Advertisement

ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ: ದ. ಕನ್ನಡ, ಉಡುಪಿ ಜಿಲ್ಲೆಯಲ್ಲಿ 1,782 ರೈತರ ಆಯ್ಕೆ

10:21 AM Jul 14, 2019 | keerthan |

ಮಂಗಳೂರು: ರಾಷ್ಟ್ರ ಮಟ್ಟದಲ್ಲಿ ಗಮನಸೆಳೆದ ರಾಜ್ಯದ “ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ’ ಅನುಷ್ಠಾನಕ್ಕೆ (ಝಡ್‌ಬಿಎನ್‌ಎಫ್‌) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 8 ತಾಲೂಕುಗಳ 1,183 ಹೆಕ್ಟೇರ್‌ ಪ್ರದೇಶವನ್ನು ಗುರುತಿಸಲಾಗಿದ್ದು, ಪ್ರಾಯೋಗಿಕವಾಗಿ ಒಟ್ಟು 1,782 ರೈತರನ್ನು ಆಯ್ಕೆ ಮಾಡಲಾಗಿದೆ.

Advertisement

ರಾಜ್ಯದಲ್ಲಿ ಈ ಕೃಷಿ ಪದ್ದತಿ 10 ಕೃಷಿ ಹವಾಮಾನ ವಲಯಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳುತ್ತಿದೆ. ಕೃಷಿ ತಜ್ಞ ಸುಭಾಷ್‌ ಪಾಳೇಕರ್‌ ಹಾಗೂ ರಾಜ್ಯ ರೈತ ಸಂಘದ ಪರಿಕಲ್ಪನೆಯಲ್ಲಿ ಇದು ನಡೆಯುತ್ತಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ 2018ರ ಆಯವ್ಯಯದಲ್ಲಿ ಪ್ರಸ್ತಾವಿಸಿದ್ದಲ್ಲದೆ 50 ಕೋ.ರೂ. ಮೀಸಲಿಟ್ಟದ್ದರು.

ದ.ಕ. ಜಿಲ್ಲೆಯಲ್ಲಿ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ತಾಲೂಕುಗಳಲ್ಲಿ ಒಟ್ಟು 17 ಕ್ಲಸ್ಟರ್‌ಗಳಲ್ಲಿ 721.2 ಹೆಕ್ಟೇರ್‌ ವಿಸ್ತೀರ್ಣ ಮತ್ತು 1019 ರೈತರನ್ನು ಆಯ್ಕೆ ಮಾಡಲಾಗಿದೆ. ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ತಾಲೂಕುಗಳ ಒಟ್ಟು 9 ಕ್ಲಸ್ಟರ್‌ಗಳಲ್ಲಿ 461.8 ಹೆಕ್ಟೇರ್‌ ವಿಸ್ತೀರ್ಣದಲ್ಲಿ ಶೂನ್ಯ ಬಂಡವಾಳ ಕೃಷಿ ಅನುಷ್ಟಾನಗೊಳ್ಳುತ್ತಿದ್ದು 763 ರೈತರನ್ನು ಆಯ್ಕೆ ಮಾಡಲಾಗಿದೆ.

