ಮೆಂಟ್ ಮಾಡೆಲ್ ಸಂಘಟನೆ ಕಾರ್ಯಕರ್ತರು ಕ್ಷೇತ್ರದ 43 ಹಳ್ಳಿಗಳಲ್ಲಿ 11,000 ಯುವಕರೊಂದಿಗೆ ಸಂವಹನ ನಡೆಸಿದೆ.
ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವುದು ನಮ್ಮ ಪ್ರಮುಖವಾದ ಗುರಿಯಾಗಿದ್ದು, ಇದನ್ನು ಈಡೇರಿಸುವ ಭರವಸೆ ನೀಡುವವರಿಗೆ ನಾವು ಬೆಂಬಲಿಸಲಿದ್ದೇವೆ. ನಮ್ಮೊಂದಿಗೆ ಜೆಡಿಯು, ಯುವ ಮಿತ್ರರು ಸೇರಿದಂತೆ ಕೆಲವು ಸಂಘಟನೆಗಳು ಸಹ ಕೈಜೋಡಿಸಿವೆ. ಈಗಾಗಲೇ 10 ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿದೆ. -ಚಂದ್ರಮಿಶ್ರಾ, ಸಂಸ್ಥಾಪಕ, ಜೀರೋ ಆನ್‌ಎಂಪ್ಲಾಯ್‌ಮೆಂಟ್ ಮಾಡೆಲ್. * ಸಿ. ದಿನೇಶ್