Advertisement

ಮಹತ್ವದ ಸೇನಾ ಕಾರ್ಯಾಚರಣೆ; ಘಾಜ್ವಾತ್ ವುಲ್ ಹಿಂದ್ ಕಮಾಂಡರ್, ಉಗ್ರ ಹಮೀದ್ ಬಲಿ

09:16 AM Oct 24, 2019 | Team Udayavani |

ಶ್ರೀನಗರ್: ಮಹತ್ವದ ಕಾರ್ಯಾಚರಣೆಯಲ್ಲಿ ಭಾರತೀಯ ಭದ್ರತಾ ಪಡೆ ನಡೆಸಿದ ಗುಂಡಿನ ದಾಳಿಗೆ ಕಾಶ್ಮೀರದ ಅಲ್ ಖೈದಾ ಶಾಖೆಯ ಹಮೀದ್ ಲೆಲ್ಹಾರಿ ಬಲಿಯಾಗಿರುವ ಘಟನೆ ಬುಧವಾರ ನಡೆದಿದೆ. ಇತ್ತೀಚೆಗಷ್ಟೇ ಉಗ್ರ ಝಾಕಿರ್ ಮೂಸಾ ಸೇನಾ ಗುಂಡಿನ ದಾಳಿಗೆ ಬಲಿಯಾದ ನಂತರ ಹಮೀದ್ ನನ್ನು ಮುಖ್ಯಸ್ಥನನ್ನಾಗಿ ಉಗ್ರ ಸಂಘಟನೆ ಆಯ್ಕೆ ಮಾಡಿತ್ತು.

Advertisement

ಜಮ್ಮು ಕಾಶ್ಮೀರದ ಆವಂತಿಪೋರಾ ಜಿಲ್ಲೆಯಲ್ಲಿ ಮಂಗಳವಾರ ಸಂಜೆಯಿಂದ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ದಾಳಿ ಆರಂಭಗೊಂಡಿತ್ತು. ಈ ಸಂದರ್ಭದಲ್ಲಿ ಭದ್ರತಾ ಪಡೆಯ ದಾಳಿಯಲ್ಲಿ ಪುಲ್ವಾಮಾ ನಿವಾಸಿ, ಉಗ್ರ ಹಮೀದ್ ಲಾಲ್ಹಾರಿ(30) ಬಲಿಯಾಗಿರುವುದಾಗಿ ವರದಿ ತಿಳಿಸಿದೆ.

2019ರ ಮೇ ತಿಂಗಳಿನಲ್ಲಿ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಜಮ್ಮು ಕಾಶ್ಮೀರದ ಅಲ್ ಖೈದಾ ಶಾಖೆಯ ಮುಖ್ಯಸ್ಥ, ಉಗ್ರ ಝಾಕಿರ್ ಮೂಸಾ ಬಲಿಯಾಗಿದ್ದ. ಬಳಿಕ ಅಲ್ ಖೈದಾ ನಿಕಟವರ್ತಿ ಸಂಘಟನೆಯಾದ ಅನ್ಸಾರ್ ಘಾಝ್ವಾತ್ ವುಲ್ ಹಿಂದ್(ಎಜಿಎಚ್) ಗೆ ಲೆಲ್ಹಾರಿಯನ್ನು ನೂತನ ಕಮಾಂಡರ್ ನನ್ನಾಗಿ ನೇಮಕ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next