Advertisement

India vs Pakistan; ಆಕ್ರೋಶಕ್ಕೆ ಹೆದರಿ ಪಾಕ್‌ ನಿರೂಪಕಿ ವಾಪಸ್‌?

12:19 AM Oct 10, 2023 | Team Udayavani |

ಹೊಸದಿಲ್ಲಿ: ಐಸಿಸಿ ಡಿಜಿಟಲ್‌ ತಂಡದಲ್ಲಿದ್ದ, ಭಾರತದಲ್ಲಿ ಪಾಕಿಸ್ಥಾನದ ಪಂದ್ಯಗಳನ್ನು ವರದಿ ಮಾಡಲು ಬಂದಿದ್ದ ನಿರೂಪಕಿ ಝೈನಾಬ್‌ ಅಬ್ಬಾಸ್ ಸ್ವದೇಶಕ್ಕೆ ಮರಳಿದ್ದಾರೆ. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

Advertisement

ಝೈನಾಬ್‌ ಹಿಂದೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಭಾರತದ ವಿರುದ್ಧ ಪೋಸ್ಟ್‌ ಗಳನ್ನು ಹಾಕಿದ್ದರು. ಇದು ಭಾರತೀಯ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿತ್ತು. ಈ ಹಿನ್ನೆಲೆಯಲ್ಲೇ ಅವರು ದೇಶಕ್ಕೆ ಮರಳಿದ್ದಾರೆ ಎನ್ನಲಾಗಿದೆ. ಆದರೆ ಐಸಿಸಿ ಮಾತ್ರ ಆಕೆ ಖಾಸಗಿ ಕಾರಣಗಳಿಂದ ತಮ್ಮ ದೇಶಕ್ಕೆ ಮರಳಿದ್ದಾರೆ ಎಂದು ಸ್ಪಷ್ಟನೆ ನೀಡಿದೆ.

ಝೈನಾಬ್‌ ಪಾಕಿಸ್ಥಾನದ ಮೂರು ಪಂದ್ಯಗಳ ವರದಿಗಾಗಿ ಭಾರತಕ್ಕೆ ಬಂದಿದ್ದರು. ಅ. 6ರಂದು ಹೈದರಾಬಾದ್‌ನಲ್ಲಿ ನೆದರ್ಲೆಂಡ್ಸ್‌ ವಿರುದ§ದ ಪಾಕ್‌ ಪಂದ್ಯದಲ್ಲೂ ಕಾಣಿಸಿಕೊಂಡಿದ್ದರು. ಬೆಂಗಳೂರು, ಚೆನ್ನೈ, ಅಹ್ಮದಾಬಾದ್‌ಗೂ ಅವರು ಹೋಗಬೇಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next