Advertisement

Modi ಜತೆಗಿನ ಝೆಲೆನ್ಸ್ಕಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ಗಳು

09:17 PM Aug 23, 2024 | Team Udayavani |

ಕೀವ್ : ಯುದ್ಧ ಪೀಡಿತ ಉಕ್ರೇನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತೆಗದುಕೊಂಡ ಫೋಟೋವೊಂದನ್ನು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಅವರು ಇನ್‌ಸ್ಟಾಗ್ರಾಮ್ ನಲ್ಲಿ ಶುಕ್ರವಾರ ಪೋಸ್ಟ್ ಮಾಡಿದ್ದಾರೆ. ಅಪ್‌ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಧಿಕ ಮೆಚ್ಚುಗೆಗಳನ್ನು ಪಡೆದುಕೊಂಡಿದ್ದು ಫೋಟೋ ವೈರಲ್ ಆಗಿದೆ.

Advertisement

ಈ ಹಿಂದೆ ಮೋದಿಯವರೊಂದಿಗಿನ ಝೆಲೆನ್ಸ್ಕಿಯವರ ಪೋಸ್ಟ್ ಅತಿ ಹೆಚ್ಚು 7.8 ಲಕ್ಷ ಲೈಕ್‌ಗಳನ್ನು ಹೊಂದಿತ್ತು ಎಂದು ಮೂಲಗಳು ಗಮನಿಸಿದ್ದು, ಇಂದಿನ ಪೋಸ್ಟ್ ಕೆಲವೇ ಗಂಟೆಗಳಲ್ಲಿ 1 ಮಿಲಿಯನ್ ಲೈಕ್‌ಗಳನ್ನು ದಾಟಿದೆ.

ಪ್ರಧಾನ ಮಂತ್ರಿ ಮೋದಿ ಅವರು ಪೋಸ್ಟ್ ನ ಭಾಗವಾಗಿರುವುದು ವಿಶ್ವ ನಾಯಕರು ಸ್ವೀಕರಿಸುವ ಸಾಮಾಜಿಕ ಮಾಧ್ಯಮದಲ್ಲಿ ತೊಡಗಿಸಿಕೊಳ್ಳುವಿಕೆಗಳಲ್ಲಿನ ಏರುಗತಿಯನ್ನು ಇದು ತೋರಿಸುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Prime Modi ಉಕ್ರೇನ್ ನೊಂದಿಗೆ ಭಾರತವಿದೆ… : 4 ಒಪ್ಪಂದಗಳಿಗೆ ಸಹಿ

ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ಪರಸ್ಪರ ಮಾತುಕತೆಯಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ. ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡಲು ಸಹಾಯ ಮಾಡುವ ನವೀನ ಪರಿಹಾರವನ್ನು ಅಭಿವೃದ್ಧಿಪಡಿಸಲು ಎಲ್ಲಾ ಪಾಲುದಾರರ ನಡುವೆ ಪ್ರಾಯೋಗಿಕವಾಗಿ ಭಾಗಿಯಾಗುವಿಕೆಯ ಅಗತ್ಯವನ್ನು ಮೋದಿ ಪುನರುಚ್ಚರಿಸಿದ್ದಾರೆ.

Advertisement

“ಭಾರತ ಮತ್ತು ಉಕ್ರೇನ್ ನಡುವಿನ ಸಂವಾದ ಮತ್ತು ಸಂಬಂಧವನ್ನು ಬಲಪಡಿಸಲು ನಮ್ಮ ಸಭೆಯ ಆದ್ಯತೆಯಾಗಿದೆ” ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ಹಿಂದೆ ಆಕ್ಷೇಪಿಸಿದ್ದ ಝೆಲೆನ್ಸ್ಕಿ

ಕಳೆದ ಒಂದು ತಿಂಗಳ ಹಿಂದೆ ಪ್ರಧಾನಿ ಮೋದಿ ರಷ್ಯಾ ಪ್ರವಾಸದ ವೇಳೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಅಪ್ಪಿಕೊಂಡಿದ್ದರು.ಈಗ ಅವರನ್ನು ಅಪ್ಪಿಕೊಂಡಿದ್ದಾರೆ. ಪುಟಿನ್ ಅವರನ್ನು ಅಪ್ಪಿಕೊಂಡಿದ್ದಾಗ ಝೆಲೆನ್ಸ್ಕಿ ಟೀಕಾ ಪ್ರಹಾರ ನಡೆಸಿದ್ದರು. ‘ಉಕ್ರೇನ್‌ನ ಮಕ್ಕಳ ಆಸ್ಪತ್ರೆಯ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ ದಿನವೇ ಪುಟಿನ್ ಅವರನ್ನು ಮೋದಿ ತಬ್ಬಿಕೊಂಡಿರುವುದು ದೊಡ್ಡ ನಿರಾಶೆ ಮತ್ತು ಶಾಂತಿ ಪ್ರಯತ್ನಗಳಿಗೆ ವಿನಾಶಕಾರಿ ಹೊಡೆತ ಎಂದು ಹೇಳಿದ್ದರು.

ತಪ್ಪಾಗಿ ಅರ್ಥೈಸಿಕೊಂಡಿದ್ದರು
ಉಕ್ರೇನ್ ನಲ್ಲಿ ಮಾಧ್ಯಮಗಳು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ‘ಪ್ರಧಾನಿ ಮೋದಿ ಮತ್ತು ಪುಟಿನ್ ನಡುವಿನ ಸೌಹಾರ್ದತೆಯನ್ನು ಪಾಶ್ಚಿಮಾತ್ಯರು ತಪ್ಪಾಗಿ ಅರ್ಥೈಸಿಕೊಂಡಿದ್ದರು. ಪಾಶ್ಚಿಮಾತ್ಯ ಜನರಿಗೆ ಅರ್ಥವಾಗದ ಸಾಂಸ್ಕೃತಿಕ ಅಂತರವಿದೆ. ಇಂದು ಝೆಲೆನ್ಸ್ಕಿ ಪ್ರಧಾನಿ ಮೋದಿಯವರನ್ನು ತಬ್ಬಿಕೊಂಡಿದ್ದಾರೆ” ಎಂದು ಪ್ರತಿಕ್ರಿಯೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next