Advertisement

ಶೀಘ್ರ ‘ದಿ ಕಾಶ್ಮೀರ್ ಫೈಲ್ಸ್’ಝೀ 5 ನಲ್ಲಿ ಡಿಜಿಟಲ್ ಪ್ರೀಮಿಯರ್

02:41 PM Apr 25, 2022 | Team Udayavani |

ಮುಂಬಯಿ :ಭಾರಿ ಯಶಸ್ಸು ಕಂಡ “ದಿ ಕಾಶ್ಮೀರ್ ಫೈಲ್ಸ್” ಮೇ 13 ರಂದು ಡಿಜಿಟಲ್ ಪ್ರೀಮಿಯರ್ ಆಗಲಿದೆ ಎಂದು ಓಟಿಟಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಝೀ 5 ಮಂಗಳವಾರ ಪ್ರಕಟಿಸಿದೆ.

Advertisement

ವಿವೇಕ್ ಅಗ್ನಿಹೋತ್ರಿ ಬರೆದು ನಿರ್ದೇಶಿಸಿದ ಮತ್ತು ಝೀ ಸ್ಟುಡಿಯೋಸ್ ನಿರ್ಮಿಸಿದ ಈ ಚಲನಚಿತ್ರದಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಕಾಶ್ಮೀರಿ ಹಿಂದೂಗಳನ್ನು ವ್ಯವಸ್ಥಿತವಾಗಿ ಹತ್ಯೆಗೈದ ನಂತರ ಹಿಂದೂಗಳು ವಲಸೆ ಹೋಗುವ ಕಥಾ ಹಂದರದ ಮೂಲಕ ಭಾರಿ ಸುದ್ದಿ ಮಾಡಿತ್ತು.

ಚಿತ್ರದಲ್ಲಿ ಹಿರಿಯ ನಟರಾದ ಅನುಪಮ್ ಖೇರ್ ಮತ್ತು ಮಿಥುನ್ ಚಕ್ರವರ್ತಿ ಹಾಗೂ ಪಲ್ಲವಿ ಜೋಶಿ ಮತ್ತು ದರ್ಶನ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

“ದಿ ಕಾಶ್ಮೀರ್ ಫೈಲ್ಸ್’ ನಮ್ಮ ಜನರೊಂದಿಗೆ ವರ್ಷಗಳ ಹಿಂದೆ ನಡೆದ ಘಟನೆಯ ಚಿತ್ರಣವಾಗಿದೆ ಮತ್ತು ಇನ್ನೂ ಅನೇಕರಿಗೆ ತಿಳಿದಿಲ್ಲ.. ಚಿತ್ರವು ರಾಷ್ಟ್ರದಾದ್ಯಂತ ಮೆಚ್ಚುಗೆ ಗಳಿಸಿದೆ ಮತ್ತು ಈಗ ಅದನ್ನು ದೊಡ್ಡ ಪರದೆಯ ಮೇಲೆ ವೀಕ್ಷಿಸಲು ಸಾಧ್ಯವಾಗದವರಿಗೆ, ಕಾಶ್ಮೀರ ಫೈಲ್ಸ್ ಪ್ರಪಂಚದಾದ್ಯಂತ ಝೀ 5 ನಲ್ಲಿ ಲಭ್ಯವಿರುತ್ತದೆ” ಎಂದು ಖೇರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ದಿ ಕಾಶ್ಮೀರ್ ಫೈಲ್ಸ್” ಭಾರತ ಮತ್ತು ಇತರ ಹಲವು ದೇಶಗಳಲ್ಲಿ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ಲಭ್ಯವಿರುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next