ಕೀವ್: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರಿದಿದೆ. ಉಕ್ರೇನಿಯನ್ ನಗರಗಳ ಮೇಲೆ ರಷ್ಯಾ ವೈಮಾನಿಕ ದಾಳಿ ನಡೆಸುತ್ತಿದೆ. ಶನಿವಾರ ಕಪ್ಪು ಸಮುದ್ರದ ಬಂದರು ನಗರವಾದ ಒಡೆಸಾದಲ್ಲಿ ಮೂರು ತಿಂಗಳ ಮಗು ಸೇರಿದಂತೆ ಎಂಟು ಜನರನ್ನು ರಷ್ಯಾ ತನ್ನ ವೈಮಾನಿಕ ದಾಳಿಯಲ್ಲಿ ಕೊಂದು ಹಾಕಿದೆ.
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ಮಿಲಿಟರಿಯ ವಿರುದ್ಧ ಕಿಡಿಕಾರಿದ್ದಾರೆ.
ಉಕ್ರೇನ್ ಸಶಸ್ತ್ರ ಪಡೆಗಳ ಪ್ರಕಾರ, ಎರಡು ರಷ್ಯಾದ ಕ್ಷಿಪಣಿಗಳು ಒಡೆಸಾದಲ್ಲಿ ಮಿಲಿಟರಿ ಸೌಲಭ್ಯ ಮತ್ತು ಎರಡು ವಸತಿ ಕಟ್ಟಡಗಳನ್ನು ಗುರಿಯಾಗಿಸಿ ಹೊಡೆದವು. ದಾಳಿಯಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 18 ಜನರು ಗಾಯಗೊಂಡಿದ್ದಾರೆ.
ಇದನ್ನೂ ಓದಿ:ಜಾಮೀನಿನಲ್ಲಿ ಹೊರ ಬಂದ ಕುಖ್ಯಾತ 1 ವರ್ಷದಲ್ಲಿ 60 ಅಪರಾಧ ನಡೆಸಿದ
ಯುಎಸ್ ಮತ್ತು ಯುರೋಪಿಯನ್ ರಾಷ್ಟ್ರಗಳು ಸರಬರಾಜು ಮಾಡಿದ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಒಡೆಸಾದಲ್ಲಿ ಲಾಜಿಸ್ಟಿಕ್ಸ್ ಟರ್ಮಿನಲ್ ಅನ್ನು ನಾಶಮಾಡಲು ಹೆಚ್ಚಿನ ನಿಖರ ಕ್ಷಿಪಣಿಗಳನ್ನು ಬಳಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.