ದಕ್ಷಿಣ ಕನ್ನಡ: 721.2 ಹೆಕ್ಟೇರ್‌ ಗುರಿ ಮಂಗಳೂರು ತಾಲೂಕಿನ ಸುರತ್ಕಲ್‌ ಹೋಬಳಿಯ ಸೂರಿಂಜೆ, ಚೇಳಾರು, ದೇಲಂತಬೆಟ್ಟು ಕ್ಲಸ್ಟರ್‌ನಲ್ಲಿ 50 ಹೆ. ವಿಸ್ತೀರ್ಣ ಮತ್ತು 59 ರೈತರು, ಮೂಲ್ಕಿ ಹೋಬಳಿ ಅತಿಕಾರಿ ಬೆಟ್ಟು ಕ್ಲಸ್ಟರ್‌ನಲ್ಲಿ 50 ಹೆ. ಮತ್ತು 42 ರೈತರು, ಮೂಡುಬಿದಿರೆಯ ಬೆಳುವಾಯಿ ಕ್ಲಸ್ಟರ್‌ನಲ್ಲಿ 50 ಹೆ. ಮತ್ತು 25 ರೈತರು, ಬಂಟ್ವಾಳ ತಾ|ನ ಬಂಟ್ವಾಳ ಹೋಬಳಿಯ ಕಾವಳಪಡೂರು, ಕಾಡಬೆಟ್ಟು ಕ್ಲಸ್ಟರ್‌ನಲ್ಲಿ 51 ಹೆ., 47 ರೈತರು, ಪಾಣೆಮಂಗಳೂರುನ ನರಿಕೊಂಬು, ಶಂಭೂರುನಲ್ಲಿ 51 ಹೆ. ಮತ್ತು 21 ರೈತರು, ವಿಟ್ಲದ ವೀರಕಂಬ, ಬೋಳಂತೂರು ಕ್ಲಸ್ಟರ್‌ನ 51 ಹೆ. ಹಾಗೂ 17 ರೈತರು, ಬೆಳ್ತಂಗಡಿ ತಾ|ನ ನಡ ಕ್ಲಸ್ಟರ್‌ನ 40 ಹೆ.ಹಾಗೂ 43 ರೈತರು, ಕೊಕ್ಕಡದ ಬೆಳಾಲು ಕ್ಲಸ್ಟರ್‌ನಲ್ಲಿ 35 ಹೆ.ಹಾಗೂ 42 ರೈತರು, ವೇಣೂರುನ ಸುಲ್ಕೇರಿ ಕ್ಲಸ್ಟರ್‌ನಲ್ಲಿ 40 ಹೆ.ಹಾಗೂ 74 ರೈತರು, ಪುತ್ತೂರು ತಾ|ನಲ್ಲಿ ಬೆಟ್ಟಂಪಾಡಿ ಕ್ಲಸ್ಟರ್‌ನ 50 ಹೆ. ಹಾಗೂ 48 ರೈತರು, ಕಡಬದ ಅಲಂಕಾರು,ಪುಣcಪಾಡಿ ಕ್ಲಸ್ಟರ್‌ನಲ್ಲಿ 50 ಹೆ. ಹಾಗೂ 112 ರೈತರು, ಉಪ್ಪಿನಂಗಡಿಯ ಹಿರೇಬಂಡಾಡಿ ಕ್ಲಸ್ಟರ್‌ನಲ್ಲಿ 50 ಹೆ.ಹಾಗೂ 41 ರೈತರು, ಸುಳ್ಯ ತಾ|ನ ಅಲೆಟ್ಟಿ ಅಜ್ಜಾವರ ಕ್ಲಸ್ಟರ್‌ನ‌ಲ್ಲಿ 79.6 ಹೆ. ಹಾಗೂ 180 ರೈತರು ಹಾಗೂ ಪಂಜದ ಕಲ್ಮಡ್ಕ, ಕುತುRಂಜ, ಬಾಳುಗೋಡು ಕ್ಲಸ್ಟರ್‌ನಲ್ಲಿ 73.6 ಹೆ.ಮತ್ತು 268 ರೈತರನ್ನು ಆಯ್ಕೆ ಮಾಡಲಾಗಿದೆ.

ಉಡುಪಿ: 461.8 ಹೆಕ್ಟೇರ್‌
ಉಡುಪಿ ಜಿಲ್ಲೆಯಲ್ಲಿ ಒಟ್ಟು 9 ಕ್ಲಸ್ಟರ್‌ಗಳಲ್ಲಿ  461.8 ಹೆಕ್ಟೇರ್‌ ಪ್ರದೇಶದಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು 763 ರೈತರನ್ನು ಆಯ್ಕೆ ಮಾಡಲಾಗಿದೆ.ಉಡುಪಿ ತಾ|ನಲ್ಲಿ ಹನೆಹಳ್ಳಿ ಕ್ಲಸ್ಟರ್‌ನಲ್ಲಿ 50.4 ಹೆ. ವಿಸ್ತೀರ್ಣ ಹಾಗೂ 89 ರೈತರು, ಚೇರ್ಕಾಡಿ ಕ್ಲಸ್ಟರ್‌ನಲ್ಲಿ 52 ಹೆ., 72 ರೈತರು, , ಶಿರ್ವ, ಕುತ್ಯಾರು, ಸಾಂತೂರು ಕ್ಲಸ್ಟರ್‌ನಲ್ಲಿ 53 ಹೆ.,92 ರೈತರು ಸೇರಿದಂತೆ ಒಟ್ಟು 155.4 ಹೆ.ಹಾಗೂ 253 ರೈತರನ್ನು ಆಯ್ಕೆ ಮಾಡಲಾಗಿದೆ. ಕುಂದಾಪುರದ ಜಪ್ತಿಯಲ್ಲಿ 51 ಹೆ.ವಿಸ್ತೀರ್ಣ ಹಾಗೂ, 90 ರೈತರು, ಎಳಜಿತ್‌, ತಗ್ಗರ್ಸೆ, ಗೋಳಿ ಹೊಳೆ ಕ್ಲಸ್ಟರ್‌ನಲ್ಲಿ 50.4 ಹೆ. ಹಾಗೂ 95 ರೈತರು, ಬೆಳ್ಳಾಲ , ಕೆರಾಡಿ, ಆಜ್ರಿ ಕ್ಲಸ್ಟರ್‌ನಲ್ಲಿ 51 ಹೆ.ಹಾಗೂ 96 ರೈತರು ಸೇರಿದಂತೆ 152 ಹೆ.ವಿಸ್ತೀರ್ಣಹಾಗೂ 281 ರೈತರನ್ನು ಆಯ್ಕೆ ಮಾಡಲಾಗಿದೆ. ಕಾರ್ಕಳದಲ್ಲಿ ಚಾರ ಕ್ಲಸ್ಟರ್‌ನ‌ಲ್ಲಿ 50 ಹೆ., ವಿಸ್ತೀರ್ಣ ಹಾಗೂ 60 ರೈತರು, ಇರ್ವತ್ತೂರು ಕ್ಲಸ್ಟರ್‌ನಲ್ಲಿ 53 ಹೆ.73 ರೈತರು, ಹಾಗೂ ನಲ್ಲೂರು, ಮುಡಾರು ಕ್ಲಸ್ಟರ್‌ನಲ್ಲಿ 51 ಹೆ.ಹಾಗೂ 96 ರೈತರು ಸೇರಿದಂತೆ 154.4 ಹೆ.ಹಾಗೂ 229 ರೈತರು ಆಯ್ಕೆಯಾಗಿದ್ದಾರೆ.

