Advertisement

ತಾಯಿ ಮಾಡಿದ ಬರ್ಫಿಯನ್ನು ಝೆಲೆನ್‌ಸ್ಕಿಗೆ ತಿನ್ನಿಸಿದ ಸುನಕ್‌

09:23 AM Jun 20, 2023 | sudhir |

ಲಂಡನ್‌: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಉಕ್ರೇನ್‌ ಅಧ್ಯಕ್ಷ ವ್ಲಾಡಿಮಿರ್‌ ಝೆಲೆನ್‌ಸ್ಕಿ ಅವರಿಗೆ ತಮ್ಮ ತಾಯಿ ಉಷಾ ಕೈಯಾರೆ ತಯಾರಿಸಿದ ಬರ್ಫಿಗಳನ್ನು ನೀಡಿದ್ದಾರೆ. ಬರ್ಫಿ ಉತ್ತರಭಾರತದ ವಿಶೇಷ ಸಿಹಿತಿನಿಸುಗಳಲ್ಲೊಂದು. ಈ ವಿಚಾರವನ್ನು ತಮ್ಮ ಇನ್ಸ್ಟಾ ಗ್ರಾಮ್‌ ರೀಲ್ಸ್‌ನಲ್ಲಿ ಸುನಕ್‌ ಹಂಚಿಕೊಂಡಿದ್ದಾರೆ.

Advertisement

ಇದಕ್ಕೂ ಒಂದು ಹಿನ್ನೆಲೆಯಿದೆ. ಕಳೆದ ತಿಂಗಳು ದಿಢೀರನೆ ರಿಷಿ ಸುನಕ್‌ ತಮ್ಮ ಹುಟ್ಟಿದೂರು ಸೌಥಾಂಪ್ಟನ್‌ಗೆ ಭೇಟಿ ನೀಡಿದ್ದರು. ಆಗವರು ನೂತನ ಆರೋಗ್ಯ ಯೋಜನೆಯೊಂದನ್ನು ಉದ್ಘಾಟಿಸಿದ್ದರು. ಆ ವೇಳೆ ಅವರು ತಮ್ಮ ತಾಯಿ ವಾರದ ಹಿಂದೆ ನಡೆಸಿದ್ದ ಫಾರ್ಮಸಿಗೂ ಭೇಟಿ ನೀಡಿದ್ದರು. ಈ ದಿಢೀರ್‌ ಭೇಟಿಯನ್ನು ತಮಗೆ ಹೇಳಲಿಲ್ಲ ಎಂಬ ಕಾರಣಕ್ಕೆ ಸುನಕ್‌ ತಂದೆತಾಯಿ ತೀವ್ರ ಬೇಸರಗೊಂಡಿದ್ದರಂತೆ. ಆಗ ತಾಯಿ ಬರ್ಫಿ ಕೊಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಮುಂದೊಂದು ದಿನ ಫುಟ್ ಬಾಲ್‌ ಪಂದ್ಯದ ವೇಳೆ ತಾಯಿ ಅದನ್ನು ನೀಡಿದರು. ಅದನ್ನೇ ಝೆಲೆನ್‌ಸ್ಕಿಗೆ ನೀಡಿದೆ ಎಂದು ಸುನಕ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next