Advertisement

ಚಟುವಟಿಕೆಗಳು
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯಡಿ ಆಯ್ಕೆಯಾದ ರೈತರಿಗೆ ನೆಲಹೊದಿಕೆ ಬೇಕಾಗುವ ದ್ವಿದಳ ಬೀಜಗಳು, ಹಸಿರೆಲೆ ಗೊಬ್ಬರ ಬೀಜಗಳು,ಬೀಜ ಮತ್ತು ಸಸಿಗಳ ವಿತರಣೆ (ಅಂತರಿಕ ಬೆಳೆ ಹಾಗೂ ಬಹುಬೆಳೆ),ದ್ರವರೋಪದ ಬೀಜಾಮೃತ/ಜೀವಾಮೃತ ಮಿಶ್ರಣಗಳನ್ನು ತಯಾರಿಸಲು ಬೇಕಾಗುವ ಸಿಮೆಂಟ್‌ ತೊಟ್ಟಿ, ಜೀವಾಮೃತ ಹಾಗೂ ಬೀಜಾಮೃತ ಮಿಶ್ರಣಗಳನ್ನು ತಯಾರಿಸಲು ಬೇಕಾಗುವ ಕಚ್ಚಾ ವಸ್ತುಗಳು, ಎರಡು ಹಸು ನಿಲ್ಲುವ ಜಾಗಕ್ಕೆ ನೆಲಹಾಸು ( ಗಂಜಲು ಸಂಗ್ರಹಿಸುವ ತೊಟ್ಟಿ ಯೊಳಗೊಂಡಂತೆ), ಬಯೋ ಡೈಜೆಸ್ಟರ್‌ಗಳ -ಡೈಜೆಸ್ಟರ್‌ ತೊಟ್ಟಿ, ಶೇಖರಣ ತೊಟ್ಟಿ, ಬಹುವಾರ್ಷಿಕ ಮೇವಿನ ಸಂಪನ್ಮೂಲ ಅಭಿವೃದ್ಧಿ ಹಾಗೂ ಸಾಮುದಾಯಿಕವಾಗಿ ಬೀಜಬ್ಯಾಂಕ್‌ ಸ್ಥಾಪನೆ, ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳ ಶುಲ್ಕ ಮುಂತಾದುವುಗಳಿಗೆ ಗರಿಷ್ಠ ಮಟ್ಟದ ಸಹಾಯಧನ ನೀಡಲಾಗುತ್ತದೆ.

“ದ.ಕ. ಜಿಲ್ಲೆಯಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಅನುಷ್ಠಾನಕ್ಕೆ 5 ತಾಲೂಕುಗಳಲ್ಲಿ ಈಗಾಗಲೇ 17 ಕ್ಲಸ್ಟರ್‌ಗಳನ್ನು ಗುರುತಿಸಲಾಗಿದೆ. 721.2 ಹೆಕ್ಟೇರ್‌ ಪ್ರದೇಶದ ಗುರಿಯನ್ನು ಇರಿಸಿಕೊಂಡು 1019 ರೈತರನ್ನು ಆಯ್ಕೆ ಮಾಡಲಾಗಿದ್ದು ಪೂರಕ ಪ್ರಕ್ರಿಯೆ ಜಾರಿಯಲ್ಲಿದೆ.
– ಡಾ| ಸೀತಾ ಎಂ.ಸಿ., ದ.ಕ. ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು

“ಉಡುಪಿ ಜಿಲ್ಲೆಯಲ್ಲಿ ಮೂರು ತಾಲೂಕುಗಳ 9 ಕ್ಲಸ್ಟರ್‌ಗಳಲ್ಲಿ ಈ ಪದ್ಧತಿಯನ್ನು ಅಳವಡಿಸಲಾಗುತ್ತಿದೆ. 461.8 ಹೆ.ಗುರಿಯನ್ನು ಇರಿಸಿಕೊಂಡು 763 ರೈತರನ್ನು ಆಯ್ಕೆ ಮಾಡಲಾಗಿದೆ.
ಡಾ| ಕೆಂಪೇಗೌಡ,ಉಡುಪಿ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next